ಮೈಸೂರು: ವಿದೇಶಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಪಾಸ್ ಪೋರ್ಟ್, ವೀಸಾ, ಮೊಬೈಲ್ ಫೋನ್ ಹಾಗೂ ಪರ್ಸ್ ಅನ್ನು ಫೇಸ್ ಬುಕ್ ಮೂಲಕ ಮರಳಿ ಪಡೆದಿದ್ದಾರೆ.
ವಿದೇಶಿ ಮಹಿಳೆಯೊಬ್ಬರು ಪಾಸ್ ಪೋರ್ಟ್, ವೀಸಾ, ಮೊಬೈಲ್ ಫೋನ್ ಹಾಗೂ ಪರ್ಸ್ ನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದು, ನಗರದ ಗಾಯಿತ್ರಿಪುರಂ ನಿವಾಸಿ ಮಧು ಎಂಬುವವರು ಅಕ್ಟೋಬರ್ 25 ರಂದು ಮೈಸೂರು ಬನ್ನೂರು ರಸ್ತೆಯಲ್ಲಿ ಮೋಟಾರ್ ಬೈಸಿಕಲ್ ನಲ್ಲಿ ಸಂಚಾರಿಸುತ್ತಿದಾಗ ಮೆಲ್ಲಹಳ್ಳಿ ಬಳಿ ಬ್ರೆಜಿಲ್ ರಾಷ್ಟ್ರೀಯ ಮಹಿಳೆಯ ಪಾಸ್ಪೋರ್ಟ್, ಮೊಬೈಲ್, ವೀಸಾ ಒಳಗೊಂಡ ಪರ್ಸ್ ದಾರಿಯಲ್ಲಿ ಸಿಕ್ಕಿದೆ. ಕೊನೆಗೆ ಸಿಕ್ಕ ವಸ್ತುವನ್ನು ಮಧು ಅವರು ನಗರದ ಪೊಲೀಸ್ ಆಯುಕ್ತರ ಕಚೇರಿಗೆ ನೀಡಿದ್ದಾರೆ.
ವಿದೇಶಿ ಯುವತಿಯ ಪಾಸ್ಪೋರ್ಟ್ ಹಾಗೂ ಇತರೆ ವಸ್ತುಗಳನ್ನು ಕಳೆದುಕೊಂಡವರು ನಗರ ಪೊಲೀಸ್ ಕಮೀಷನರ್ ಅವರ ಕಚೇರಿ, ನಗರ ವಿಶೇಷ ವಿಭಾಗಕ್ಕೆ ಹಾಜರಾಗಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಸದರಿ ವಿದೇಶಿಯರ ಬಗ್ಗೆ ಮಾಹಿತಿ ಹೊಂದಿರುವವರು ಪೊಲೀಸ್ ಕಮೀಷನರ್ ಕಚೇರಿ ದೂ. 0821-2318137,2418537 ಸಂಪರ್ಕಿಸುವಂತೆ ಮೈಸೂರು ನಗರ ಪೊಲೀಸ್ ಫೇಸ್ ಬುಕ್, ವಾಟ್ಸ್ಆಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಾದಲ್ಲಿ ಪ್ರಕಟಿಸಲಾಯಿತು.
ಪೊಲೀಸ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಸುಳಿವನ್ನು ಆಧರಿಸಿ ಕಮೀಷನರ್ ಕಚೇರಿಗೆ ಆಗಮಿಸಿದ ಬ್ರಿಜೆಲ್ ರಾಷ್ಟ್ರೀಯ ಮಹಿಳೆ ಪೊಲೀಸ್ ಕಮೀಷನರ್ ದಯಾನಂದ್ ಅವರಿಗೆ ಸೂಕ್ತ ವಿವರಗಳನ್ನು ನೀಡಿ ತಮ್ಮ ಪಾಸ್ ಪೋರ್ಟ್, ವೀಸಾ, ಮೊಬೈಲ್ ಮತ್ತು ಪರ್ಸ್ ನ್ನು ಮರಳಿ ಪಡೆದುಕೊಂಡಿದ್ದಾರೆ.