News Kannada
Monday, January 30 2023

ಶಿವಮೊಗ್ಗ

ಶಂಕರಘಟ್ಟ: ಕುವೆಂಪು ವಿವಿ, ಎರಡು ಸಂಶೋಧನಾ ಜರ್ನಲ್‌ಗಳ ಲೋಕಾರ್ಪಣೆ

Shankaraghatta: Kuvempu University, two research journals launched
Photo Credit : By Author

ಶಂಕರಘಟ್ಟ, ಡಿ.29: ಕುವೆಂಪು ಅವರ 118 ನೇ ಜನ್ಮದಿನೋತ್ಸವದಂದು ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಪ್ರಕಟಣೆಗೊಳ್ಳುತ್ತಿರುವ ಎರಡು ಆನ್‌ಲೈನ್ ಸಂಶೋಧನಾ ಜರ್ನಲ್‌ಗಳನ್ನು ವಿವಿಯ ಕುಲಸಚಿವೆ ಅನುರಾಧ ಜಿ., ಅವರು ಲೋಕಾರ್ಪಣೆಗೊಳಿಸಿದರು.

ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕ ಡಾ. ಸತ್ಯಪ್ರಕಾಶ್ ಎಂ. ಆರ್. ಅವರ ಸಂಪಾದಕತ್ವದಲ್ಲಿ “ದಿ ಸೋಶಿಯಲ್ ಸೈನ್ಸ್ ಡೈಲಾಗ್” ಎಂಬ ಸಂಶೋಧನಾ ಜರ್ನಲ್ ಅನ್ನು ಹೊರತರಲಾಗುತ್ತಿದೆ. ಇದು ಸಮಾಜ ವಿಜ್ಞಾನ ವಿಷಯಗಳಲ್ಲಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳನ್ನು ಅರ್ಧವಾರ್ಷಿಕ ಆವೃತ್ತಿಯಲ್ಲಿ ಪ್ರಕಟಿಸುತ್ತಿದ್ದು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಲೇಖನಗಳನ್ನು ಬರೆಯಬಹುದಾಗಿದೆ.

ವಿವಿಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಡಾ. ರೇಚಲ್ ಬಾರಿ ಅವರ ಸಂಪಾದಕತ್ವದಲ್ಲಿ ‘ಪೂರ್ಣದೃಷ್ಟಿ’ ಎಂಬ ಅರ್ಧವಾರ್ಷಿಕ ಆವೃತ್ತಿಯ, ದ್ವಿಭಾಷಾ ಜರ್ನಲ್ ಅನ್ನು ಪ್ರಕಟಿಸಲಾಗುತ್ತಿದೆ. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿನ ಸಾಹಿತ್ಯಿಕ ಲೇಖನಗಳನ್ನು ಪ್ರಕಟಿಸುವ ಉದ್ದೇಶದೊಂದಿಗೆ ಜರ್ನಲ್ ಪ್ರಕಟವಾಗುತ್ತಿದೆ. ಎರಡೂ ಜರ್ನಲ್‌ಗಳು ಓಪನ್ ಆಕ್ಸೆಸ್ ಆಗಿದ್ದು, ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ ಮತ್ತು ಉಚಿತವಾಗಿ ಓದಬಹುದಾಗಿದೆ.

ಈ ಸಂದರ್ಭದಲ್ಲಿ ಜರ್ನಲ್‌ಗಳ ಸಂಪಾದಕರು, ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.

See also  ಶಾಲೆಗೆ ಮಕ್ಕಳು ನಗು ನಗುತ್ತಾ ಬರುತ್ತಿರುವುದನ್ನು‌ ನೋಡಿದ್ರೆ ಸಂತೋಷವಾಗುತ್ತದೆ: ಶಿಕ್ಷಣ ಸಚಿವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು