News Kannada
Wednesday, October 04 2023
ಮೈಸೂರು

ಹೊಸ ವರ್ಷವನ್ನು ಸ್ವಾಗತಿಸಲು ಮೈಸೂರಲ್ಲಿ ಸಿದ್ಧವಾಗುತ್ತಿದೆ 2 ಲಕ್ಷ ಲಾಡು

Photo Credit :

ಹೊಸ ವರ್ಷವನ್ನು ಸ್ವಾಗತಿಸಲು ಮೈಸೂರಲ್ಲಿ ಸಿದ್ಧವಾಗುತ್ತಿದೆ 2 ಲಕ್ಷ ಲಾಡು

ಮೈಸೂರು: 2018ನ್ನು ಸಂಭ್ರಮದಿಂದ ಬರಮಾಡಿಕೊಳ್ಳುಲು ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಸ್ಥಾನದಲ್ಲಿ ನೂತನ ವರ್ಷವನ್ನ ಸ್ವಾಗತಿಸಲು ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನ ಭಕ್ತರಿಗೆ ವಿತರಿಸುವ ಮೂಲಕ ಎಲ್ಲರಿಗೂ ನೂತನ ವರ್ಷ ಒಳ್ಳೆಯದನ್ನ ಮಾಡಲಿ ಎಂದು ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನಗರದ ಪ್ರಸಿದ್ದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಸ್ಥನದಲ್ಲಿ ಹೊಸ ವರ್ಷ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿದ್ದು ಬಂದ ಭಕ್ತಾದಿಗಳಿಗೆ ಲಾಡು ವಿತರಿಸಿ ಹೊಸ ವರ್ಷ ಜೀವನದಲ್ಲಿ ಹೊಸ ತನ ತರಲಿ ಎಂದು ಶುಭಾಷಯ ಹೇಳಿ ಭಕ್ತರಿಗೆ ವಿತರಿಸಲು ತಿರುಪತಿಯ ಮಾದರಿಯ 2 ಲಕ್ಷ ಲಾಡುಗಳನ್ನ ಸಿದ್ದಪಡಿಸಿಸಲಾಗುತ್ತಿದೆ.

ಸುಮಾರು 40ಕ್ಕೂ ಹೆಚ್ಚು ಬಾಣಸಿಗರು ಡಿಸೆಂಬರ್ 21 ರಿಂದಲೇ ಹಗಲು-ರಾತ್ರಿ ಲಡ್ಡುಗಳನ್ನು ತಯಾರಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಜನವರಿ 1ರಂದು ಮುಂಜಾನೆ 5ರಿಂದ ರಾತ್ರಿ 11ರ ತನಕ ಪ್ರಸಾದ ವಿತರಣೆ ಕಾರ್ಯ ಒಂದು ಕ್ಷಣವೂ ನಿಲ್ಲುವುದಿಲ್ಲ. ಸಾವಿರಾರು ಮಂದಿ ಭಕ್ತರು ಅಂದು ದೇವಾಲಯಕ್ಕೆ ಬಂದು ದರ್ಶನ ಪಡೆಯುತ್ತಾರೆ. ಅವರೆಲ್ಲರಿಗೂ ಸಂತೃಪ್ತಿಯಾಗುವಷ್ಟು ಪ್ರಸಾದ ಕೊಡಲಾಗುತ್ತದೆ. ಇದೇ ಕಾರಣಕ್ಕೆ ಅಂದು ದೇವಾಲಯಕ್ಕೆ ಸಹಸ್ರಾರು ಭಕ್ತ ಸಮೂಹ ದೇವಾಲಯದತ್ತ ಹರಿದುಬರುತ್ತದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದರೂ ಕಳೆದ 16 ವರ್ಷಗಳಿಂದ ಈ ಸತ್ಕಾರ್ಯ ಮಾಡುವುದನ್ನು ನಿಲ್ಲಿಸಿಲ್ಲ. ಭಕ್ತರೇ ನಮ್ಮೆಲ್ಲಾ ಸತ್ಕಾರ್ಯಗಳನ್ನು ಮುಂದುವರೆಸುತ್ತಿರುವಾಗ ನನಗೇಕೆ ಹಿಂಜರಿಕೆ ಎನ್ನುತ್ತಾರೆ ದೇವಾಲಯದ ಸಂಸ್ಥಾಪಕರಾದ ಪ್ರೊ. ಶ್ರೀ ಭಾಷ್ಯಂ ಸ್ವಾಮೀಜಿ.

ಲಾಡು ಸಿದ್ದತೆ ಹೇಗೆ: ತಿರುಪತಿ ಮಾದರಿಯ 2 ಲಕ್ಷ ಲಡ್ಡುಗಳನ್ನು ತಯಾರಿಸಲು 40 ಮಂದಿ ಬಾಣಸಿಗರು 15 ದಿನಗಳಿಂದ ಶ್ರಮಿಸುತ್ತಿದ್ದಾರೆ. ಮಾಮೂಲಿ ಲಡ್ಡುಗಳೊಂದಿಗೆ ಗಣ್ಯ ವ್ಯಕ್ತಿಗಳಿಗೂ ಪ್ರತ್ಯೇಕ ಲಡ್ಡುಗಳು ಸಿದ್ಧಗೊಳ್ಳುತ್ತಿವೆ. ಇದಕ್ಕಾಗಿ 1500 ಗ್ರಾಂ ತೂಕದ 5000 ಲಡ್ಡುಗಳು, 100 ಗ್ರಾಂ ತೂಕದ 2 ಲಕ್ಷ ಲಡ್ಡುಗಳು ಸಿದ್ಧಗೊಳ್ಳುತ್ತವೆ. ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲು 50 ಕ್ವಿಂಟಾಲ್ ಕಡ್ಲೆ ಹಿಟ್ಟು, 100 ಕ್ವಿಂಟಾಲ್ ಸೆಕ್ಕರೆ, 4000 ಲೀಟರ್ ಖಾದ್ಯ ತೈಲ, 100 ಕೆ.ಜಿ ಗೋಡಂಬಿ, 100 ಕೆ.ಜಿ ಒಣದ್ರಾಕ್ಷಿ, 50 ಕೆ.ಜಿ ಬಾದಮಿ, 50 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ ಬೂರಾ ಸಕ್ಕರೆ, 10 ಕೆ.ಜಿ ಪಿಸ್ತಾ, 20 ಕೆ.ಜಿ ಏಲಕ್ಕಿ, 20 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 5 ಕೆ.ಜಿ ಪಚ್ಚೆ ಕರ್ಪೂರ, 50 ಕೆ.ಜಿ ಲವಂಗವನ್ನು ಬಳಸಲಾಗುತ್ತಿದೆ.

ಜೊತೆಗೆ 10 ಕ್ವಿಂಟಾಲ್ ಪುಲಿಯೊಗರೆಯನ್ನ ಭಕ್ತಾಧಿಗಳಿಗೆ ವಿತರಿಸಲಾಗುತ್ತಿದ್ದು, ಜಾತಿ, ಮತ, ಪಂಥದ ಇಲ್ಲದೆ ಸಮಾಜ ಶಾಂತಿಯಿಂದಿರಬೇಕು. ಸಮಾಜದಲ್ಲಿರುವ ಜಾತಿ, ಮತ, ವರ್ಗದವರೆಲ್ಲರೂ ಸಹಬಾಳ್ವೆಯಿಂದ ಬದುಕಬೇಕೆಂಬ ಆಶಯ ನಮ್ಮದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ದೇವಾಲಯದ ಆಡಳಿತಾಧಿಕಾರಿ.

See also  ಕೊಡಗಿನಲ್ಲಿ ಪ್ರವಾಹ ನಷ್ಟದಿಂದ ರಾಜ್ಯ ಪ್ರವಾಸೋದ್ಯಮ ನಿಗಮಕ್ಕೆ ಪೆಟ್ಟು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

181

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು