ಶಿವಮೊಗ್ಗ: ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮೇಲೆ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ತೆಹಸೀನ್ ಪೂನಾವಾಲಾರವರು ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ಎಸ್ಪಿಗೆ ಮನವಿ ಮಾಡಿರುವ ಹಿನ್ನಲೆಯಲ್ಲಿ ದೂರು ದಾಖಲಾಗಿದ್ದು ಬೆಳಿಗ್ಗೆ 11 ಗಂಟೆಯ ಒಳಗೆ ಹಾಜರಾಗಲು ಸೂಚಿಸಿರುವುದು ಖುದ್ದು ದೂರು ನೀಡಿದ ಪಿರ್ಯಾದಿ ಶಾಕ್ ಆಗಿದ್ದಾನೆ.
ಶಿವಮೊಗ್ಗದಲ್ಲಿ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಭಾಷಣದಲ್ಲಿ ತರಕಾರಿ ಹೆಚ್ಚುವ ಚಾಕುವಿನ ಬಗ್ಗೆ ಪ್ರಸ್ತಾಪಿಸಿದ್ದರು.
ಲವ್ ಜಿಹಾದ್ನ ಬಗ್ಗೆ ಮಾತನಾಡ್ತಾ ಮನೆಯಲ್ಲಿರುವ ತರಕಾರಿ ಹೆಚ್ಚುವ ಚಾಕುವನ್ನ ಹೆಚ್ಚು ಶಾರ್ಪ್ ಆಗಿಟ್ಟಿರಿ ಎಂದಿದ್ದರು. ಇದು ಉತ್ತರ ಭಾರತದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದೇ ವಿಚಾರವಾಗಿ ಸಾದ್ವಿ ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ ಅಂತಾ ವ್ಯಕ್ತಿಯೊಬ್ಬರು ಕಂಪ್ಲೆಂಟ್ ಮಾಡಿ ಎಫ್ಐಆರ್ ದಾಖಲಿಸುವಂತೆ ಕೋರಿದ್ದಾರೆ. ದೆಹಲಿಯ ತೆಹಸೀನ್ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್ಪಿಗೆ ಅಡ್ರೆಸ್ ಮಾಡಿ, ಮನವಿ ಮಾಡಿಕೊಂಡಿದ್ದಾರೆ.
153-A, 153-B, 268, 295-A, 298, 504, 508 ಕಾಯ್ದೆ ಅಡಿಯಲ್ಲಿ ಎಫ್ಐರ್ ಮಾಡಿ ಎಂದು ತೆಹಸೀನ್ ಪೂನಾವಾಲಾ ಕೋರಿದ್ದರು. ಮನೆಯ ಹೆಣ್ಣುಮಕ್ಕಳನ್ನು ಸಂರಕ್ಷಿಸಿ, ಅವರಿಗೆ ಸಂಸ್ಕಾರ ಕಲಿಸಿ. ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳಿ ಎಂದಿದ್ದರು.ಕೊನೆ ಪಕ್ಷ ಸೊಪ್ಪು, ತರಕಾರಿ ಕತ್ತರಿಸುವ ಚಾಕುವನ್ನಾದರೂ ಹರಿತವಾಗಿ ಇಟ್ಟುಕೊಳ್ಳಿ ಎಂದಿದ್ದರು.
ಅವರು ಚಾಕುವಿನಿಂದಲೇ ನಮ್ಮ ಕಾರ್ಯಕರ್ತ ಹರ್ಷನನ್ನು ಕೊಂದರು. ಅವರು ಚಾಕುವಿನಿಂದಲೇ, ನಮ್ಮ ಹಿಂದು ವೀರರನ್ನು ಕೊಂದಿದ್ದಾರೆ. ಹಾಗಾಗಿ ನಾವು ಕೂಡ ನಮ್ಮ ಮನೆಯ ಸೊಪ್ಪು, ತರಕಾರಿ ಕತ್ತರಿಸುವ ಚಾಕುವನ್ನು ಸ್ವಲ್ಪ ಚೂಪಾಗಿ ಇರಿಸೋಣ. ಗೊತ್ತಿಲ್ಲ ಯಾವಾಗ ಎಂತಹ ಸಂದರ್ಭ ಬರಬಹುದು ಎಂಬುದು.
ಯಾವಾಗ ನಮ್ಮ ಚಾಕು ಸೊಪ್ಪು ತರಕಾರಿಯನ್ನು ಸುಲಭವಾಗಿ ಕತ್ತರಿಸುತ್ತದೋ ಅದೇ ರೀತಿಯಲ್ಲಿ ಶತ್ರುವಿನ ತಲೆಯನ್ನು ಸಹ ಕತ್ತರಿಸಬಲ್ಲದು. ಆತ್ಮರಕ್ಷಣೆಯ ಅಧಿಕಾರ ಎಲ್ಲರಿಗೂ ಇದೆ ಎಂದು ಸಾಧ್ವಿ ಹೇಳಿದ್ದಾರೆ ಎಂಬ ವಿಡಿಯೋ ಮೂಲಕ ದೂರು ದಾಖಲಿಸಲಾಗಿದೆ.
ಆದರೆ ದೂರು ದಾಖಲಿಸಿಕೊಂಡ ಕೋಟೆ ಪೊಲೀಸರು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಗೆ ಇರಲು ಸೂಚಿಸಿದ್ದಾರೆ. ಇದರಿಂದ ಪ್ರಜ್ಞಾ ಸಿಂಗ್ ವಿರುದ್ಧ ದೂರು ನೀಡಿದ್ದ ಪುಣೆ ಮೂಲದ ಉದ್ಯಮಿಗೆ ಶಾಕ್ ಆಗಿದ್ದಾರೆ.
ರಾತ್ರಿ 8 ಗಂಟೆಗೆ ಈ ಮೇಲ್ ಮೂಲಕ ನೋಟಿಸ್ ನೀಡಿ ಬೆಳಗ್ಗೆ ಹನ್ನೊಂದು ಗಂಟೆಯೊಳಗೆ ಠಾಣೆಯಲ್ಲಿರಲು ಸೂಚಸಿದ್ದಾರೆ. ದೆಹಲಿಯಲ್ಲಿ ಕೂತು ದೂರು ನೀಡಿದಾತ ಗಲಿಬಿಲಿಯಾಗಿದ್ದು ಈ ಬಗ್ಗೆ ಟ್ಬಿಟ್ಟರ್ ಲ್ಲಿ ಈ ಬಗ್ಗೆ ಪೂನಾವಾಲ ಹಂಚಿಕೊಂಡಿದ್ದಾನೆ.
I have filed a complaint against #PragyaThakur ji (MP) for the hate speech that she delivered on 25.12.2022 at Shivamogga with the SP shri G.K Mithun Kumar.
Requesting Shivamogga police to kindly register an FIR u/s 153-A, 153-B,268,295-A,298,504,508 (IPC).@CMOkamoto @BSBommai pic.twitter.com/KxNXpYUHS5— Tehseen Poonawalla Official 🇮🇳 (@tehseenp) December 26, 2022