ಮೈಸೂರು: ತನ್ನ ಹುಟ್ಟುಹಬ್ಬ ಆಚರಣೆಯನ್ನು ಮಾಡಲು ಹೋಗಿ ಹೆಣವಾಗಿ ವಾಪಾಸ್ ಬಂದ ಘಟನೆ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನದೇ ಹುಟ್ಟು ಹಬ್ಬದ ಪಾರ್ಟಿ ಮಾಡಿಕೊಳ್ಳಲು ಹೋಗಿ ಹೆಣವಾದವನ ಹೆಸರು ಮಧು(24). ಈತ ಆರ್ ಬಿಐ ಭಾರತೀಯ ನೋಟು ಮುದ್ರಣಾಲಯ ಘಟಕದಲ್ಲಿ ದಿನಗೂಲಿ ನೌಕರನಾಗಿದ್ದು, ಮೂಲತಃ ಮೈಸೂರಿನ ಕುಂಬಾರಕೊಪ್ಪಲಿನ ಮಹದೇಶ್ವರ ಬಡವಾಣೆಯ ನಿವಾಸಿಯಾಗಿದ್ದಾನೆ.
ನವೆಂಬರ್ 2 ರಂದು ಈತನ ಜನ್ಮದಿನವಾಗಿದ್ದು, ಅದರ ಹುಟ್ಟುಹಬ್ಬ ಆಚರಣೆಯನ್ನು ನೆನ್ನೆ ಆಚರಿಸಿಕೊಳ್ಳಲು ತನ್ನ 8 ಮಂದಿ ಸ್ನೇಹಿತರೊಂದಿಗೆ ಹಳೆ ಉಂಡಲವಾಡಿಯ ಕೆ.ಆರ್.ಎಸ್ ಹಿನ್ನೀರಿಗೆ ಹೋಗಿದ್ದಾರೆ. ಅಲ್ಲಿ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿ ಸುಮಾರು ಸಂಜೆ 4 ಗಂಟೆ ಸಮಯಕ್ಕೆ ಮೋಜಿಗಾಗಿ ಕುಡಿದ ಅಮಲಲ್ಲಿ ನೀರನಲ್ಲಿ ಇಳಿದು ಈಜಲು ಆಗದೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ರಾತ್ರಿಯಿಡೀ ಮೃತನ ಶವಕ್ಕೆ ಹುಡುಕಾಟ ನಡೆಸಿದ ಇಲವಾಲ ಠಾಣೆಯ ಪೊಲೀಸರು ಬೆಳ್ಳಗ್ಗೆ ಆತನ ಶವವನ್ನು ಹೊರತೆಗೆದಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಮರಣೊತ್ತರ ಪರೀಕ್ಷೆ ಒಳಪಡಿಸಿ ತಂದೆ ಮಂಜಪ್ಪ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡಿರುವ ತಂದೆಯ ದುಖಃ ಮುಗಿಲು ಮುಟ್ಟಿತ್ತು.