News Karnataka Kannada
Saturday, April 20 2024
Cricket
ಮೈಸೂರು

ಪಿಯು ಬೋರ್ಡ್ ಯಡವಟ್ಟು:10 ಅಂಕ ಪಡೆದು ಫೇಲಾಗಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ 85 ಅಂಕ

Photo Credit :

ಪಿಯು ಬೋರ್ಡ್ ಯಡವಟ್ಟು:10 ಅಂಕ ಪಡೆದು ಫೇಲಾಗಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ 85 ಅಂಕ

ಮೈಸೂರು: ಪಿಯು ಬೋರ್ಡ್ ಎಡವಟ್ಟಿನಿಂದ 10 ಅಂಕ ಪಡೆದು ಫೇಲಾಗಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ 85 ಅಂಕಗಳಿಸಿರುವ ಆಶ್ಚರ್ಯಕರವಾದ ಘಟನೆಯೊಂದು ನಗರದ ಟೆರಿಷಿಯನ್ ಕಾಲೇಜಿನಲ್ಲಿ ನಡೆದಿದೆ.

II PU girl scores 10 marks in History, revaluation fetches her 85 marks!-1ಮೈಸೂರಿನ ರಾಜೀವ್ ನಗರದ ಅಬ್ದುಲ್ ಖಲೀಲ್ ಅವರ ಪುತ್ರಿ ಆರ್ಷಿಯಾ ಸಮ್ರಿನ್ ಸಿದ್ದಾರ್ಥನಗರದ ಟೆರಿಷಿಯನ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಈ ಸಾಧನೆ ಮಾಡಿರುವಾಕೆ. ಈಕೆ ಇಂಗ್ಲಿಷ್ ನಲ್ಲಿ 80, ಹಿಂದಿ 91, ಅರ್ಥಶಾಸ್ತ್ರ 93, ವಾಣಿಜ್ಯ ಶಾಸ್ತ್ರ 95, ಅಕೌಂಟ್ಸ್ ನಲ್ಲಿ 85 ಅಂಕ ಗಳಿಸಿದ್ದಳು. ಆದರೆ, ಇತಿಹಾಸದಲ್ಲಿ ಮಾತ್ರ ಕೇವಲ 10 ಅಂಕ ಪಡೆದು ಅನುತೀರ್ಣಗೊಂಡಿದ್ದಳು. ಇದರಿಂದಾಗಿ ಖಿನ್ನತೆ ಗೊಳಗಾಗಿದ್ದಳು.

ಪೋಷಕರು, ಶಿಕ್ಷಕರು ಧೈರ್ಯ ತುಂಬಿ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಕಾಫಿ ಪಡೆದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಈಕೆ ಇತಿಹಾಸ ವಿಷಯದಲ್ಲಿ 10 ಅಂಕ ಪಡೆದು ಪೇಲಾಗಿದ್ದಾಕೆ ಮರು ಮೌಲ್ಯಮಾಪನದಲ್ಲಿ 85 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

ಹಾಸಿಗೆ ಹಿಡಿದಿದ್ದ ವಿದ್ಯಾರ್ಥಿನಿ:
ಬೇರೆ ಎಲ್ಲಾ ಎಲ್ಲಾ ವಿಷಯಗಳಲ್ಲೂ ಉನ್ನತ ದರ್ಜೆಯಲ್ಲಿ ಪಾಸಾಗಿದ್ದ ವಿದ್ಯಾರ್ಥಿನಿ ಇತಿಹಾಸ ವಿಷಯದಲ್ಲಿ 10 ಅಂಕ ಪಡೆದು ಆಶ್ಚರ್ಯರೀತಿಯಲ್ಲಿ ಫೇಲಾಗಿದ್ದು ಇದರ ಖಿನ್ನತೆಗೊಳಗಾಗಿ ಹಾಸಿಗೆ ಹಿಡಿದಿದ್ದ ಈಕೆ ಶಿಕ್ಷಕರು ಹಾಗೂ ಪೋಷಕರು ಧೈರ್ಯ ತುಂಬಿ ಮರು ಮಲ್ಯಮಾಪನ ಮಾಡಿಸಿದ್ದರಿಂದ ಉನ್ನತ ದರ್ಜೆಯಲ್ಲಿ ಪಾಸಾಗಿದರಿಂದ ಚೇತರಿಸಿಕೊಂಡಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು