ಶಿವಮೊಗ್ಗ : ಸಂಹವನ ಕ್ಷೇತ್ರಗಳು ಬೆಳೆಯಬೇಕೆಂದರೆ ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಬೇಕು. ಈ ಎರಡು ಪುಸ್ತಕಗಳು ಸಂಶೋಧನೆಯ ಸಮಗ್ರ ಮಾಹಿತಿಯನ್ನು ನೀಡಿದೆ, ವಿಧ್ಯಾರ್ಥಿಗಳಿಗೆ ಉಪಯುಕ್ತವಾದ ಪುಸ್ತಕಗಳು ಎಂದು ಪ್ರೊ ಡಿ. ಎಸ್ ಪೂರ್ಣಾನಂದ ಇವರು ಕೃತಿಗಳ ಕುರಿತು ಮಾತನಾಡಿದರು.
ಸೆ. 1 ರಂದು ಕುವೆಂಪು ವಿಶ್ವ ವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಝೂಮ್ ಆನ್ ಲೈನ್ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಸತೀಶ್ ಕುಮಾರ್ ಅಂಡಿಂಜೆಯವರು ರಚಿಸಿದ ‘ ಸಮೂಹ ಮಾಧ್ಯಮ ಸಂಶೋಧನೆ ‘ ಮತ್ತು ‘ ಮಾಧ್ಯಮ ಲೋಕ ‘ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಈ ಪುಸ್ತಕಗಳು ಹಲವಾರು ವಿಷಯಗಳನ್ನು ಒಳಗೊಂಡಿದೆ. ಪತ್ರಿಕೋದ್ಯಮ, ಜಾನಪದ, ಸಾಹಿತ್ಯ, ಸಂಸ್ಕೃತಿ ಹಾಗೂ ಇತ್ತೀಜಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಡಿ ತಕ್ಕಂತಹ ಋಣಾತ್ಮಕ ಮತ್ತು ಧನಾತ್ಮಕ ಬದಲಾವಣೆಗಳ ಕುರಿತು ವಿವರಿಸಿದ್ದಾರೆ.
ಸಂಶೋಧನೆಯಲ್ಲಿ ದತ್ತಾಂಶವನ್ನು ಹೇಗೆ ವಿವರಿಸಬಹುದು ಅನ್ನೋದನ್ನ ಬಹಳ ಸುಲಭವಾಗಿ ಮತ್ತು ಎಲ್ಲರಿಗೂ ಅರ್ಥಾಗುವಂತೆ ವಿವರಿಸಲಾಗಿದೆ ಎಂದರು.
ವಿಧ್ಯಾರ್ಥಿಗಳಿಗೆ ಅನುಕೂಲ ಆಗುವ ಸಲುವಾಗಿ ಮತ್ತು ಇತ್ತಿಜಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಉಪಯುಕ್ತವಾಗಲಿ ಅನ್ನೋ ನಿಟ್ಟಿನಲ್ಲಿ ಪುಸ್ತಕ ಗಳನ್ನು ಪರಿಚಯಿಲಾಯಿತು ಎಂದು ಡಾ ಸತೀಶ್ ಅಂಡಿಂಜೆ ಅವರು ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಯ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ವಿಘ್ನೇಶ್ ಎನ್. ಭಟ್ ‘ಸಮೂಹ ಮಾಧ್ಯಮ ಸಂಶೋಧನೆ’ ಮತ್ತು ‘ ಮಾಧ್ಯಮ ಲೋಕ ‘ ಕೃತಿಗಳ ಲೋಕಾರ್ಪಣೆ ಗೈದರು.
ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರು , ಬೇರೆ ಬೇರೆ ಕಾಲೇಜಿನ ಅಧ್ಯಾಪಕರು ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.