News Karnataka Kannada
Thursday, March 28 2024
Cricket
ಶಿವಮೊಗ್ಗ

ಪಠ್ಯಪುಸ್ತಕದಲ್ಲಿ ಶೇ.15 ರಷ್ಟು ಬದಲಾಗುವ ನಿರೀಕ್ಷೆ: ಸಚಿವ ಮಧು ಬಂಗಾರಪ್ಪ 

We expect 15 per cent change in textbooks: Madhu Bangarappa 
Photo Credit : News Kannada

ಶಿವಮೊಗ್ಗ: ಶರಾವತಿ ನದಿ ಸಂತ್ರಸ್ತರಿಗೆ ಭೂಮಿ ಹಕ್ಕು ಪತ್ರ ವಿಚಾರಣೆಯಲ್ಲಿ ಶೀಘ್ರವೇ ಈ ಕುರಿತು ರಾಜ್ಯಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಜಿಪಂ ಸಭೆ ಬಳಿಕ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂತ್ರಸ್ತರ ಪರವಾಗಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲಾಗುವುದು‌. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ಅನುಮತಿ ಪಡೆಯಬೇಕು ಎಂದರು.

ಶಿಕ್ಷಕರ ಕೌನ್ಸಿಲಿಂಗ್ ವಿಚಾರ
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಅತಿಥಿ ಶಿಕ್ಷಕರು ಬೇಡ ಖಾಯಂ ಶಿಕ್ಷಕರನ್ನು ನೀಡಿ ಎಂಬ ಅಭಿಪ್ರಾಯವಿದೆ. ಜಿಲ್ಲೆಯ 136 ಶಾಲೆಗಳಲ್ಲಿ ಶಿಕ್ಷಕರು ಇಲ್ಲ. ಈ ಬಗ್ಗೆ ಮೊದಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಾನು ಮಂತ್ರಿಯಾದ ತಕ್ಷಣವೇ ಶಾಲಾ ಶಿಕ್ಷಕರ ವರ್ಗಾವಣೆಗೆ ಅಧಿಸೂಚನೆ ಹೊರಡಿಸಿದ್ದೇನೆ.‌ ಹೈದರಾಬಾದ್ ಕರ್ನಾಟಕದ ಶಿಕ್ಷಕರ ವರ್ಗಾವಣೆ ಕೂಡ ಕೌನ್ಸಿಲಿಂಗ್ ಮೂಲಕವೇ ನಡೆಯಲಿದೆ ಎಂದರು.

ಶಿಕ್ಷಣ ಇಲಾಖೆಯ 10 ಕೋಟಿ ಬೇಡಿಕೆ ಇದ್ದು ಈಗಾಗಲೇ ಒಂದು ಕೋಟಿ ಕೊಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ವಿಚಾರಣೆ ನಡೆಸುತ್ತೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಶಿಕ್ಷಕರ ಕೊರತೆಯನ್ನು ನೀಗಿಸಿ ನೇಮಕ ಮಾಡಲಾಗುವುದು ಎಂದರು.

ಶರಾವತಿ ಸಂತ್ರಸ್ತ್ರರ ಪರ ಸರ್ಕಾರವಿದೆ
ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲು ಕೇಂದ್ರ ಸರ್ಕಾರ ತಿಳಿಸಿದೆ ಅರಣ್ಯ ಇಲಾಖೆಯ ಮಂತ್ರಿಯ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಶರಾವತಿ ನದಿ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ.

ಡಿಸಿ ಕಚೇರಿಯಿಂದ ರಿಜೆಕ್ಟ್ ಆದವರು ಪುನಃ ಅರ್ಜಿ ಸಲ್ಲಿಸಬಹುದು. ಭೂಗಳ್ಳರು ಎಂದು ರೈತರ ವಿರುದ್ಧ ಹಾಕಿದ ಕೇಸ್ ಗಳನ್ನು ಈ ಹಿಂದಿನ ಸರ್ಕಾರ ಈಗಾಗಲೇ ಹಿಂಪಡೆದಿದೆ ಎಂದು ಹೇಳಿದರು.

ಪಠ್ಯಪುಸ್ತಕದಲ್ಲಿ ಶೇ.15 ರಷ್ಟು ಬದಲಾಗುವ ನಿರೀಕ್ಷೆ
ಪಠ್ಯಪುಸ್ತಕ ಪರಿಷ್ಕರಣೆಯನ್ನು ಮಾಡುವ ವಿಚಾರದಲ್ಲಿ ಈಗಾಗಲೇ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಹಾಗಾಗಿ ಪರಿಷ್ಕರಣೆ ಮಾಡಿಯೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಪರಿಷ್ಕರಣೆ ಮಾಡುವುದಾಗಿ ಈಗಾಗಲೇ ತಿಳಿಸಿದ್ದಾರೆ. ಮಕ್ಕಳಿಗೆ ತೊಂದರೆ ಆಗದಂತೆ ಪರಿಷ್ಕರಣೆ ನಡೆಸುತ್ತೇವೆ ಎಂದರು.

2024ರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ಸಿಎಂ ನೇತೃತ್ವದಲ್ಲಿ ರಚಿಸುತ್ತೇವೆ. ಶೇ.15 ರಷ್ಟು ಬದಲಾಗುವ ನಿರೀಕ್ಣೆ ಇದೆ. ಈಗಾಗಲೇ ಆ ಬಗ್ಗೆ ಕಾರ್ಯೋನ್ಮುಖರಾಗಿದ್ದೇವೆ. ಕೆಲವೊಂದು ಶಬ್ದಗಳನ್ನು ತೆಗೆದು ಹಾಕಬೇಕಿದೆ. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲವು ಅಂಶಗಳಿವೆ ಅವುಗಳನ್ನ ತೆಗೆಯ ಬೇಕಿದೆ ಎಂದರು.

ಸೋಮವಾರ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಪರಿಷ್ಕರಣೆ ಕುರಿತು ಬಂದು ಭೇಟಿಯಾಗಲು ಹೇಳಿದ್ದು ಕೆಲವು ಶಿಕ್ಷಣ ತಜ್ಞರ ಜೊತೆ ಮಾತುಕತೆ ನಡೆಸಬೇಕಿದೆ ಎಂದರು.

ವಿಮಾನ ಹಾರಾಡಲಿದೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರ ವಿಚಾರಕ್ಕೆ ಸರ್ಕಾರ ಬೆಂಬಲವಿದೆ. ವಿಮಾನ ಸಂಚಾರದ ಮಾರ್ಗಸೂಚಿ ಮತ್ತು ಏರ್ ಲೈನ್ಸ್ ಸಂಸ್ಥೆ ಒಂದು ಸಂಚರಿಸಲು ಅನುಮತಿ ಕೇಳಿದೆ. ಈ ಬಗ್ಗೆ ಕಾನೂನು ಬದ್ಧವಾಗಿ ಅನುಮತಿ ನೀಡುವ ಕೆಲಸ ಮಾಡಲಾಗುತ್ತದೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ನೀಡಿದವರಿಗೆ ನಿವೇಶ ನೀಡುವ ವಿಚಾರ ಕೋರ್ಟಲ್ಲಿ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು