ಶಿವಮೊಗ್ಗ: ಕೊಂಕಣಿ ಸಾಹಿತ್ಯ ಜಗತ್ತಿನ ಮಹಾನ್ ಕೊಂಕಣಿ ಸಂಶೋಧಕ, ಲೇಖಕ, ಕನ್ನಡ – ಕೊಂಕಣಿ ಪಂಡಿತ ಮಂದರ್ಕೆ ಮಾಧವ ಪೈಶಿವಮೊಗ್ಗ ಇವರು (91 ನೇ ವರ್ಷ) ಅಸೌಖ್ಯ ದಿಂದ ನವೆಂಬರ್ 17 ನೇ ತಾರೀಖಿನಂದು ಶಿವಮೊಗ್ಗದ ತಮ್ಮ ಸ್ವಗೃಹದಲ್ಲಿನಿಧನರಾದರು.
ಇವರು ವಿಶ್ವ ಕೊಂಕಣಿ ಕೇಂದ್ರದಿಂದ ಪ್ರಕಟವಾದ ‘ಕನ್ನಡ-ಕೊಂಕಣಿ ರತ್ನ ಕೋಶ’ ಮತ್ತು ‘ಕೊಂಕಣಿ ಶಬ್ದ ವಿಹಾರ’ ‘ಉಪನಿಷದ’ ಮುಂತಾದ ಪುಸ್ತಕಗಳ ಸಂಪಾದಕರಾಗಿ ಕೊಂಕಣಿ ಸಾಹಿತ್ಯದ ಕಾರ್ಯಾಗಾರದಲ್ಲಿ ಹಾಗೂ ಕೊಂಕಣಿ ಪುಸ್ತಕಗಳನ್ನು ಪ್ರಕಟಿಸುವಲ್ಲಿ ತಮ್ಮ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರು ರಚಿಸಿದ ಹಲವಾರು ಕೊಂಕಣಿ ಭಾಶಾ ಕೃತಿಯ ಪುಸ್ತಗಳು ಹಾಗೂ ಕೊಂಕಣಿ ತದ್ಭವ ಸಂಸ್ಕೃತ ಕೋಶ, ಕನ್ನಡ-ಕೊಂಕಣಿ ಅರ್ಥಕೋಶಗಳು ಪ್ರಕಟವಾಗಿವೆ. ಇವರು ಸಂಸ್ಕೃತ, ಕನ್ನಡ, ಹಾಗೂ ಕೊಂಕಣಿ ಭಾಷೆಗಳಿಗೆ ನೀಡಿದಂತಹ ಸೇವೆಯನ್ನು ಪರಿಗಣಿಸಿ 2012 ಇವರಿಗೆ “ಕೊಂಕಣಿ ಶಬ್ದ ರತ್ನಾಕರ” ಬಿರುದು ನೀಡಿ ಸನ್ಮಾನಿಸಲಾಗಿದೆ.
ಹಾಗೂ ಇವರು ಸಾಹಿತ್ಯ ಲೋಕಕ್ಕೆ ನೀಡಿದ ಜೀವಮಾನ ಸಾಧನಾ ಸೇವೆಯನ್ನು ಪರಿಗಣಿಸಿ 2014 ಇಸವಿ ಇವರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಕೊಟ್ಟು ಸನ್ಮಾನಿಸಲಾಗಿದೆ.
ಇವರ ನಿಧನವು ಕೊಂಕಣಿ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ಬಸ್ತಿ ವಾಮನಶೆಣೈ ಹಾಗೂ ಕೇಂದ್ರದ ಎಲ್ಲಾ ಪದಾಧಿಕಾರಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.
‘ಕೊಂಕಣಿ ಶಬ್ದ ರತ್ನಾಕರ’ ಮಂದರ್ಕೆ ಮಾಧವ ಪೈ ನಿಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.