News Kannada
Saturday, February 24 2024
ಮೈಸೂರು

ಸರ್ಕಾರದಿಂದ ಸಾಹಸಸಿಂಹ ವಿಷ್ಣುವರ್ಧನ್ ಜಯಂತಿ ಆಚರಿಸುವಂತೆ ಆಗ್ರಹ

Photo Credit :

ಸರ್ಕಾರದಿಂದ ಸಾಹಸಸಿಂಹ ವಿಷ್ಣುವರ್ಧನ್ ಜಯಂತಿ ಆಚರಿಸುವಂತೆ ಆಗ್ರಹ

ಮೈಸೂರು: ಕನ್ನಡದ ಅತ್ಯುತ್ತಮ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಬೇಕೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಒತ್ತಾಯಿಸಿದರು.

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗ, ವಿಷ್ಣು ಸೇನಾ ಸಮಿತಿ, ಮೈಸೂರಿನ ಗಾಂಧಿವೃತ್ತ ಸಂಘದ ವತಿಯಿಂದ ಇಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗವಿರುವ ಡಾ.ವಿಷ್ಣುವರ್ಧನ್ ಉದ್ಯಾನವನದಲ್ಲಿ ವಿಷ್ಣು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಅವರು, ವಿಷ್ಣುವರ್ಧನ್ ಅವರು ಅತ್ಯುತ್ತಮ ನಟರಾಗಿದ್ದರು. ಅವರ ಪ್ರತಿಯೊಂದು ಚಿತ್ರಗಳು ಕೌಟುಂಬಿಕ ಪ್ರಧಾನವಾಗಿತ್ತಲ್ಲದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು. ಅವರು ಅನೇಕ ಕಲಾವಿದರಿಗೆ ಸ್ಫೂರ್ತಿ. ವಿಷ್ಣು ಅವರ ಸರಳತೆ ಪ್ರತಿಯೊಬ್ಬರಿಗೂ ಮಾದರಿ. ಇಂತಹ ಮೇರು ನಟನ ಜಯಂತಿಯನ್ನು ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಆಚರಿಸಿ ಯುವ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತರಬೇಕು ಎಂದರು.

ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ಅರಮನೆ ಪಕ್ಕದ ಉದ್ಯಾನಕ್ಕೆ ಡಾ.ವಿಷ್ಣುವರ್ಧನ್ ರವರ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಿ ಅಲ್ಲಿ ವಿಷ್ಣು ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ನಗರಪಾಲಿಕೆಯನ್ನು ಆಗ್ರಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು