ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಧರ್ವ ಬಾರ್ ಹತ್ತಿರ ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಪುಚ್ಚ ಕಿರಣ್(23) ಎಂಬುವನನ್ನು ಕೊಲೆ ಮಾಡಲಾಗಿದೆ.
ರಾತ್ರಿ ಸ್ನೇಹಿತರು ಸೇರಿ ಮದ್ಯ ಸೇವನೆ ಮಾಡಿ ಪಾರ್ಟಿ ನಡೆಸುತ್ತಿದ್ದಾಗ ಕಿರಣ್ ತನಗೂ ಪಾರ್ಟಿ ಕೊಡಿಸುವಂತೆ ಅಮಲಿನಲ್ಲಿ ಜಗಳ ತೆಗೆದು ಕಿರಿಕ್ ಮಾಡಿದ್ದಾನೆ. ಈ ವೇಳೆ ಜಗಳ ಪ್ರಾರಂಭವಾಗಿ ಬಾಟಲಿ ಹಾಗೂ ಚಾಕುವಿನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಪ್ರಜ್ವಲ್ ಮತ್ತು ಕಾರ್ತಿಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.