ಮೈಸೂರು: ಮೇವು ಸಿಗದೆ ಕಸ ತಿನ್ನಲು ಹೋದ ಹಸುವೊಂದು ರಿಂಗ್ ರಸ್ತೆಯ ಮಧ್ಯ ಮೋರಿಯಲ್ಲಿ ಬಿದ್ದು ಎರಡು ಗಂಟೆಗಳ ಕಾಲ ಒದ್ದಾಡಿದ ಘಟನೆ ನಗರದ ಜಯದೇವ ನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಇಂದು ಬೆಳ್ಳಗ್ಗೆ ಮೈಸೂರು ನಗರದ ಹೊರ ಹೊಲಯದ ರಿಂಗ್ ರಸ್ತೆಯ ರಾಯಲ್ ಇನ್ ಹೊಟೇಲ್ ಹತ್ತಿರ ರಿಂಗ್ ರಸ್ತೆಯ ವಿಭಜಕದ ಪಕ್ಕ ತೆರೆದ ಚರಂಡಿಗೆ ಜನರೆಲ್ಲ ಕಸ ಹಾಕಿ ಮುಚ್ಚಿದ್ದರು. ಬೆಳ್ಳಗ್ಗೆ ಹಸವೊಂದು ಅಲ್ಲಿ ಕಸ ತಿನ್ನಲು ಹೋಗಿ ಚರಂಡಿ ಒಳಗೆ ಸಿಕ್ಕಿಕೊಂಡಿದೆ. ಕೊನೆಗೆ ಪೊಲೀಸರು ಅಗ್ನಿ ಶಾಮಕದಳ ಕ್ರೇನ್ ಮೂಲಕ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಜೀವಂತವಾಗಿ ಮೇಲೆತ್ತಿದರು.
ಮೈಸೂರು ನಗರದಲ್ಲಿ ಬಿಡಾಡಿ ದನಗಳ ಹಾವಲಿ ಹೆಚ್ಚಾಗಿದ್ದು, ಸಂಬಂಧ ಪಟ್ಟ ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರು ಏನೂ ಪ್ರಯೋಜನವಾಗಿಲ್ಲ. ಅಲ್ಲದೆ ತೆರೆದ ಚರಂಡಿಗಳು ಎಲ್ಲೆಂದರಲ್ಲಿ ಬಾಯ್ತೆರೆದುಕೊಂಡಿದ್ದು, ಇಂತಹ ಅನಾಹುತಗಳಿಗೆ ಮಹಾನಗರಪಾಲಿಕೆಯೇ ಕಾರಣವೆಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.