News Kannada
Monday, March 04 2024
ಮೈಸೂರು

ಸಕ್ಕರೆ ಕಾರ್ಖಾನೆ ಕಾರ್ಮಿಕರ ಬಾಕಿ ವೇತನಕ್ಕೆ ಸಿಎಂಗೆ ಮನವಿ

Photo Credit :

ಸಕ್ಕರೆ ಕಾರ್ಖಾನೆ ಕಾರ್ಮಿಕರ ಬಾಕಿ ವೇತನಕ್ಕೆ ಸಿಎಂಗೆ ಮನವಿ

ಮೈಸೂರು: ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೀಗೌಡ, ಜಿ.ಪಂ. ಸದಸ್ಯ ಡಿ. ರವಿಶಂಕರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.

ಮೈಸೂರಿನ ಮುಖ್ಯಮಂತ್ರಿಗಳ ನಿವಾಸದ ಬಳಿ ನೆರೆದಿದ್ದ ಕಾರ್ಖಾನೆಯ ನೌಕರರೊಂದಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತನಾಡಿದ ದೊಡ್ಡಸ್ವಾಮೇಗೌಡರು ಕಾರ್ಖಾನೆಯ ನೌಕರರು ಕೆಲಸವೂ ಇಲ್ಲದೇ, ಸಂಬಳವೂ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದು, ಜೀವನ ನಿರ್ವಹಣೆ ಮಾಡಲು ತುಂಬಾ ಕಷ್ಟವಾಗಿದೆ ಆದ್ದರಿಂದ ದಸರೆಯ ಕೊಡುಗೆಯಾಗಿ ಬಾಕಿ ಉಳಿದಿರುವ ಕಾರ್ಮಿಕರ ವೇತನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನಗೂ ಕಾರ್ಖಾನೆಯ ಕಾರ್ಮಿಕರ ಸಮಸ್ಯೆ ಗೊತ್ತಿದೆ, ನಿಮ್ಮ ಸಮಸ್ಯೆಯನ್ನು ಅತೀ ಶೀಘ್ರದಲ್ಲೇ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ, ಜಿ.ಪಂ. ಸದಸ್ಯ ಡಿ. ರವಿಶಂಕರ್, ಮಾಜಿ ಸದಸ್ಯ ಮಾರ್ಚಳ್ಳಿ ಶಿವರಾಮು, ರಾಜಯ್ಯ, ಹೆಬ್ಬಾಳು ವೆಂಕಟರಾಮ್, ಸಾಲಿಗ್ರಾಮ ಎಸ್.ಪಿ. ತಮ್ಮಯ್ಯ, ಹನುಮಾನ್ ಬಾಬು, ಹಾಗೂ ಕಾರ್ಖಾನೆಯ ಕಾರ್ಮಿಕರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು