ಶಿವಮೊಗ್ಗ: ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ವಿಶ್ರಾಂತ ಮತ್ತು ಕಾರ್ಯನಿರತ ನೌಕರರ ಎರಡನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಸಂಸ್ಕೃತಿಯ ಕಾರ್ಯಕ್ರಮ ವನ್ನು ಇಂದು ಶಿವಮೊಗ್ಗ ಜಿಲ್ಲೆಯ ಈಡಿಗರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೆಲಸವನ್ನು ನಿರ್ವಹಿಸಿ ನಿವೃತ್ತಿಗೊಂಡ ಎಲ್ಲಾ ಎಲ್ಲರನ್ನು ಅವಹಾನಿಸಿ ಕಾರ್ಯನಿರತ ಹಾಗೂ ವಿಶ್ರಾಂತ ನೌಕರರಿಂದ ಸಾಂಸ್ಕೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಉಪ ನಿರ್ದೇಶಕರ ಕಛೇರಿ ಹಾಗೂ ಎಲ್ಲಾ ತಾಲೂಕು ಶಿಶಿ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿಂದ ಮನರಂಜಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಗೊಂಡು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನೆಲೆಸಿರುವ ಅನೇಕ ವಿಶ್ರಾಂತಿ ನೌಕರರು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀಯುತ ಜಿಜಿ ಸುರೇಶ್ ರವರು ವಹಿಸಿದರು. ಪ್ರಸ್ತಾವಿಕ ಭಾಷಣವನ್ನು ಚಂದ್ರಪ್ಪ ಸಿಡಿಪಿಓ ಇವರು ನೆರವೇರಿಸಿದರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಎನ್ . ಎಂ. ರಂಗನಾಥ ಸ್ವಾಗತಿಸಿದರು ಹಾಗೂ ಸಿ. ಸುರೇಶ್ ಸಿಡಿಪಿಯೋ ಭದ್ರಾವತಿ ಇವರು ವಂದಿಸಿದರು.
ಅನಿಸಿಕೆ ನುಡಿಗಳ ನಾಡಿದ ನಿವೃತ್ತ ಜಂಟಿ ನಿರ್ದೇಶಕರು ಇಲಾಖೆ ವತಿಯಿಂದ ರಾಜ್ಯದಲ್ಲಿಯೇ ಇಂತಹ ಅಪರೂಪದ ಸಮ್ಮಿಲನ ಕಾರ್ಯಕ್ರಮ ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಹಮ್ಮಿಕೊಳ್ಳಲಾಗುತ್ತಿದ್ದು ಇದು ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಗೊಂಡು ಹಲವು ವರ್ಷಗಳು ಕಳೆದರೂ ಕೂಡ ಮತ್ತೆ ನಮ್ಮೆಲ್ಲರನ್ನು ಕರೆಸಿ ಸನ್ಮಾನಿಸಿ ನಿವೃತ್ತಿಗೊಂಡ ಎಲ್ಲರನ್ನು ಭೇಟಿಯಾಗುವಂತಹ ಅವಕಾಶ ಇರುವುದು ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಹಮ್ಮಿಕೊಳ್ಳಲಾಗುತ್ತಿದ್ದು ಇದು ಬಹಳ ಅಪರೂಪ ಹಾಗೂ ಅವಸ್ಮರಣೀಯ ಕ್ಷಣಗಳು ಎಂದು ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ವಿಶ್ರಾಂತ ನೌಕರರು ನೃತ್ಯ ಹಾಗೂ ಗೀತ ಗಯಾನದಲ್ಲಿ ಭಾಗವಹಿಸಿ ಎಲ್ಲರನ್ನೂ ರಂಜಿಸಿದರು.