News Kannada
Monday, September 26 2022

ಶಿವಮೊಗ್ಗ

ಶಿವಮೊಗ್ಗ: ಕೃಷಿ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ - 1 min read

Shimoga: Applications invited for best book award on agriculture, science, technology and medicine
Photo Credit : By Author

ಶಿವಮೊಗ್ಗ, ಸೆ.6: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2 ವರ್ಷಗಳಿಗೊಮ್ಮೆ ಶ್ರೇಷ್ಠ ಪುಸ್ತಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜನವರಿ-2021 ರಿಂದ ಡಿಸೆಂಬರ್-2022ರಲ್ಲಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪುಸ್ತಕವು ಕನ್ನಡದಲ್ಲಿ ಪ್ರಕಟಗೊಂಡಿರಬೇಕು. ಯಾವುದೇ ತರಗತಿ, ಪದವಿ-ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಅಥವಾ ಇನ್ನಿತರ ಯಾವುದೇ ಕೋರ್ಸ್‍ಗಳ ಪಠ್ಯಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ. ಮುದ್ರಣ ರೂಪದಲ್ಲಿರುವ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ಈಗಾಗಲೇ ಪ್ರಕಟಗೊಂಡಿರುವ ಪುಸ್ತಕದ ಸಂಕ್ಷಿಪ್ತ/ಮುಖ್ಯಾಂಶ ಅಥವಾ ಆಯ್ದ ಭಾಗಗಳನ್ನು ಒಳಗೊಂಡ ಪುಸ್ತಕ, ಹಲವು ಲೇಖಕರ ಸಂಶೋಧನಾ ಪತ್ರ, ಲೇಖನಗಳನ್ನು ಒಳಗೊಂಡು ಸಂಪಾದಕ ಗ್ರಂಥ ಅಥವಾ ಪುಸ್ತಕಗಳು ಪ್ರಶಸ್ತಿಗೆ ಅರ್ಹವಾಗಿರುವುದಿಲ್ಲ. 2017ರಿಂದ ಈಚೆಗೆ ಪ್ರಶಸ್ತಿ ಪಡೆದ ಲೇಖಕರನ್ನು ಪರಿಗಣಿಸಲಾಗುವುದಿಲ್ಲ. ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಅಥವಾ ಇನ್ಯಾವುದೇ ಸಂಸ್ಥೆಗಳ ಪ್ರಶಸ್ತಿಗೆ ಆಯ್ಕೆಗೊಂಡ ಪುಸ್ತಕಗಳನ್ನು ಪರಿಗಣಿಸುವುದಿಲ್ಲ.

ಪುಸ್ತಕವು ಜನಸಾಮಾನ್ಯರಿಗೆ ಉಪಯೋಗವಾಗಲಿದ್ದು, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಹಾಗೂ ಜನಜೀವನ ಮಟ್ಟದಲ್ಲಿ ಸುಧಾರಣೆಯಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಕ್ಕೆ ಸಹಕಾರಿಯಾಗಿರಬೇಕು. ಪುಸ್ತಕದ ವಿಷಯದಲ್ಲಿ ಸ್ವಂತಿಕೆಯಿರಬೇಕು ಹಾಗೂ ವಿಜ್ಞಾನ ಮತ್ತ ತಂತ್ರಜ್ಞಾನದ ಬಳಕೆಯ ಬಗ್ಗೆ ವಿಶ್ಲೇಷಿಸಿರಬೇಕು. ಪುಸ್ತಕವನ್ನು ಜನಸಾಮಾನ್ಯರ ಮಟ್ಟಕ್ಕೆ ಸರಳವಾಗಿ ಬರೆದಿರಬೇಕು. ಭಾಷೆಯ ಶೈಲಿ, ವಾಕ್ಯಗಳ ರಚನೆ, ಪದಗಳ ಬಳಕೆ ಮತ್ತು ವಿಷಯದ ಸಂವಹನ ತಂತ್ರಗಳಲ್ಲಿ ಲೇಖಕರು ಯಶಸ್ವಿಯಾಗಿರಬೇಕು.

ಆಸಕ್ತ ಲೇಖಕರು ಪುಸ್ತಕದ 4 ಪ್ರತಿಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೋ.ಯು.ಆರ್.ರಾವ್ ವಿಜ್ಞಾನ ಭವನ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕೆ ವಿಜ್ಞಾನಗಳ ಕಾಲೇಜು ಆವರಣ, ದೊಡ್ಡಬೆಟ್ಟಹಳ್ಳಿ ಬಡಾವಣೆ ಬಸ್ ನಿಲ್ದಾಣದ ಹತ್ತಿರ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು-560097 ಇಲ್ಲಿಗೆ ದಿ: 04/01/2023 ರೊಳಗಾಗಿ ಸಲ್ಲಿಸುವಂತೆ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

See also  ಅಡಿಕೆ ಕಳ್ಳತನ ಪ್ರಕರಣ: 7 ಆರೋಪಿಗಳು ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು