ಶಿವಮೊಗ್ಗ: ಶಿವಮೊಗ್ಗದಲ್ಲಿ ಬ್ರಾತೃತ್ವ ಹಾಗೂ ಶಾಂತಿ ನೆಲೆಗಾಗಿ ಇಂದು 61 ಸಂಘಟನೆಗಳು ನಗರದಲ್ಲಿ ಕಾಲ್ನಡಿಗೆ ನಡೆಸಲಾಯಿತು. ಕಾಲ್ನೆಡಿಗೆಯು ಬಸ್ ನಿಲ್ದಾಣದ ಬಳಿಯಿರುವ ಅಶೋಕ ವೃತ್ತದಿಂದ ಹೊರಟು ಸೈನ್ಸ್ ಮೈದಾನದ ಎದರಿನ ಕರ್ನಾಟಕ ಪಬ್ಲಿಕ್ ಶಾಲೆಯ ಬಳಿಯಿರುವ ಬಸ್ ನಿಲ್ದಾಣಕ್ಕೆ ತಲುಪಿ ಸಭೆ ನಡೆಸಿದರು.
ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು. ಈ ಮೊದಲು ನಗರದ ಮೂರು ಜಾಗದಿಂದ ಕಾಲ್ನಡಿಗೆ ಜಾಥ ನಡೆಯಬೇಕತ್ತು. ಆದರೆ ಈ ಮೂರು ಜಾಗವನ್ನ ರದ್ದುಗೊಳಿಸಿ ಬಸ್ ನಿಲ್ದಾಣದಿಂದ ಹೊರಟಿತು. ಸಭೆಯಲ್ಲಿ ಮೌಲಾನಾ ಶಾಹುಲ್ ಹಮೀದ್ ಮಾತನಾಡಿ, ಕಾಲ್ನಡಿಗೆ ಜಾಥಾದಲ್ಲಿ ಸ್ವಾಮಿಜಿಗಳು, ಫಾದರ್ ಮತ್ತು ಮುಸ್ಲೀಂ ಧರ್ಮಗುರುಗಳು ಸೇರಿ ಕಾಲ್ನಡಿಗೆ ನಡೆಸಿದೆವು.ನಮ್ಮಲ್ಲಿ ಇಲ್ಲದ ಕೋಮು ಸಂಘರ್ಷ ನಿಮ್ಮಲ್ಲಿ ಯಾಕೆ ಎಂದರು.
ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಮಾತನಾಡಿ, ಯುವಕರಿಗೆ ಮನೆಯ ಮಕ್ಕಳಿಗೆ ಸರಿದಾರಿಗೆ ತರುವ ಜವಬ್ದಾರಿ ಪೋಷಕರ ಮೇಲಿದೆ. ಸಂಪತ್ತನ್ನ ಗಳಿಸಿ ಹೊತ್ತುಕೊಂಡು ಹೋಗ್ತೀರಾ, ಹಾಗಾಗಿ ಮನುಷ್ಯನಲ್ಲಿ ಮಾನವೀಯತೆ ಇಟ್ಟುಕೊಂಡು ಬದಕಬೇಕು. ದಯೆ ಇಲ್ಲದ ಧರ್ಮ ಜಗತ್ತಿನಲ್ಲಿ ಇಲ್ಲ. ಹಾಗಾಗಿ ಸೌಹರ್ದತವಾಗಿ ಬದುಕಬೇಕು ಎಂದರು.
ಯಾವುದೇ ಧರ್ಮ ಇನ್ನೊಬ್ಬರಿಗೆ ಹಿಂಸೆ ಕೊಡು ಎನ್ನಲ್ಲ ಆದರೂ ಧರ್ಮದ ಹೆಸರಿನಲ್ಲಿ ಗಲಾಟೆ ನಡೆಸಲಾಗುತ್ತಿದೆ. ಇನ್ನು ಮುಂದೆಯಾದರೂ ನಾವೆಲ್ಲ ಎಚ್ಚೆತ್ತುಕೊಂಡು ಬದುಕಬೇಕು ಎಂದರು.
ಚಿತ್ರದುರ್ಗ ತರಳವಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯಮಹಾಸ್ವಾಮಿ ಮಾತನಾಡಿ, ಶಾಲಾ ಕಾಲೇಜಿನ ಶಾಲಾ ಮಕ್ಕಳು ಭಾಗವಹಿಸದಿದ್ದರೂ ನಾವೆಲ್ಲಾ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳಾಗಿ ಭಾಗವಹಿಸಿದ್ದೇವೆ ಎಂದರು.
