News Kannada
Monday, September 25 2023
ಶಿವಮೊಗ್ಗ

ಶಿವಮೊಗ್ಗ: ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು 21 ನೇ ಶತಮಾನದ ಅವಶ್ಯಕತೆ!

BOMMABOMMAI
Photo Credit : By Author

ಶಿವಮೊಗ್ಗ: ಸಾಮಾನ್ಯ ಕುಟಂಬದ ಮಗು ಯಾವುದೇ ರೀತಿಯ ಮಾನಸಿಕ ಒತ್ತಡವಿಲ್ಲದೆ, ಮುಕ್ತವಾಗಿ ವಿದ್ಯೆ ಕಲಿಯುವುದು 21 ನೇ ಶತಮಾನದ ಅವಶ್ಯಕತೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ 25 ನೇ ರಾಜ್ಯ ಮಟ್ಟದ ಕ್ರೀಡಾಕುಟ- ರಜತ ಚುಂಚಾದ್ರಿ ಕ್ರೀಡೋತ್ಸವ 2022 ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಶ್ವಮಾನವರು
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ 1.25 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಅನ್ನ, ವಿದ್ಯೆ, ಸಂಸ್ಕøತಿಯ ದಾನ ನೀಡಿ, ತಂದೆತಾಯಿಯಂತೆ ಸಲಹುತ್ತಿದ್ದಾರೆ. ದೈಹಿಕ ಶಿಕ್ಷಣ ನೀಡಿ ವಿಶ್ವಮಾನವರನ್ನಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಈ ಸಂಸ್ಥಾನಕ್ಕೆ ಕೋಟಿ ನಮನಗಳು ಎಂದರು. ಯಾವುದೇ ಬೇಧಭಾವವಿಲ್ಲದೆ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬಂದು ಇಂದು ನಾನು ಬಹಳ ಪುನೀತನಾಗಿದ್ದೇನೆ. ಆದಿಚುಂಚನಗಿರಿ ಸಂಸ್ಥೆ ಎಷ್ಟು ಬೆಳೆದಿದೆ ಎನ್ನುವುದಕ್ಕೆ ಈ ಕ್ರೀಡಾಕೂಟಗಳು ಸಾಕ್ಷಿಯಾಗಿವೆ ಎಂದರು.

ಶಿಕ್ಷಣದ ಸರಳೀಕರಣ
ನಮ್ಮ ದೇಶ ವಿದ್ಯೆಯಲ್ಲಿ ಮುಂದೆ ಬರಲು ಇಂಥ ಹಲವಾರು ಸಂಸ್ಥೆಗಳು ಮಾಡುತ್ತಿರುವ ಸೇವೆಯನ್ನು ಮೆಚ್ಚಿಕೊಳ್ಳಬೇಕು. ವಿದ್ಯೆಯನ್ನು ಇನ್ನಷ್ಟು ಸರಳಗೊಳಿಸಬೇಕು. ವಿದ್ಯೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕೆಲವು ನಿರ್ಬಂಧಗಳ ಅವಶ್ಯಕತೆ ಇದೆ. ಆದರೆ ಈ ಬಗ್ಗೆ ನಾವೆಲ್ಲಾ ಚಿಂತನೆ ಮಾಡಬೇಕು. ಇದೇ ದಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣದ ಸರಳೀಕರಣ ಮಾಡಿದ್ದಾರೆ. ಸರಳವಾಗಿ, ಸಹಜವಾಗಿ ಮತ್ತು ಸ್ಪಷ್ಟವಾಗಿ ಕಲಿಯಲು ಹಾಗೂ ಕಲಿಕೆಯಲ್ಲಿ ಹತ್ತು ಹಲವಾರು ಆಯ್ಕೆಗಳನ್ನು ನೀಡುವ ಅವಕಾಶವಿದೆ. ಬಹುವಿಧ ಕೋರ್ಸ್ಗಳನ್ನು ಒಂದೇ ಸಂದರ್ಭದಲ್ಲಿ ಪಡೆದುಕೊಳ್ಳಲು ಅವಕಾಶವಿರುವ ನೀತಿಯನ್ನು ಕರ್ನಾಟಕವು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾರಂಭವಾಗಿದ್ದು, ಪ್ರಾಥಮಿಕ ವಲಯದಲ್ಲಿಯೂ ಪ್ರಾರಂಭ ಮಾಡುತ್ತಿದ್ದೇವೆ ಎಂದರು.

