ಶಿವಮೊಗ್ಗ: ಮಿಳಘಟ್ಟದ ಲಕ್ಷ್ಮೀ ಕ್ಯಾಂಟೀನ್ ಬಳಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮೂವರಿಗೂ ರೇಷನ್ ಕಾರ್ಡ್, ಆಗಲಿ, ಸರ್ಕಾರದ ಯಾವುದೇ ಸವಲತ್ತು ಪಡೆಯದೆ ಇರುವುದು ಬೆಳಕಿಗೆ ಬಂದಿದೆ.
ಮೃತರ ಮನೆಯ ಸುತ್ತಮುತ್ತ ಜನ ಸರ್ಕಾರ ಮತ್ತು ಸ್ಥಳೀಯ ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮೂವರು ಒಂದೇ ಕುಟುಂಬದ ಸದಸ್ಯರಾಗಿದ್ದು ಕುಟುಂಬ ನಿರ್ವಾಹಣೆಗೆ ಸಾಧ್ಯವಾಗದೆ, ಮನೆ ಬಾಡಿಗೆ ಕಟ್ಟದೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ಗ್ಯಾಸ್ ಸಹ ಇರಲಿಲ್ಲ ಎಂದು ಮೃತರ ಅಕ್ಕಪಕ್ಕದವರ ಮನೆಯವರು ಆರೋಪಿಸಿದ್ದಾರೆ. ರೇಷನ್ ಕಾರ್ಡ್ ಮಾಡಿಸಲು ಕೊಟ್ಟರೂ ರೇಷನ್ ಕಾರ್ಡ್ ಇಲ್ಲವಾಗಿದೆ. ಸರ್ಕಾರ ಇಂತಹವರನ್ನ ಗುರುತಿಸಿ ಮನೆ, ಉದ್ಯೋಗ ಕೊಡಲು ಸಾಧ್ಯವಿಲ್ಲವಾ ಎಂಬುದು ಅವರ ಆಕ್ರೋಶವಾಗಿದೆ.
ಬೆಳಿಗ್ಗೆ 11 ಗಂಟೆಗೆ ವಿಷ ಸೇವಿಸಿದ್ದರೂ ಅವರನ್ನ ಎತ್ತಿಕೊಂಡು ಹೋಗಲು ಮಧ್ಯಾಹ್ನ 3 ಗಂಟೆಗೆ ಅಂಬ್ಯುಲೆನ್ಸ್ ಬಂದಿದೆ. ಶಿವಮೊಗ್ಗ ನಗರದಲ್ಲಿ ವಾಸವಿದ್ದರೂ ರೇಷನ್ ಕಾರ್ಡ್ ಹೊಂದದೆ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಟುಂಬ ನಿರ್ವಹಣೆ ಆಗದೆ ಸಾಲಕ್ಕೆ ಬೆದರಿ ಮಿಳಘಟ್ಟದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಂದಯ್ಯ(70), ದಾನಮ್ಮ (60)ಮತ್ತು ಮಂಜುನಾಥ್(25) ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
ಪರಂದಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ದಾನಮ್ಮ ಕಲ್ಲೂರು ಮಂಡ್ಲಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತಿದ್ದರು. ಅವರಿಗೆ ಮಕ್ಕಳಿರಲಿಲ್ಲ ಅವರು ಕಳೆದ 20 ವರ್ಷಗಳ ಹಿಂದೆ ಒಂದು ಗಂಡು ಮಗುವನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಇತ್ತೀಚೆಗೆ ಮಿಳಗಟ್ಟದಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಪರಂದಯ್ಯರಿಗೆ ಕಣ್ಣು ಕಾಣದೆ ಮನೆಯಲ್ಲಿದ್ದರು. ಅತಿಯಾದ ಸಾಲ ಮಾಡಿಕೊಂಡಿದ್ದರು ಹೀಗಿರುವಾಗ ನಿನ್ನೆ ದಿನ ಜ.11 ರಂದು ದಾನಮ್ಮ, ಪರಂದಯ್ಯ ಮತ್ತು ಅವರ ಮಗ ಮಂಜುನಾಥ ವಿಷ ಸೇವನೆ ಮಾಡಿದ್ದು ಬೆಳಗ್ಗೆ ಅಕ್ಕ ಪಕ್ಕದ ಮನೆಯವರು ನೋಡಿದಾಗ ವೃದ್ಧ ದಂಪತಿಗಳಿಬ್ಬರು ಮೃತಪಟ್ಟಿದ್ದಾರೆ.