ಕೊಳಕು ದೃಷ್ಠಿ ಹೋಗಬೇಕು ಒಳ್ಳೆಯ ದೃಷ್ಠಿ ನೆಲಸಬೇಕು. ಯಾರ ವಿರುದ್ಧವೂ ದ್ವೇಷ ಸಾರುವುದು ಬೇಡ. ವೇದದ ಕಾಲದಿಂದಲೂ ಶಾಂತಿಯ ಕುರಿತು ಉಲ್ಲೇಖವಿದೆ. ನೀವು ದುಡಿದಿದ್ದನ್ನ ನೀವೆ ತಿನ್ನಬೇಕು ಹಾಗೂ ಹಂಚಿಕೊಂಡು ತಿನ್ನಬೇಕು. ಕೈಕಾಲು ಕಳೆದು ಕೊಂಡು ಪರಾಧೀನರಾಗಿ ಊಟ ಸೇವಿಸದಂತೆ ಆಗಬಾರದು ಎಂದರು.
ಜಗತ್ತಿನ ಎಲ್ಲಾ ಧರ್ಮಗಳು ಸಾರುವುದು ಪ್ರೀತಿ, ಶಾಂತಿ, ಸೌಹಾರ್ಧತೆಯನ್ನ. ನಾವಾಗಲಿ, ಫಾದರ್ ಆಗಲಿ ಮೌಲ್ವಿಗಳಾಗಲಿ ಆರಾಧಿಸುವುದು ಒಬ್ಬನನ್ನೇ. ದೇವರು ಮಂದಿರದಲ್ಲಿ ಇಲ್ಲ ಮಸೀದಿಯಲ್ಲಿ ಇಲ್ಲ ಖಾಬಾದಲ್ಲಿ ಇಲ್ಲ ಕೈಲಾಸದಲ್ಲೂ ಇಲ್ಲ ಎಂಬ ಉಲ್ಲೇಖ ಎಲ್ಲಾ ಧಾರ್ಮಿಕ ಗ್ರಂಥದಲ್ಲಿದೆ. ನಿಮ್ಮಲ್ಲೇ ಭಗವಂತನನ್ನ ಕಾಣಬೇಕು. ಆಗ ಮಾತ್ರ ಸ್ವಾರ್ಥ ದೂರವಾಗಿ ಸಾಮಾಜಿಕವಾಗಿ ಬದುಕು ಸಾಧ್ಯವಾಗುತ್ತದೆ ಎಂದರು. ಶಿವಮೊಗ್ಗದಲ್ಲಿ ನಡೆದ ಕಾಲ್ನಡಿಗೆ ಇಷ್ಟಕ್ಕೆ ಮುಗಿಯಬಾರದು.
ನಾಳೆ ಯಾವ ಅನಾಹುತಗಳು ನಡೆಯಬಾರದು, ಆ ಜವಬ್ದಾರಿಯನ್ನ ನಾವೆಲ್ಲಾ ಹೊತ್ತುಕೊಳ್ಳೋಣವೆಂದರು. ಅಲ್ಲಮ ಪ್ರಭು, ಅಕ್ಕಮಹಾದೇವಿ ಕುವೆಂಪು ಹುಟ್ಟಿದ ನಾಡಿನಲ್ಲಿ ಅಶಾಂತಿ ಒಳ್ಳೆಯದಲ್ಲ. ಎಲ್ಲಾ ಧರ್ಮದಲ್ಲಿಯೂ ಶಾಂತಿ ಬಯಸುವರಿದ್ದಾರೆ. ಮುಂದೆ ಬರುವ ಎಲ್ಲಾ ಹಬ್ಬ ಹರಿದಿನಗಳಲ್ಲಿ ಎಲ್ಲಾ ಧರ್ಮಗಳು ಸೇರಿ ಆಚರಿಸುವಂತಾಗಬೇಕು. ಹಬ್ಬ ಹರಿದಿನಗಳು ಬಂದರೆ ಕುಣಿದು ಕುಪ್ಪಳಿಸುವಂತಾಗಬೇಕು. ತಲೆ ಕತ್ತರಿಸುವಂತಾಗಬಾರದು ಎಂದು ಕರೆ ನೀಡಿದರು.
ದೇಶದ ಸ್ವಾತಂತ್ರ್ಯಕ್ಕೆ ಹಿಂದೂ ಮುಸ್ಲೀಂರ ರಕ್ತ ಹರಿದಿದೆ. ಹಾಗಾಗಿ ಸ್ವೇಚಾಚಾರ್ಯ ಆಗಬಾರದು. ನಮ್ಮ ನಡಿಗೆ ಶಾಂತಿಯ ಕಡಿಗೆ ಎಂಬದು ನಿರಂತರವಾಗಿರಬೇಕು. ದಾವಣಗೆರೆಯ 1992 ರಲ್ಲಿ ನಡೆದ ಕೋಮು ಗಲಭೆ ನಡೆದಾಗ 144 ಸೆಕ್ಷನ್ ಇದ್ದಾಗಲೂ ಶಾಂತಿ ಯ ಪಾದಯಾತ್ರೆ ನಡೆಸಿದ್ದೇವೆ. ತಪ್ಪುಗಳಾಗುತ್ತವೆ. ನಾವೆಲ್ಲರೂ ತಪ್ಪನ್ನ ಕ್ಷಮಿಸಿ ತಿದ್ದುವ ಕೆಲಸ ಮಾಡೋಣವೆಂದರು.