News Karnataka Kannada
Friday, March 29 2024
Cricket
ಮೈಸೂರು

ತರಾತುರಿಯಲ್ಲಿ ಬಾಂಬ್ ನಿಷ್ಕ್ರೀಯಾ ದಳ ರಚನೆ

Photo Credit :

ತರಾತುರಿಯಲ್ಲಿ ಬಾಂಬ್ ನಿಷ್ಕ್ರೀಯಾ ದಳ ರಚನೆ

ಮೈಸೂರು: ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟರು ಎಂಬ ಗಾದೆ ಮಾತು ಮೈಸೂರಿನಲ್ಲಿ ಬಾಂಬ್ ಸ್ಪೋಟವಾದ ನಂತರ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಗೆ ಅನ್ವಯಿಸುತ್ತದೆ. ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಂತರ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳವನ್ನು ಮೈಸೂರಿನಲ್ಲಿ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.


ಪ್ರತಿ ವರ್ಷವೂ ದೇಶ ವಿದೇಶಗಳಿಂದ 25 ಲಕ್ಷಕ್ಕೂ ಹೆಚ್ಚು ಜನ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ನಗರದಲ್ಲಿ ಡಿಎಫ್ಆರ್ ಎಲ್, ಸಿಎಫ್ ಟಿಆರ್ ಐ ಹಾಗೂ ಭಾರತೀಯಾ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕ ಜೊತೆಗೆ ಸಾಫ್ಟ್ ವೇರ್ ಕಂಪನಿಗಳಾದ ಇನ್ಫೋಸಿಸ್, ಪ್ರವಾಸಿಗರನ್ನು ಆಕರ್ಷಿಸುವ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್.ಎಸ್ ನಂತಹ ಸ್ಥಳವಿದ್ದರೂ ಮೈಸೂರಿನಲ್ಲಿ ಬಾಂಬ್ ಪತ್ತೆದಳವಿದೆ. ಆದರೆ ಬಾಂಬ್ ನಿಷ್ಕ್ರೀಯ ದಳ ಇಲ್ಲ.

ಬಾಂಬ್ ನಿಷ್ಕ್ರೀಯಾ ದಳಕ್ಕೆ ಪ್ರಸ್ತಾವನೆ:
ನಗರದ ನ್ಯಾಯಾಲಯದ ಆವರಣದಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಂತರ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳವನ್ನು ಮೈಸೂರಿನಲ್ಲಿ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು, ಸಾಮಾನ್ಯವಾಗಿ ದಸರಾ ಮಹೋತ್ಸವ ಹಾಗೂ ಇತರ ವಿವಿಐಪಿ ಸಭೆಗಳು ನಡೆಯುವ ಸಂದರ್ಭದಲ್ಲಿ ಮಾತ್ರ ಬೆಂಗಳೂರಿನಿಂದ ಆಗಮಿಸುವ ಬಾಂಬ್ ನಿಷ್ಕ್ರೀಯಾ ದಳ ಕೆಲಸ ಮುಗಿಸಿ ವಾಪಸ್ಸ್ ಆಗುತ್ತಿದ್ದು, ಆದರೆ ಮೈಸೂರಿನಲ್ಲಿ ಬಾಂಬ್ ಪತ್ತೆದಳದ 12 ಸಿಬ್ಬಂದಿಯಿರುವ ಎರಡು ಬಾಂಬ್ ಪತ್ತೆದಳವಿದ್ದು ಜೊತೆಗೆ ಶ್ವಾನದಳವಿದೆ. ಇವು ಬಾಂಬ್ ಪತ್ತೆಹಚ್ಚಲು ನೈಪುಣತೆ ಪಡೆದಿದ್ದು, ಆದರೆ ಬಾಂಬ್ ನಿಷ್ಕ್ರೀಯಗೊಳಿಸುವ ತಂಡವಿಲ್ಲ. ಈ ಬಗ್ಗೆ ಮೊನ್ನೆಯ ಬಾಂಬ್ ಸ್ಫೋಟದ ನಂತರ ಎಚ್ಚೆತ್ತ ನಗರ ಪೊಲೀಸ್ ಕಮಿಷನರ್ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳವನ್ನು ಮಂಜೂರು ಮಾಡಿದ ಕೋರಿದ ಪ್ರಸ್ತಾವನೆಗೆ ಅನುಮೊದನೆ ಸಿಕ್ಕಿದೆ.

