ಶಿವಮೊಗ್ಗ: ಸಂಸದರ ಬಲಗೈಭಂಟ ಎಂದೇ ಪ್ರಖ್ಯಾತವಾಗಿದ್ದ ಪ್ರಸನ್ನ ನೀರು ಪಾಲು ಆಗಿರುವ ಸುದ್ದಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದುಥರ ಸಿಡಿಲು ಎರಗಿದ ರೀತಿಯಲ್ಲಿ ಬಂದೆರಗಿತ್ತು. 30 ನಿಮಿಷದ ಹಿಂದೆ ಪ್ರಸನ್ನ ಭಟ್ಟರ ಮೃತ ದೇಹ ಪತ್ತೆಯಾಗಿದೆ.
ಸಹೋದರ ಕೌಶಿಕ್ ಸೇರಿ ಐದು ಜನ ಕನಕಪುರ ತಾಲೂಕಿನ ಮಾವತ್ತೂರು ಕೆರೆಯ ದಂಡೆಯ ಮೇಲೆ ಕಾಲು ಜಾರಿ ಬಿದ್ದ ಪರಿಣಾಮ ಪ್ರಸನ್ನ ನೀರು ಪಾಲಾಗಿದ್ದರು ಎಂದು ಈಗ ಸುದ್ದಿ ಬರ್ತಾಇದೆ. ಆದರೆ ಕೆಲವರ ಪ್ರಕಾರ ನೀರಿಗೆ ಇಳಿದಿದ್ದರು ಎನ್ಬಲಾಗುತ್ತಿದೆ. ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ ಎಂದು ಹೆಚ್ಚಿನ ಮಾಹಿರಿ ತಿಳಿದು ಬರುತ್ತಿದೆ
30 ನಿಮಿಷಗಳ ಹಿಂದೆ ಅಷ್ಟೆ ಅವರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಪತ್ರಕರ್ತರಿಗೆ ಸುದ್ದಿಯ ವಿಚಾರದಲ್ಲಿ ಪ್ರಸನ್ನ ಸೇತುವೆ ತರ ಕೆಲಸ ಮಾಡಿದ್ದರು. ಆರ್ ಎಸ್ ಎಸ್ ನ ಹಿನ್ನಲೆಯನ್ನು ಹೊಂದಿದ್ದರು.
ಶಿವಮೊಗ್ಗ ಜಿಲ್ಲೆ ಹೊಸನಗರ ನಿವಾಸಿ ಪ್ರಸನ್ನ ಸಂಜೆ ಕಾರಿನಲ್ಲಿ ಸ್ನೇಹಿತರ ಜೊತೆ ಬಂದಿದ್ದರು. ಕನಕಪುರ ಗಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕನಕಪುರದ ದಯಾನಂದ ಸಾಗರ್ ಆಸ್ಪತ್ರೆಗೆ ರವಾನಿಸಲಾಗಿದೆ.