News Kannada
Saturday, December 03 2022

ಶಿವಮೊಗ್ಗ

ಶಿವಮೊಗ್ಗ: ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರು!

Photo Credit : By Author

ಶಿವಮೊಗ್ಗ: ನಗರದ ನ್ಯೂ ಮಂಡ್ಲಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನ ಖಾಸಗಿಯವರಿಗೆ ದತ್ತು ಕೊಡಿ ಇಲ್ಲವಾದಲ್ಲಿ ಅಭಿವೃದ್ಧಿ ಪಡಿಸಿ ಎಂದು ಆಗ್ರಹಿಸಿ ಎಸ್ ಡಿ ಎಂಸಿ ಅಧ್ಯಕ್ಷ ರಿಯಾಜ್ ಅಹ್ಮದ್ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.

ವಿದ್ಯಾರ್ಥಿಗಳ ತರಗತಿಗಳನ್ನ ಬಹಿಷ್ಕರಿಸಿ ಎಸ್ ಡಿ ಎಂಸಿ ಸಮಿತಿಯವರು ಮತ್ತು ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಮುಂದೆ ಧರಣಿ ನಡೆಸಿದರು.

ಶಾಲೆಯ ಜಾಗವನ್ನ ಒತ್ತುವರಿ ಮಾಡಲಾಗಿದೆ, ಶಾಲೆಗೆ ಕುಡಿಯುವ ನೀರನ್ನ ಬಂದ್ ಮಾಡಲಾಗಿದೆ. ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿ ನಡೆಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಟ್ಟರೂ ಸಮಸ್ಯೆಯನ್ನ ಬಗೆಹರಿಸಲಾಗಿಲ್ಲ ಹಾಗಾಗಿ ಸಮಸ್ಯೆ ಬಗೆಹರಿಸುವ ವರೆಗೆ ಡಿಡಿಪಿಐ ಕಚೇರಿಯ ಆವರಣದಿಂದ ಒಂದು ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲವೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಬಿಇಒ ನಾಗರಾಜ್ ಅವರು ಇನ್ನೆರಡು ತಿಂಗಳಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗುವುದು ಈ ಶಾಲೆಗೆ 4 ಲಕ್ಷ ರೂ ಟೆಂಡರ್ ಕಾಮಗಾರಿ ನಡೆಸಲಾಗುವುದು. ನೀರಿನ ವ್ಯವಸ್ಥೆ ಇಂದೇ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

See also  ತಮಿಳುನಾಡು: ಶೂಟಿಂಗ್ ಚಾಂಪಿಯನ್‌ಶಿಪ್ ನಲ್ಲಿ 4 ಚಿನ್ನ ಗೆದ್ದ ಕಾಲಿವುಡ್‌ ಸೂಪರ್ ಸ್ಟಾರ್ ಅಜಿತ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು