ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿದ್ದು, ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನೂ ಎರಡು ದಿನ ಸೆಕ್ಷನ್ 144 ಹಾಕಿ ನಿಷೇಧಾಜ್ಞೆ ಮುಂದುವರಿಸಿದ್ದು, ಇದೀಗ ನಕ್ಸಲ್ ನಿಗ್ರಹ ದಳ ಶಿವಮೊಗ್ಗಕ್ಕೆ ಆಗಮಿಸಿದೆ.
ಉಡುಪಿ ಜಿಲ್ಲೆ ಕಾರ್ಕಳದ ಎಎನ್‌ಎಫ್ ಕ್ಯಾಂಪ್‌ನಿಂದ ನಿಗ್ರಹ ದಳ ಬಂದಿದ್ದು, ಎರಡು ಡ್ರೋನ್ ಕ್ಯಾಮೆರಾ ತರಲಾಗಿದೆ. ಡ್ರೋನ್ ಕ್ಯಾಮರಾ ಐದು ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತದೆ. ಜನರ ಚಲನವಲನ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗುತ್ತದೆ.
ಕರ್ಫ್ಯೂ ಜಾರಿಯಲ್ಲಿರುವಾಗ ಯಾರಾದರೂ ಗುಂಪುಗಳಲ್ಲಿ ಓಡಾಟ ಮಾಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಿಸುವುದು, ಸಾರ್ವಜನಿಕರಿಗೆ ತೊಂದರೆ ನೀಡಿದರೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗುತ್ತದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಹಾರಾಟ ಮಾಡಲಿದ್ದು, ಸಂಪೂರ್ಣ ನಿಗಾ ಇಡಲಾಗಿದೆ.