ಹುಸಿಬಾಂಬ್ ಕರೆಗಳ ವಿವರ:
ಮೈಸೂರು ನಗರದಲ್ಲಿ 2013ರ ಸೆಪ್ಟಂಬರ್ 26ರಂದು ಅಂಚೆ ಕಛೇರಿಗೆ ಹುಸಿ ಬಾಂಬ್ ಕರೆ. 2014 ಅಕ್ಟೋಬರ್ 2ರಂದು ಕೆ.ಆರ್ ಆಸ್ಪತ್ರೆಗೆ ಹುಸಿ ಬಾಂಬ್ ಕರೆ. 2014 ಸೆಪ್ಟಂಬರ್ 21ರಂದು ದಸರಾ ಮಹೋತ್ಸವ ಸಂದರ್ಭದಲ್ಲಿ ಇ-ಮೇಲ್ ದಾಳಿ ಸಂದೇಶ, 2015 ಜನವರಿ 23ರಂದು ಮೈಸೂರಿನ ಅಂಬಾವಿಲಾಸ್ ಅರಮನೆ ಹುಸಿ ಬಾಂಬ್ ಕರೆ, 2015 ಮಾರ್ಚ್ 5 ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿ ಹುಸಿ ಬಾಂಬ್ ಕರೆ, 2015 ಅಕ್ಟೋಬರ್ 1 ಖಾಸಗಿ ಕಾಲೇಜಿಗೆ ಹುಸಿ ಬಾಂಬ್ ಕರೆ, 2016 ಜನವರಿ 25 ಜಿಲ್ಲಾಧಿಕಾರಿಗಳ ಕಛೇರಿಗೆ ಹುಸಿ ಬಾಂಬ್ ಕರೆ, 2016 ಜುಲೈ 26 ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನ ನೋಟು ಮುದ್ರಣ ಘಟಕಕ್ಕೆ ಹುಸಿ ಬಾಂಬ್ ಕರೆಗಳು ಬಂದಿದ್ದು, ಮೊನ್ನೆ ನಗರದ ನ್ಯಾಯಾಲಯದ ಶೌಚಾಯಲದಲ್ಲಿ ನಡೆದ ಕಚ್ಚಾ ಬಾಂಬ್ ಸ್ಫೋಟ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳ ರಚನೆಗೆ ನಾಂದಿಯಾಯಿತು.

ಬಾಂಬ್ ನಿಷ್ಕ್ರೀಯ ದಳ ರಚನೆಗೆ ಸಿದ್ದತೆ:
ನ್ಯಾಯಾಲಯದ ಬಾಂಬ್ ಸ್ಫೋಟದ ನಂತರ ಎಚ್ಚೆತ್ತ ಮೈಸೂರು ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರೀಯಾ ದಳದ ರಚನೆಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಅದಕ್ಕೆ ಬೇಕಾದ ನುರಿತ ಸಿಬ್ಬಂದಿ ಅಯ್ಕೆ, ಅಗತ್ಯ ಪರಿಕರಗಳ ಹಾಗೂ ಸಿಬ್ಬಂದಿಗಳ ತರಬೇತಿಗೆ ಸಿದ್ದತೆ ನಡೆಸಲಾಗುತ್ತಿದ್ದು, ಬಾಂಬ್ ನಿಸ್ಕ್ರೀಯಾ ದಳ ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೊದನೆ ಸಿಕ್ಕಿದೆ. ಈಗ ಸದೃಢ ಬಾಂಬ್ ನಿಷ್ಕ್ರೀಯಾ ದಳವನ್ನು ರಚನೆ ಮಾಡಲಾಗುವುದೆಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು