ಮೈಸೂರು: ಮಂಗಳೂರಿನಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಶಾಂತಿಯುತವಾದ ಪರಿಸರವನ್ನು ಕಾಪಾಡಲು ಭಂಗ ತರುತ್ತಿವೆ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಈಗಾಗಲೇ ಮಂಗಳೂರು ಮತ್ತು ಹಾಸನದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲವೆಂದರು. ನಂತರ ಮಾತನಾಡಿದ ಅವರು ಸಚಿವ ಆಂಜನೇಯ ಭ್ರಷ್ಟಚಾರ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದ್ದು ಅದರ ವರದಿ ಬಂದ ಬಳಿಕವಷ್ಟೇ ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೂ ರಾಜೀನಾಮೆ ಕೇಳುವ ಪ್ರಶ್ನೆಯೇ ಇಲ್ಲವೆಂದರು.
ಇನ್ನೂ ಸಿಎಂ ಇಬ್ರಾಹಿಂ ದೇವೇಗೌಡ ಭೇಟಿ ಯಾವುದೇ ರಾಜಕೀಯ ಚರ್ಚೆಗೆಲ್ಲ ಅದೊಂದು ವೈಯುಕ್ತಿ ಭೇಟಿ ಎಂದ ಸಿಎಂ ಬಿಹಾರ ಚುನಾವಣೆಯ ನಂತರ ಜನತಾ ಪರಿವಾರ ಹೊಂದಾಣಿಕೆ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಅದು ಸಾಧ್ಯವೇ ಮರುಪ್ರಶ್ನೆ ಹಾಕಿದರು. ಇನ್ನೂ ಇಂದಿಗೆ ಎರಡೂವರೆ ವರ್ಷ ಪೂರೈಸುತ್ತಿರುವ ಸರ್ಕಾರದ ಬಗ್ಗೆ ಮಾತನಾಡಿದ ಅವರು ಸರ್ಕಾರ ಸಾಧನೆ ತೃಪ್ತಿ ತಂದಿದೆ ಎಂದರು.
ಪ್ರಾದೇಶಿಕ ಆಯುಕ್ತರಿಗೆ ಮ್ಯಾಜೀಸ್ಟ್ರೇಟ್ ಅಧಿಕಾರ ಇರುವುದಿಲ್ಲ ಆದ್ದರಿಂದ ಮೈಸೂರಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರಿಂದ ಮಡಿಕೇರಿ ಗಲಭೆಯ ಪ್ರಕರಣವನ್ನು ತನಿಖೆಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಮಡಿಕೇರಿ ಗಲಭೆಯಾದ ನಂತರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಗಲಭೆಯ ಬಗ್ಗೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಂದ ತನಿಖೆ ಮಾಡಿಸಲಾಗುವುದು ಎಂದು ಕಳೆದ ಮೂರು ದಿನಗಳ ಹಿಂದೆ ತಿಳಿಸಿದ್ದರು. ಆದರೆ ಪ್ರಾದೇಶಿಕ ಆಯುಕ್ತರಿಗೆ ಮಾಜಿಸ್ಟ್ರೇಟಿಯಲ್ ಪವರ್ ಇರುವುದಿಲ್ಲ. ಅದಕ್ಕೆ ಮೈಸೂರು ಜಿಲ್ಲಾಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಇಂದು ಸ್ಪಷ್ಟಪಡಿಸಿದರು.
ಪ್ರಶ್ನೆ ಎಂದರೆ ಗಲಭೆಯಂತಹ ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವಲ್ಲಿ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ವಿಫಲವಾಗಿದೆಯೇ ಎಂಬ ಆರೋಪಗಳ ಜತೆಗೆ ರಾಜ್ಯವನ್ನಾಳುವ ಮುಖ್ಯಮಂತ್ರಿಗೆ ಪ್ರಾದೇಶಿಕ ಆಯುಕ್ತರ ಹಾಗೂ ಜಿಲ್ಲಾಧಿಕಾರಿಗಳ ಅಧಿಕಾರಗಳೇನು ಎಂಬ ಬಗ್ಗೆ ಅರಿವಿಲ್ಲದೆ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ.