ಚಾಮರಾಜನಗರ: ಚಿರತೆಯೊಂದು ಕಾಡು ಹಂದಿಯನ್ನು ಬೇಟೆಯಾಡಿರುವ ಸಂಬಂಧದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಚಿರತೆ ಮರದ ಮೇಲೆ ಕುಳಿತು ಹಂದಿಗಾಗಿ ಕೆಲ ಕಾಲ ಹೊಂಚು ಹಾಕಿದೆ. ಕ್ಷಣಾರ್ಧದಲ್ಲಿ ಮರದಿಂದ ಇಳಿದು ಹಂದಿಯನ್ನು ಬೇಟೆಯಾಡಿದೆ. ನೋಡ ನೋಡುತ್ತಿದ್ದಂತೆ ಹಂದಿಯನ್ನು ಮರದ ಮೇಲೆ ಹೊತ್ತೊಯ್ದ ದೃಶ್ಯವನ್ನು ಅರಣ್ಯ ಸಿಬ್ಬಂದಿ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.