News Kannada
Tuesday, December 06 2022

ಶಿವಮೊಗ್ಗ

ಶಿವಮೊಗ್ಗ: ಬದಲಾವಣೆಯ ಗಾಳಿ ಬೀಸುತ್ತಿದೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

75th Independence Day celebrations in India is a historic moment: DK Shivakumar
Photo Credit : By Author

ಶಿವಮೊಗ್ಗ: ಶಿವಮೊಗ್ಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಅವರು ಶಿವಮೊಗ್ಗದಲ್ಲಿ ಮಾತನಾಡಿ 1999 ರಲ್ಲಿ ಎಸ್ ಎಂ ಕೃಷ್ಣರವರು ಮುಖ್ಯಮಂತ್ರಿಯಾಗುವ ವೇಳೆ ಉಂಟಾದ ಬಾರಿ ಬದಲಾವಣೆಗಳು ಶಿವಮೊಗ್ಗದಲ್ಲಿ ಕಂಡುಬರುತ್ತಿದೆ ಎಂದರು.

ವಿಧಾನ ಸಭೆ ಚುನಾವಣೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಇನ್ನು ಮೂರು ನಾಲ್ಕು ದಿನಗಳಲ್ಲಿ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ತೀರ್ಮಾನ ಕೈಗೊಳ್ಳಿದ್ದೇನೆ ಎಂದರು. ಹಾಗಾದರೆ ಚುನಾವಣೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆಯಾ ಎಂಬ ಮಾಧ್ಯಮಗಳ ಮರು ಪ್ರಶ್ನೆಗೆ ಮೇಲಿನ ಉತ್ತರವನ್ನಷ್ಟೇ ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸನ್ಮಾನ
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲಬಾರಿಗೆ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸುತ್ತಿದ್ದು ಅವರನ್ನ ಸನ್ಮಾನಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತೀರ್ಮಾನಿಸಿದೆ. ನ.6 ರಂದು ಖರ್ಗೆಯವರು ಬೆಂಗಳೂರಿಗೆ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ ಎಂದರು.

ಕಳೆದ 50 ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಕರ್ನಾಟಕದವರಿಗೆ ಎಐಸಿಸಿ ಅಧ್ಯಕ್ಷರಾಗಲು ಅವಕಾಶ ಸಿಕ್ಕಿದೆ. ಹಾಗಾಗಿ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ಮತ್ತು ದೇಶದ ದೊಡ್ಡ ಆಸ್ತಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಬಂದ ಖರ್ಗೆ ಇಂದು ಉನ್ಬತ ಹುದ್ದೆಗೆ ಏರಿದ್ದಾರೆ. ಇದು ಕಾಂಗ್ರೆಸ್ ನಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಕಾರಣ ಎಂದರು.

ನ.6 ರಂದು ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ನಿಂದ ಹಿಡಿದು ರಾಜ್ಯಮಟ್ಟದ ಎಲ್ಲಾ ಪದಾಧಿಕಾರಿಗಳು ಬಂದು ಖರ್ಗೆಯವರಿಗೆ ಶುಭಹಾರೈಸಬೇಕು ಯಾವ ರೀತಿ ಕಾರ್ಯಕ್ರಮ ರಚಿಸಲಾಗುತ್ತದೆ ಎಂಬುದನ್ನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿ ತಿಳಿಸುವೆ. ಈಗಲಿಂದಲೇ ಹೊರಡಲು ತಯಾರಿ ಮಾಡಿಕೊಳ್ಳಬೇಕೆಂದರು.

ನಮ್ಮದು 3 ಬಾಗಿಲು ಆದರೆ ಬಿಜೆಪಿದು 12 ಬಾಗಿಲು

ರಾಜ್ಯದಲ್ಲಿ ಕಾಂಗ್ರೆಸ್ ನ ಸ್ಥಿತಿ ಮನೆಯೊಂದು ಮೂರು ಬಾಗಿಲು ಆಗಿದೆ. ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಡಿಕೆಶಿ ಮತ್ತು ಸಿದ್ದರಾಮಯ್ಯರಿಗೆ ನಡುಕ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಆರೋಪಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ನ ಮನೆ ಬಾಗಿಲು ಮೂರಾಗಿದ್ದರೆ ಬಿಜೆಪಿಯ ಮನೆ ಬಾಗಿಲು 12 ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಭಾರತ್ ಜೋಡೋ ಯಾತ್ರೆ ಪರಿಣಾಮಕಾರಿಯಾಗಬೇಕಿದೆ
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ರಾಜ್ಯ ದಲ್ಲಿಯೂ ಅವರ ಯಾತ್ರೆ ಹಾದು ಹೋದಾಗ ನಾವೆಲ್ಲಾ ಭಾಗಿಯಾಗಿದ್ದೆವು. ಕೇವಲ ಭಾಗಿಯಾಗಿ ಬಂದರೆ ಸಾಲದು. ರಾಜ್ಯದ 21 ವಿಧಾನ ಸಭಾ ಕ್ಷೇತ್ರಗಳಿಗೆ ಹಾದು ಹೋಗಿದೆ. ಇದನ್ನ 224 ವಿಧಾನ ಸಭ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಮಾಡುಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಗ್ಲೋಬಲ್ ಇನ್ ವೆಸ್ಟ್ ಮೆಂಟ್ ಮಾಡಲು ಬಿಜೆಪಿಗೆ ಸಾಧ್ಯನಾ?
ಬೆಂಗಳೂರಿನಲ್ಲಿ ಗ್ಲೋಬಲ್ ಇನ್ ವೆಸ್ಟ್ ಮೆಂಟ್ ನಡೆಯುತ್ತಿದೆ. ಯಡಿಯೂರಪ್ಪ ಮತ್ತು ಈಶ್ವರಪ್ಪ‌ ಈ ಗ್ಲೋಬಲ್ ಇನ್ ವೆಸ್ಟ್ ಮೆಂಟ್ ನ್ನ ಶಿವಮೊಗ್ಗಕ್ಕೆ ತಂದು ಉದ್ಯೂಗ ಸೃಷ್ಟಿಸಲು ಸಾಧ್ಯವಾ? 5000 ಕೋಟಿ ಬಂಡವಾಳ ಹೂಡಿಸಿ ಶಿವಮೊಗ್ಗದ ಜನತೆಗೆ ಕೆಲಸ ಕೊಡಿಲು ಸಾಧ್ಯವಾ? ಅಷ್ಟು ಕೋಮು ದ್ವೇಷ ಬೆಳೆಸಿರುವ ಕೀರ್ತಿ ಬಿಜೆಪಿಗೆ ಇದೆ ಎಂದು ವಾಗ್ದಾಳಿ ನಡೆಸಿದರು.

See also  ಶಿವಮೊಗ್ಗ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು