News Kannada
Saturday, September 23 2023
ಮೈಸೂರು

ಮೈಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚರ್ಚೆ

Photo Credit :

ಮೈಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚರ್ಚೆ

ಮೈಸೂರು: ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಕೌನ್ಸಿಲ್ ಮೈಸೂರು ಘಟಕದ ವತಿಯಿಂದ ಡಿ.22ರ ಮಂಗಳವಾರ ಸಂಜೆ 6 ಗಂಟೆಗೆ ನಗರದ ಹೋಟೆಲ್ ಗ್ರಾಂಡ್ ಮರ್ಕ್ಯೂರ್ ನಲ್ಲಿ ಅಂತಾರಾಷ್ಟ್ರೀಯ ವಾಯುಯಾನ ತಾಣವಾಗಿ ಮೈಸೂರು ಮಾರ್ಗಸೂಚಿ ” ಎಂಬ ವಿಷಯವಾಗಿ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಕೌನ್ಸಿಲ್ -ಮೈಸೂರು ಅಧ್ಯಕ್ಷ ಟಿ ಜಿ ಆದಿಶೇಷನ್ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ತಸ್ನೀಂ , ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಾದ ಮಂಜುನಾಥ್ ಆರ್. ಭಾಗವಹಿಸಲಿದ್ದಾರೆ . ಮೈಸೂರು ನಗರವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಲು ದಿನಗಣನೆ ಪ್ರಾರಂಭವಾಗಿದ್ದು , ಇನ್ನೇನು ಕೆಲವೇ ದಿನಗಳಲ್ಲಿ ವಿಮಾನನಿಲ್ದಾಣದ ರನ್ ವೇಯು ವಿಸ್ತಾರಗೊಂಡು ಅಂತರರಾಷ್ಟ್ರೀಯ ಮಟ್ಟದ ವಿಮಾನಗಳು ಮೈಸೂರು ವಿಮಾನ ನಿಲ್ದಾಣದಲ್ಲಿ ಇಳಿಯುವಂತಾದರೆ ಮೈಸೂರು ನಗರದ ಸಾಮಾಜಿಕ , ಮೂಲಭೂತ ಸೌಕರ್ಯಗಳಾದ ರಸ್ತೆ , ಕುಡಿಯುವ ನೀರು , ವಸತಿ ಸೌಲಭ್ಯ , ಒಳಚರಂಡಿ , ವಿದ್ಯುತ್ , ಶಾಲೆ , ಕಾಲೇಜುಗಳು ಮುಂತಾದವುಗಳನ್ನು ಈಗಿಂದಲೇ ಅಣಿಗೊಳಿಸಬೇಕಾದ ದೂರದೃಷ್ಟಿಯನ್ನು ಮೈಸೂರು ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಆಡಳಿತಗಳು ಹೊಂದುವುದು ತುರ್ತು ಅಗತ್ಯವಾಗಿರುತ್ತದೆ ಎಂದರು.

ಭವಿಷ್ಯದಲ್ಲಿ ಮೈಸೂರಿನ ಸುತ್ತಮುತ್ತ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳು ಮತ್ತು ಮಾಹಿತಿ ತಂತ್ರಜ್ಞಾನ ಪಾರ್ಕ್ , ಸೆಮಿಕಂಡಕ್ಟರ್ ಪಾರ್ಕ್ , ನ್ಯಾನೋ ತಂತ್ರಜ್ಞಾನ ಪಾರ್ಕ್ , ಬಯೋಟೆಕ್ ಪಾರ್ಕ್ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಹಿರಿಮೆ ಹೊಂದಿರುವ ಮೈಸೂರು ನಗರವು ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ರೀಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಎಲ್ಲಾ ಸಾಧ್ಯತೆಗಳು ಇರುತ್ತದೆ . ಅದಕ್ಕೆ ಅಗತ್ಯವಾದ ಸಾಮಾಜಿಕ , ಮೂಲಭೂತ ಸೌಕರ್ಯಗಳನ್ನು ಇಂದಿನಿಂದಲೇ ನಾವು ಸಿದ್ಧಪಡಿಸುವ ಅವಶ್ಯಕತೆ ಇರುತ್ತದೆ ಎಂದರು.

See also  ಸಾರ್ವಜನಿಕರಿಗೆ ತೊಂದರೆಯಾಗುವ ಗಣಿಗಾರಿಕೆ ಬೇಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು