ಶಿವಮೊಗ್ಗ: ಮೆಗ್ಗಾನ್ ಒಬಿಜಿ ವಾರ್ಡ್ ಗೆ ಲೋಕಾಯುಕ್ತ ಬಿ.ಎಸ್ಪಾಟೀಲ್ ವಿಸಿಟ್ ಮಾಡಿ ಕಟ್ಟಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದರ ಬಗ್ಗೆಯೂ ಸುಮೋಟೋ ಪ್ರಕರಣ ದಾಖಲಾಗಿದೆ.
ಶಿಥಿಲ ಕಟ್ಟಡದಲ್ಲಿ ಅವ್ಯವಸ್ಥೆಯನ್ನ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್ ನಲ್ಲಿ ದಿನಾಲು 46 ಹೆರಿಗೆ ಆಗುತ್ತಿದೆ. ಹೆರಿಗೆ ಆದ ಬಾಣಂತಿಯರನ್ನ ಲೋಕಾಯುಕ್ತರು ಮಾತನಾಡಿಸಿದರು. ಈ ವೇಳೆ ಲೋಕಾಯುಕ್ತರ ಕಾಲಿಗೆ ಮಹಿಳೆ ಬಿದ್ದು ನಮಸ್ಕರಿಸಿದರು. ನಮ್ಮ ಮಗುವನ್ನ ಕಾಪಾಡುವಂತೆ ಮನವಿ ಮಾಡಿದರು.
ದಾಕ್ಷಾಯಿಣಿ ಎಂಬುವರಿಗೆ ಎರಡು ಮಕ್ಕಳು ಇದ್ದು, ಮಕ್ಕಳು ಪ್ರೀ ಮೆಚ್ಯೂರ್ ಬೇಬಿಗಳಾಗಿವೆ.ಅವುಗಳು ಎದೆಹಾಲು ಕುಡಿಯುತ್ತಿಲ್ಲ. ದಿನ ಕುಡಿಸಿ ಎಂದು ವೈದ್ಯರು ಹೇಳುತ್ತಾರೆ. ವೈದರು ಎಷ್ಟು ಕುಡಿಸಲು ಹೇಳುತ್ತಿಲ್ಲವೆಂಬುದು ಆರೋಪವಾಗಿದೆ.
ಆದರೆ ವೈದ್ಯರು ಈ ಬಗ್ಗೆ ನಿಧಾನವಾಗಿ ಒಂದೊಂದು ಚಮಚ ಹಾಲುಣಿಸಲು ಸೂಚಿಸಲಾಗಿದೆ. ತರೀಕೆರೆಯಿಂದ ಬಂದಿದ್ದಾರೆ ಇವರು. ಇವರಿಗೆ ಸೂಕ್ತ ಸೂಚನೆಯನ್ನ ನೀಡಲಾಗಿದೆ ಎಂದು ವೈದ್ಯರು ಲೋಕಾಯುಕ್ತರಿಗೆ ತಿಳಿಸಿದರು. ಮುಂದಿನ ಬಾರಿ ಬರುವ ಒಳಗೆ ಮೆಗ್ಗಾನ್ ಆಸ್ಪತ್ರೆ ವೈದ್ಯರ ಹಾಜರಾತಿಯ ಬಗ್ಗೆಯೂ ಲೋಕಾಯುಕ್ತರು ಹಾಜರಾತಿಯನ್ನ ಹಾಜರಿ ಪಡಿಸಲು ಲೋಕಾಯುಕ್ತರು ತಿಳಿಸಿದರು.
ಕಟ್ಟಡದ ಶಿಥಿಲತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತರು ಈ ಕುರಿತು ಆರೋಗ್ಯ ಇಲಾಖೆ ಪಿಡಬ್ಲೂಡಿಗೆ ಸೂಚಿಸಲಾಗಿದ್ದು ಈ ಕಟ್ಟಡವನ್ನ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಈ ಕುರಿತು ಸುಮೋಟೋ ಪ್ರಕರಣ ದಾಖಲಾಗಿದೆ ಎಂದರು.
ಎನ್ ಆರ್ ಸಿ ಯಲ್ಲಿ ಕೆಲಸ ಮಾಡುತ್ತಿರುವ 95 ಜನ ನರ್ಸ್ ಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ. ಈ ಬಗ್ಗೆ ಕ್ರಮಕ್ಕೆ ಲೋಕಾಯುಕ್ತರು ಭರವಸೆ ನೀಡಿದರು.ಮುಂದಿನ ಬಾರಿ ಮೆಗ್ಗಾನ್ ಆಸ್ಪತ್ರೆಗೆ ವಿಸಿಟ್ ಮಾಡುವುದಾಗಿ ಭರವಸೆ ನೀಡಿದ್ದಾರೆ.