ಶಿವಮೊಗ್ಗ: ಪೋಲೀಸ್ ವೇಶದಲ್ಲಿಯೇ ಬಂದು ಮಹಿಳೆಯ ಮೈಮೇಲಿದ್ದ ಬಂಗಾರದ ಸರವನ್ನಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಜಗದಾಂಬ ಬೀದಿಯಲ್ಲಿ ನಡೆದಿದೆ.
ಜಗದಾಂಬ ಬೀದಿಯಲ್ಲಿ 70 ವರ್ಷದ ವೃದ್ಧೆ ವಿದ್ಯಾನಗರದ ಎಸ್ ಬಿಐ ಬ್ಯಾಂಕ್ ಶಾಖೆಗೆ ಹೋಗುವಾಗ ಹಿಂಬದಿಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಹಿಂದಿ ಭಾಷೆಯಲ್ಲಿ ಮಾತನಾಡಿ ಈ ಏರಿಯಾದ ಸರ್ವೆ ಕಾರ್ಯ ನಡೆಯುತ್ತಿದ್ದು ನಾವು ಪೊಲೀಸ್ ಆಫೀಸರ್ ಎಂದು ನಕಲಿ ಐಡಿಕಾರ್ಡ್ ತೋರಿಸಿದ್ದಾರೆ.
ನಂತರ ನಿಮ್ಮ ಮೈಮೇಲೆ ಯಾಕೆ ಇಷ್ಟೊಂದು ಚಿನ್ನ ಹಾಕಿಕೊಂಡಿದ್ದೀರ ಎಂದು ಪ್ರಶ್ನಿಸಿದ್ದಾರೆ. ಎಷ್ಟೊಂದು ಸರಗಳ್ಳತನ ಆಗ್ತ ಇದೆ ಗೊತ್ತಾಗೊಲ್ವಾ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಮನೆಗೆ ಹೋದ ಮೇಲೆ ಬಿಚ್ಚಿಡುವೆ ಎಂದು ವೃದ್ದೆ ಹೇಳಿದ್ದಾರೆ. ಇಲ್ಲ ನಮ್ಮ ಕಣ್ಣ ಮುಂದೆ ಬಿಚ್ಚಿ ಬ್ಯಾಗ್ ಗೆ ಹಾಕಿಕೊಳ್ಳಿ ಎಂದು ಹೇಳಿ ತಾವೇ ಕುತ್ತಿಗೆಯಲ್ಲಿ 55 ಗ್ರಾಂ ಬಂಗಾರದ ಸರ,
30 ಗ್ರಾಂ ಕೈ ಬಳೆ ಬಿಚ್ಚಿ ಬ್ಯಾಗ್ ಗೆ ಹಾಕುವ ನೆಪದಲ್ಲಿ ವೃದ್ದೆಯ ಬೇರೆ ಕಡೆ ಗಮನ ಹರಿಸಿ ಅವರ ಬ್ಯಾಗ್ ಗೆ ಹಾಕದೆ ಚಿನ್ನಾಭರಣವನ್ನ ಕದ್ದೊಯ್ದಿದ್ದಾರೆ. ವೃದ್ದೆ ಮಹಿಳೆ ನಂತರ ಸೊಸೆಯನ್ನ ಕರೆಯಿಸಿ ಬಂಗಾರದ ಸರ ಪತ್ತೆಗೆ ಹುಡುಕಾಡಿದ್ದಾರೆ. ಎಲ್ಲೂ ಸಿಗದ ಕಾರಣ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.