News Kannada
Tuesday, December 06 2022

ಶಿವಮೊಗ್ಗ

ಶಿವಮೊಗ್ಗ: ಬ್ಯಾರೀಸ್ ಸಿಟಿ ಸೆಂಟರ್‌ನಲ್ಲಿ ಆರ್ಕೇಡ್ ಗೇಮಿಂಗ್ ಝೋನ್ ಲೋಕಾರ್ಪಣೆ

Photo Credit : News Kannada

ಶಿವಮೊಗ್ಗ, ಮಾ.28 : ಶಿವಮೊಗ್ಗದ ಪ್ರಪ್ರಥಮ ಆರ್ಕೇಡ್ ಗೇಮಿಂಗ್ ಝೋನ್ ಮಕ್ಕಳಿಂದ ಹಿಡಿದು ವಯಸ್ಕರನ್ನು ಆಕರ್ಷಿಸುತ್ತಿದೆ. ಒಂದೇ ಸೂರಿನಡಿ ವಿವಿಧ ಹತ್ತು ಹಲವು ಗೇಮ್ಸ್‌ಗಳು ಲಭ್ಯವಿದ್ದು, ಚಿಣ್ಣರಿಂದ ಹಿಡಿದು ವಯಸ್ಕರನ್ನು ಕೈ ಬೀಸಿ ಕರೆಯುತ್ತಿದೆ.

ಹೌದು, ನಗರದ ಎಸ್‌ಎನ್ ಮಾರ್ಕೆಟ್‌ನಲ್ಲಿರುವ ಬ್ಯಾರೀಸ್ ಸಿಟಿ ಸೆಂಟರ್‌ನಲ್ಲಿ ನೂತನವಾಗಿ ಆರ್ಕೇಡ್ ಗೇಮಿಂಗ್ ಝೋನ್ ಇಂದು ಅಧಿಕೃತವಾಗಿ ಪ್ರಾರಂಭವಾಗಿದೆ.

ಮಾಲ್ ನಲ್ಲಿ ಮಕ್ಕಳ ಇಂಡೋರ್ ಗೇಮ್ ಗಳ ಲೋಕವನ್ನೇ ಧರೆಗಿಳಿಸಲಾಗಿದೆ. ಮಕ್ಕಳಿಗಾಗಿ ಪಕ್ಕ ಮನರಂಜನಾವೇ ಈ ಬಿ-ಫನ್ ಆಗಿದೆ.ಬಿ-ಫನ್ ನಲ್ಲಿ 50 ಕ್ಕೂ ಹೆಚ್ಚೂ ಆಟಗಳನ್ನ ಇಡಲಾಗಿದೆ. 3 ವರ್ಷದ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಈ ಬಿಫನ್ ಎಂಬ ಆಟದ ಲೋಕ ಮಕ್ಕಳನ್ನ ಕೈಬೀಸಿ ಕರೆಯುತ್ತಿದೆ. ಇಂಡೋರ್ ಕ್ರಿಕೆಟ್, ಬೌಲಿಂಗ್,ಹಾಕಿ ಡ್ಯಾಶಿಂಗ್ ಕಾರ್, ಕಿಡ್ಡಿ ರೈಡ್ಸ್  ಸಾಫ್ಟ್ ಪ್ಲೇ ಏರಿಯಾ, ಕಿಡ್ಡಿ ಟ್ರೈನ್ ಹೀಗೆ ಆಟಗಳ ಸರಮಾಲೆಗಳನ್ನ ಮಕ್ಕಳು ಆಡಬಹುದಾಗಿದೆ. ಆಟದ ಮೇಲೆ ದರವನ್ನ ನಿಗದಿ ಮಾಡಲಾಗಿದೆ. 30 ರೂ. ವಿನಿಂದ 100 ರೂ.ಗಳ ವರೆಗಿನ ಆಟವನ್ನ ಇಲ್ಲಿ ಆಡಬಹುದಾಗಿದೆ. ಮಾಲಿನ ಮೂರನೇ ಮಹಡಿಯಲ್ಲಿ ಈ ಬಿ-ಫನ್ ಲೋಕಾರ್ಪಣೆಗೊಂಡಿದೆ.

ಮತ್ತೊಂದು ವಿಶೇಷವೆಂದರೆ ಅರ್ಧ ಗಂಟೆ ಅಥವಾ ಒಂದು ಗಂಟೆಗೆ ಮಕ್ಕಳನ್ನ ಇಲ್ಲಿ ಆಡಲು ಬಿಟ್ಟು ಮಾಲ್ ನಲ್ಲಿ ಶಾಪಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮೂರು ವರ್ಷದ ಮೇಲ್ಪಟ್ಟ ಮಕ್ಕಳನ್ನ ಹಿಡಿದುಕೊಂಡು ಬರುವ ದಂಪತಿಗಳಿಗೆ ಶಾಪಿಂಗ್ ಗೆ ಕಿರಿಕಿರಿ ಉಂಟಾಗುತ್ತದೆ ಎಂದು ಭಾವಿಸಿದಲ್ಲಿ ಈ ಬಿಫನ್ ನಲ್ಲಿ ಬಿಟ್ಟು ಹೋಗಬಹುದು. ಒಂದು ಗಂಟೆಗೆ 100 ರೂ ದರ ನಿಗದಿಪಡಿಸಲಾಗಿದೆ.

ಸಿದ್ದಕ್ ಬ್ಯಾರಿ ಅವರಿಂದ ನಿರ್ಮಾಣಗೊಂಡಿರುವ ಬಿ-ಫನ್ ನನ್ನ ಸಚಿವ ಈಶ್ವರಪ್ಪನವರ ಪುತ್ರ ಕೆ.ಈ.ಕಾಂತೇಶ್, ಮೇಯರ್ ಸುನೀತಾ ಅಣ್ಣಪ್ಪನವರ ಮೂಲಕ ಉದ್ಘಾಟನೆ ಗೊಂಡಿದೆ. ಮಕ್ಕಳ ಬೇಸಿಗೆ ರಜೆಗೆ ಬಿ-ಫನ್ ಒಳ್ಳೆಯ ಆಟದ ಲೋಕವಾಗಿ ಪರಿಣಮಿಸಬಹುದು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್ ದತ್ತಾತ್ರಿ ಜ್ಯೋತಿಪ್ರಕಾಶ್ ಪಾಲಿಕೆ ಸದಸ್ಯರಾದ ಅನಿತಾ ರವಿಶಂಕರ್. ವಿಶ್ವಾಸ್ ಮೊದಲಾದವರಿದ್ದರು.

See also  ಮನೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ: ಕೆ.ಎಸ್.ಈಶ್ವರಪ್ಪ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು