ಮೈಸೂರು: ಅಪ್ರಾಪ್ತ ಮಗಳ ಮದುವೆ ಮಾಡಲು ಹೊರಟಿರುವ ಅಣ್ಣನ ವಿರುದ್ಧ ನಿಂತು ಮದುವೆ ನಿಲ್ಲಿಸಿದ ತಂಗಿಯ ಮೇಲೆ ಹಲ್ಲೆ ನಡೆದಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉದಯಗಿರಿಯ ನಿವಾಸಿ ಜಬೀವುಲ್ಲಾ ಎಂಬಾತ ತನ್ನ ಅಪ್ರಾಪ್ತ ಮಗಳಿಗೆ ಮದುವೆ ಮಾಡಲು ಮುಂದಾದ ವಿಷಯ ತನ್ನ ತಂಗಿ ನಗೀನ್ತಾಜ್ ಳಿಗೆ ಗೊತ್ತಾಗಿ ನೇರ ಅಣ್ಣನ ಮನೆಗೆ ಬಂದು ಮದುವೆಯನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದಾಳೆ. ಅಲ್ಲದೆ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಇರಿಸಿಕೊಂಡಿದ್ದಾರೆ. ಆದರೆ ಮದುವೆ ಮಾತುಕತೆವರೆಗೆ ಸಾಕಷ್ಟು ಹಣ ಖರ್ಚಾಗಿದ್ದು, ಅದರ ಹಣ ನೀಡುವಂತೆ ತಂಗಿಯನ್ನು ಪೀಡಿಸಿದ್ದಾನೆ. ಇದಕ್ಕೆ ಒಪ್ಪದ ತಂಗಿಗೆ ಕಬ್ಬಿಣ ರಾಡಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಸದ್ಯಕ್ಕೆ ಕೆ.ಆರ್. ಆಸ್ಪತ್ರೆ ಸೇರಿರುವ ನಗೀನ್ತಾಜ್ ಅಣ್ಣನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.