ಶಿವಮೊಗ್ಗ: ಭದ್ರಾವತಿಯ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೆಇಟಿ ಕಂಬಗಳನ್ನ ರಿಪೇರಿ ಮಾಡುತ್ತಿದ್ದ ವೇಳೆ ಇಬ್ವರು ಪವರ್ ಮ್ಯಾನ್ ಗಳಿಗೆ ಶಾಕ್ ಹೊಡೆದಿದ್ದು ಒಬ್ಬ ಕಂಬದಲ್ಲೇ ಜೀವ ಬಿಟ್ಟಿದ್ದಾನೆ. ಮತ್ತೋರ್ವ ಜೀವಾಪಾಯದಿಂದ ಪಾರಾಗಿದ್ದಾನೆ.
11 ಕೆವಿ ಕಂಬಹತ್ತಿ ರಿಪೇರಿ ಮಾಡುತ್ತಿದ್ದ ಕಿರಣ್ ಮತ್ತು ಸುನೀಲ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಕಿರಣ್ ಕಂಬದಲ್ಲೇ ಅಸು ನೀಗಿದ್ದಾನೆ. ಸುನೀಲ್ ರನ್ನ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಹಾಲೇಶ್ ಎಂಬ ಪವರ್ ಮ್ಯಾನ್ ವಿನೋಬ ನಗರ ಹೆಚ್ ಇಟಿ ಲೈನ್ ರಿಪೇರಿ ಮಾಡುವಾಗ ಅಸು ನೀಗಿದ್ದ. ಆಗ ಪವರ್ ಮ್ಯಾನ್ ಗಳಿಗೆ ಸುರಕ್ಷತೆ ಇಲ್ಲವೆಂಬ ಕೂಗು ಕೇಳಿ ಬಂದಿತ್ತು. ಇವತ್ತೂ ಅದೇ ಕೂಗು ಕೇಳಿ ಬರುತ್ತಿದೆ.
ಅಂದರೆ ಯಾವ ಸುರಕ್ಷತೆಗಳು ಕಂಡು ಬರುತ್ತಿಲ್ಲ. ಅಂದು ಹಾಲೇಶ್ ಸಾವನ್ಬಪ್ಪಿದ್ದಕ್ಕೆ ಪವರ್ ಮ್ಯಾನ್ ಗಳ ಪ್ರತಿಭಟನೆ ಮಾಡಲು ಹವಣಿಸಿದ್ದರು. ಮೆಸ್ಕಾಂಅಧಿಕಾರಿ ಬಂದಾಗ ಸುರಕ್ಷತೆ ಧ್ವನಿ ಎತ್ತಲಾಗಿತ್ತು. ಇಂದು ಸಹ ಅದೇ ಧ್ವನಿ ಎತ್ತಲಾಗಿದೆ.