ಆಟದ ಜೊತೆ ಬದುಕಿನಲ್ಲಿ ಗೆಲ್ಲಿ
ಇದುವರೆಗೂ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾಗಿರಲಿಲ್ಲ. ವಿದ್ಯಾರ್ಥಿ ಕೇಂದ್ರಿತವಾಗಿರುವ ಶಿಕ್ಷಣ ನೀತಿಯ ಅಗತ್ಯವಿದೆ. 21 ನೇ ಶತಮಾನ ಜ್ಞಾನದ ಶತಮಾನ. ವಿದ್ಯಾರ್ಥಿಗಳಿಗೆ ಅವರ ಭವಿಷ್ಯದ ಜೊತೆಗೆ ಇಡೀ ಮನುಕುಲದ ಭವಿಷ್ಯವನ್ನು ಬರೆಯುವ ಶಕ್ತಿ ಈ ಸಂಸ್ಥೆಗಳು ನೀಡುತ್ತಿವೆ. ಆರೋಗ್ಯವೇ ಭಾಗ್ಯ. ಸಚ್ಛಾರಿತ್ರ್ಯ ಬೆಳೆಸಿಕೊಳ್ಳಲು ಬುದ್ದಿಶಕ್ತಿ ಬೇಕು. ಬುದ್ಧಿಶಕ್ತಿಗೆ ದೈಹಿಕ ಶಕ್ತಿ ಸದೃಢವಾಗಿರಬೇಕು. ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಬೇಕು. ಕ್ರೀಡೆಗಳಲ್ಲಿ ಬಾಗವಹಿಸುವುದು ಬಹಳ ಮುಖ್ಯ. ಸೋಲು ಗೆಲುವು ಸಾಮಾನ್ಯ. ಇಂದು ಸೋತವನು ನಾಳೆ ಗೆಲ್ಲಬಹುದು. ಆದರೆ ಭಾಗವಹಿಸುವಿಕೆ ಬಹಳ ಮುಖ್ಯ. ಅತ್ಯಂತ ಸ್ಪೂರ್ತಿದಾಯಕವಾಗಿ ಆಡವಾಡಬೇಕು. ಸಂತೋಷಕ್ಕಾಗಿ ಆಟವಾಡಬೇಕು. ಇದನ್ನು ರಕ್ಷಣಾತ್ಮಕ ಆಟ ಎನ್ನುತ್ತಾರೆ. ಆಟ ಆಡುವಾಗ ಸೋಲಬಾರದು ಎಂದು ಆಡಬೇಕು .ಇನ್ನೊಂದು ಗೆಲ್ಲಬೇಕು ಎಂದು ಆಡಬೇಕು. ಇದನ್ನು ಆಕ್ರಮಣಕಾರಿ ಆಟ ಎನ್ನುತ್ತಾರೆ. ಎರಡೂ ಒಂದೇ ಇದ್ದರೂ ಅದರ ವಿಧಾನ ಬೇರೆ ಬೇರೆ ಇದೆ. ಕ್ರೀಡೆ ಹಾಗೂ ಬದುಕಿನಲ್ಲಿ ಗೆಲ್ಲಲು ಗೆಲ್ಲಬೇಕೆಂದು ಆಡಬೇಕು. ಸೋತಾಗ ಕುಗ್ಗಬಾರದು. ಮತ್ತೊಂದು ಅವಕಾಶ ಸಿಗುತ್ತದೆ. ನಿರಂತರವಾಗಿ ಪ್ರಯತ್ನಪಟ್ಟವರಿಗೆ ಗೆಲುವು ಸಾಧ್ಯ. ಬದುಕಿನಲ್ಲಿ ಗೆಲ್ಲಿ ಎಂದು ಮಕ್ಕಳಿಗೆ ಹಾರೈಸಿದರು.

See also  ಕಾರವಾರ: ದೂರು ದಾಖಲಿಸಿಕೊಳ್ಳಲು ಹಿಂದೆಟು, ನ್ಯಾಯಕ್ಕೆ ಆಗ್ರಹ

ಕನ್ನಡನಾಡನ್ನು ಮರೆಯಬೇಡಿ
ಬಾಲಗಂಗಾಧರನಾಥ ಸ್ವಾಮೀಜಿಯವರು 500 ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಟ್ಟಿ, ಉತ್ಕøಷ್ಟ ಶಿಕ್ಷಣ ನೀಡಿ, ಕರ್ನಾಟಕದ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಮಹಾನ್ ಕಾರ್ಯ ಅವರಿಂದಾಗಿದೆ. ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದು ಗುಣಾತ್ಮಕತೆ ಹಾಗೂ ಆಧ್ಯಾತ್ಮವನ್ನು ತುಂಬಿ, ಜಗತ್ತಿನಲ್ಲಿಯೇ ಸರ್ವ ಶ್ರೇಷ್ಠ ಮಠ, ಶಿಕ್ಷಣ ಸಂಸ್ಥಾನವನ್ನು ಬೆಳೆಸುತ್ತಿರುವ ನಿರ್ಮಾಲಾನಂದನಾಥಸ್ವಾಮಿಗಳು ಮೇಧಾವಿಗಳು. ಖದ್ದು ಆಧ್ಯಾತ್ಮಿಕ ಚಿಂತಕರು. ಆಧ್ಯಾತ್ಮ, ತತ್ವಜ್ಞಾನ ಮತ್ತು ವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದಾರೆ. ವಿಜ್ಞಾನ ಮತ್ತು ತತ್ವಜ್ಞಾನದ ಸಂಗಮ ಅವರು. ಅವರ ಆಶೀರ್ವಾದದೊಂದಿದೆ ಮಕ್ಕಳ ಬದುಕು ಹಸನುಗೊಳುತ್ತದೆ. ಎಷ್ಟೇ ಎತ್ತರಕ್ಕೆ ಹೋದರೂ ಕನ್ನಡನಾಡನ್ನು, ಆದಿಚುಂಚನಗಿರಿ ಮಠವನ್ನು ಹಾಗೂ ಜನ್ಮ ಕೊಟ್ಟ ತಂದೆತಾಯಿಯರನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಡಾ: ಕೆ. ಸುಧಾಕರ್ , ಆರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು