News Kannada
Friday, February 23 2024
ಬೆಂಗಳೂರು

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ‘ಮಾಶಾ ಆ್ಯಂಡ್‌ ದಿ ಬೇರ್​’ ಲೈವ್‌ ಶೋ

ಭಾರತದಲ್ಲಿ ‘ಮಾಶಾ ಆ್ಯಂಡ್‌ ದಿ ಬೇರ್​’ ಸಾಕಷ್ಟು ಜನಪ್ರಿಯವಾಗಿವೆ. ಪುಟ್ಟ ಮಕ್ಕಳಿಗೆಲ್ಲ ಚಿರಪರಿಚಿತವಾಗಿರುವ ಮಾಶಾ ಮತ್ತು ಬೇರ್​ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು, ಅವರ ಮುಂದೆ ಲೈವ್ ಪ್ರದರ್ಶನ ನೀಡಲು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ.ಇದಕ್ಕಾಗಿ ಬೆಂಗಳೂರಿನಲ್ಲಿಯೂ ವೇದಿಕೆ ಸಜ್ಜುಗೊಂಡಿದೆ.
Photo Credit : News Kannada

ಬೆಂಗಳೂರು:  ಭಾರತದಲ್ಲಿ ‘ಮಾಶಾ ಆ್ಯಂಡ್‌ ದಿ ಬೇರ್​’ ಸಾಕಷ್ಟು ಜನಪ್ರಿಯವಾಗಿವೆ. ಪುಟ್ಟ ಮಕ್ಕಳಿಗೆಲ್ಲ ಚಿರಪರಿಚಿತವಾಗಿರುವ ಮಾಶಾ ಮತ್ತು ಬೇರ್​ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು, ಅವರ ಮುಂದೆ ಲೈವ್ ಪ್ರದರ್ಶನ ನೀಡಲು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ.ಇದಕ್ಕಾಗಿ ಬೆಂಗಳೂರಿನಲ್ಲಿಯೂ ವೇದಿಕೆ ಸಜ್ಜುಗೊಂಡಿದೆ.

‘ನಿಕ್‌ ಜ್ಯೂನಿಯರ್​’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ಈ ಕಾರ್ಟೂನ್‌ ಸಿರೀಸ್‌ಗೆ ಹಿರಿಯ ಅಭಿಮಾನಿಗಳೂ ಸಾಕಷ್ಟಿದ್ದಾರೆ. ಪುಟ್ಟ ಮುದ್ದು ಹುಡುಗಿ ಮಾಶಾ ಮತ್ತು ಅವಳನ್ನು ಸಲುಹುವ ಪೆದ್ದುಮುದ್ದು ಬೇರ್ ಇಬ್ಬರ ಜೋಡಿಯ ಬಗೆಬಗೆಯ ಆಟ-ತುಂಟಾಟಗಳು ಎಲ್ಲ ವಯಸ್ಸಿನವರಿಗೂ ಮುದ ನೀಡುವಂಥವು. ಹಾಗಾಗಿಯೇ ‘ಮಾಶಾ ಆ್ಯಂಡ್‌ ದಿ ಬೇರ್’ ಕಾರ್ಟೂನ್ ಶೋ ಜಗತ್ತಿನಾದ್ಯಂತ ಪ್ರೀಸ್ಕೂಲ್‌ ಮಟ್ಟದ ಮಕ್ಕಳು ಅತ್ಯಂತ ಹೆಚ್ಚು ನೋಡುವ ಕಾರ್ಟೂನ್ ಶೋ ಎಂದು ಖ್ಯಾತಿಗಳಿಸಿದೆ.

ಡಿಸೆಂಬರ್ 23ರಂದು ಮುಂಬೈನಿಂದ ಈ ಲೈವ್‌ ಶೋ ಪ್ರಾರಂಭವಾಗಲಿದೆ. ನಂತರ ದೆಹಲಿ, ಹೈದರಾಬಾದ್‌ಗಳಲ್ಲಿ ಪ್ರದರ್ಶನ ನೀಡಿ 2024ರ ಫೆಬ್ರವರಿ 10 ಮತ್ತು 11ರಂದು ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳು ನಡೆಯಲಿವೆ. ‘ಅ ವೆರಿ ಡಿಕೆಕ್ಟೀವ್ ಸ್ಟೋರಿ’ ಎಂಬುದು ಈ ಲೈವ್‌ ಶೋ ಅಡಿಟಿಪ್ಪಣಿ.

ವಯಕಾಮ್18 ಲೈವ್ ಸಂಸ್ಥೆ, ಈ ಲೈವ್‌ ಶೋ ನಿರ್ಮಿಸಿದ್ದು, ಎಚ್‌ಎಸ್‌ಬಿಸಿ ಇಂಡಿಯಾ ಇದನ್ನು ಪ್ರಸ್ತುತಪಡಿಸುತ್ತಿದೆ. ‘ಮಾಶಾ ಆ್ಯಂಡ್‌ ದಿ ಬೇರ್’ ಶೋ ವೀಕ್ಷಿಸಲು ನಿಮ್ಮ ಟಿಕೆಟ್‌ಗಳನ್ನು www.kidsdayout.co ಮೂಲಕ ಬುಕ್ ಮಾಡಬಹುದು. ಟಿಕೆಟ್ ಬುಕ್ ಮಾಡಿಕೊಂಡವರಿಗೆ ಪ್ರದರ್ಶನದ ಸ್ಥಳ, ಸಮಯದ ಮಾಹಿತಿಯನ್ನು ಸಿಗಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು