ಮೈಸೂರು: ವರದಕ್ಷಿಣೆಗಾಗಿ ಪತ್ನಿಯನ್ನು ಹೊರದಬ್ಬಿದ ಎಂಬ ಕಾರಣಕ್ಕೆ ನ.16ರಂದು ಪತಿ ಮನೆ ಎದುರು ಧರಣಿ ಕುಳಿತ ಪತ್ನಿ ಎಂಬ ಸುದ್ದಿ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ನವೆಂಬರ್ 16ರಂದು ಪತ್ನಿಯು ನ್ಯಾಯಕ್ಕಾಗಿ ಪತಿಯ ಮನೆಯ ಎದುರು ಧರಣಿ ನಡೆಸಿದ್ದರು. ಆದರೆ ಇದೀಗ ಪತಿಯು ಪತ್ರಿಕಾಗೋಷ್ಠಿ ನಡೆಸಿ ಸಂಸಾರದ ಕಥೆನ್ನೇ ಬಿಚ್ಚಿಟ್ಟಿದ್ದಾನೆ. ಸ್ವಿಜರ್ಲ್ಯಾಂಡ್ ಗೆ ಹನಿಮೂನ್ ಗೆ ಕರೆದುಕೊಂಡು ಹೋಗು, ವಿಕೆಂಡ್ ನಲ್ಲಿ ನನಗೆ ಮಧ್ಯ ಕುಡಿಸಬೇಕು. ಊಟದ ಸಮಯಕ್ಕೆ ಸರಿಯಾಗಿ ಕಾಲ್ ಮಾಡ್ಬೇಕು. ದೊಡ್ಮನೆ ಯಾವಾಗ ಮಾಡ್ತೀಯಾ ಎಂದು ಪ್ರತಿನಿತ್ಯ ಟಾರ್ಚರ್ ನೀಡುತ್ತಿದ್ದ ಪತ್ನಿಯೊಂದಿಗೆ ಹೇಗೆ ಸಂಸಾರ ನಡೆಸಲಿ ಎಂದು ಪತ್ನಿಯ ಟಾರ್ಚರ್ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಗೊಳಿಟ್ಟ ಪತಿ ಪುನೀತ್.
2014 ರಲ್ಲಿ ನನಗೂ ರಜನಿಯವರಿಗೂ ಮದುವೆ ನಿಶ್ಚಯವಾಯಿತು, ಬಳಿಕ ಒಂದು ದಿನ ಇಬ್ಬರು ಒಟ್ಟಿಗೆ ಹೊರಗೆ ಹೋಗಿ ಪರಸ್ಪರ ಮಾತನಾಡಿದೇವೆ. ಈ ವೇಳೆ ನನಗೆ ಕೊಂಚ ಕೋಪವಿದೆ ಎಂದು ತಿಳಿಸಿದ ಆಕೆ ನಿಮಗೆ ಯಾವುದಾದರೂ ದುರಾಭ್ಯಸವಿದೆ ಎಂದು ಕೇಳಿದ್ದರು. ನಾನು ನನಗೆ ಯಾವುದೇ ದುರಭ್ಯಾಸವಿಲ್ಲವೆಂದು ಹೇಳಿ ಕೋಪವೆಂದರೆ ಸಾಮಾನ್ಯವಲ್ಲವೆ ಎಂದು ಕೇಳಿ ಸುಮ್ಮನಾಗಿದ್ದನು. ಆದರೆ ಮದುವೆ ಆದ ಮೊದಲ ದಿನವೇ ತನ್ನ ವರ್ತನೆ ತೋರಿದ ರಜನಿ ಮೊದಲ ದಿನವೇ ಮನೆಗೆ ಬಂದಾಗ ರೂಂಮಿನಲ್ಲಿ ಒಂದೆ ಸಮನೆ ಅಳುತ್ತಿದ್ದಳು. ತವರನ್ನು ನೆನೆಸಿಕೊಂಡು ಅಳುತ್ತಿರಬೇಕೆಂದುಕೊಂಡು ಕೇಳಿದಾಗ ನಾನು ಇಷ್ಟೂ ಚಿಕ್ಕ ಮನೆಯಲ್ಲಿ ಇಂತಹ ಚಿಕ್ಕ ರೂಂನಲ್ಲಿ ವಾಸಿಸುತ್ತೇನೆ ಎಂದು ಊಹಿಸರಲಿಲ್ಲ. ಅದಕ್ಕೆ ಬೇಸರವಾಗುತ್ತಿದೆ ನನಗೆ ದೊಡ್ಮನೆ ಯಾವಾಗ ಮಾಡುತ್ತೀಯಾ ಎಂದು ಹಠ ಹಿಡಿದಿದ್ದಳು. ಒಕೆ ಮುಂದೆ ನೋಡೋಣ ಬಿಡು ಎಂದು ಸಮಾಧಾನ ಮಾಡಿದ್ದೆ.
ಅಬ್ರಾಡ್ ಗೆ ಹನಿಮೂನ್ ಗೆ ಕರೆದೊಗಿದ್ದೇ ಅಲ್ಲೂ ಸಹ ಪ್ರತಿಕ್ಷಣ ಆಕೆಯ ಫೋಟೊ ತೆಗೆಬೇಕು ಎಂದು ಹಠಕ್ಕೆ ಬೀಳುತ್ತಿದ್ದಳು. ಅವಳ ಚಪ್ಪಲಿ ಬರುವ ಹಾಗೆ ಫೋಟೊ ತೆಗೆಯಲಿಲ್ಲ ಅನ್ನೋ ಒಂದೆ ಕಾರಣಕ್ಕೆ ಇಡೀ ಹನಿಮೂನ್ ನಲ್ಲಿ ಹಠದಿಂದ ಸಿಟ್ಟಿಗೆದ್ದು ಅಳುತ್ತಲೇ ಮುನಿಸಿಕೊಂಡಿದ್ದಳು. ಕೊನೆಗೆ ಮನೆಗೆ ಬಂದ ಮೇಲೆ ನಿಮ್ಮನ್ನು ಮದುವೆಯಾಗಿ ತಪ್ಪು ಮಾಡಿಬಿಟ್ಟೇ ಇತಂಹ ಚಿಕ್ಕ ಮನೆ ನನಗೆ ಸಾಲುತ್ತಿಲ್ಲ ದೊಡ್ಡ ಮನೆಯಾವಾಗ ಮಾಡುತ್ತೀಯಾ ಹೇಳು ಎಂದು ಆಗಾಗ ಮುನಿಸಿಕೊಂಡು ರೂಂ ಸೇರುತ್ತಿದ್ದಳು.
ಇನ್ನೂ ಒಮ್ಮೆ ನನಗೆ ನಿಮ್ಮ ಮೇಲೆ ತುಂಬಾ ಕೋಪವಿದೆ ಏಕೆಂದರೆ ನಿಮ್ಮಲ್ಲಿ ಕೇಳಿದಾಗ ನನಗೆ ನೀವು ನಿಮಗೆ ದುರಭ್ಯಾಸವಿದೆಯೇ ಎಂದು ಕೇಳಲೇ ಇಲ್ಲ. ನನಗೆ ಮದ್ಯ ಸೇವಿಸುವ ಅಭ್ಯಾಸವಿದೆ ಸೇವಿಸದೇ ಇರಲಾರೆ ಎಂದಿದ್ದಳು. ಕೊನೆಗೆ ನಾನೇ ಹಲವು ಬಾರಿ ಆಕೆಯನ್ನು ಕರೆದೊಯ್ದು ಮದ್ಯ ಕೊಡಿಸುತ್ತಿದ್ದೆ. ಆದರೂ ಅವಳ ಹಠ, ಕೋಪ ಮಾತ್ರ ಕಡಿಮೆ ಮಾಡಿರಲಿಲ್ಲ. ಇನ್ನೂ ಮಧ್ಯಾಹ್ನ ಬಂತೆಂದರೆ ಅವಳಿಗೆ ನಾನು ಊಟ ಆಯ್ತ ಎಂದು ಕಾಲ್ ಮಾಡಿ ಕೇಳ ಬೇಕಿತ್ತು. ಕೇಳದಿದ್ದರೆ ಸಂಜೆ ವೇಳೆಗೆ ಕಡಿಮೆ ಎಂದರೆ 20 ಕಾಲ್ ಮಾಡುತ್ತಿದ್ದಳು ನಿನ್ನನ್ನು ಮದುವೆಯಾಗಿ ನಾನು ತಪ್ಪು ಮಾಡಿದೆ ನನಗೆ ಒಂದ್ ಕಾಲ್ ಮಾಡಲಾಗದಷ್ಟು ಬ್ಯುಸಿ ಆಗಿದ್ದೀಯಾ ಅಲ್ವ ಎಂದು ಜಗಳವಾಡುತ್ತಿದ್ದಳು. ಯಾರೇ ಎಲ್ಲಿಗೆ ಹೋಗುತ್ತಿರುವ ವಿಷಯ ತಿಳಿದರು ನನ್ನನ್ನು ಅಲ್ಲಿಗೆ ಯಾವಗ ಕರೆದುಕೊಂಡು ಹೋಗುತ್ತೀಯಾ ಎನ್ನುತ್ತಿದ್ದಳು. ಇನ್ನೂ ಸ್ವಿಸರ್ಲ್ಯಾಂಡ್ ಗೆ ಕರೆದೊಯ್ಯಲಿಲ್ಲವೆಂದು ಅನೇಕ ದಿನಗಳ ಕಾಲ ನನ್ನೊಟ್ಟಿಗೆ ಮಾತು ಬಿಟ್ಟಿದ್ದಳು.
ಅವಳ ಫೋಟೊ ಹುಚ್ಚಾಟ ನೋಡಲಾರದೆ ಒಮ್ಮೆ ಓರ್ವ ಫೋಟೊದವನನ್ನು ಅವಳ ಫೋಟೊ ಶೂಟ್ ಮಾಡಲು ಕರೆಸಿದ್ದೇ ಕೊನೆಗೆ ಆತನನೊಟ್ಟಿಗೆ ಜಗಳಕ್ಕೆಬಿದ್ದು ಆತನ ಎದುರೆ ತಾನೂ ಧರಿಸಿದ್ದ ಬಟ್ಟೆಯನ್ನೇ ಹರಿದ್ದುಕೊಂಡು ರಂಪಾಟ ನಡೆಸಿದ್ದಳು, ಒಮ್ಮೆ ಮಡಿಕೇರಿಗೆ ಕರೆದೊಯ್ದು ಬರುತ್ತಿದ್ದಾಗ ಇದಕ್ಕಿಂದಂತೆ ಜಗಳ ತೆಗೆದು ಬಟ್ಟೆ ಹರಿದುಕೊಂಡು ನಡು ರಸ್ತೆಯಲ್ಲೇ ಹಿಂದಕ್ಕೆ ಓಡುತ್ತಿದ್ದಳು ಹೀಗೆ ನಾನು ಮದುವೆಯಾದ ಒಂದೂವರೆ ವರ್ಷದಲ್ಲಿ ನಿತ್ಯ ಅವಳಿಂದ ಕಾಟವನ್ನೇ ಅನುಭವಿಸಿದ್ದೇನೆ.
ಇನ್ನೂ ನಿಮ್ಮ ಮನೆಯಲ್ಲಿ ಒಬ್ಬಳೆ ಕೆಲಸದವಳಿದ್ದಾಳೆ ನನಗೆ ಸಾಲುವುದಿಲ್ಲ ಮತ್ತೊಬ್ಬಳನ್ನು ಮನೆಗೆ ಕೆಲಸಕ್ಕೆ ಸೇರಿಸು ಎಂದು ಹಠ ಹಿಡಿದ್ದಳು. ಒಂದು ದಿನ ಮನೆಗೆ ಗಣ್ಯರು ಬಂದಾಗ ಅವಳಿಗೆ ಸ್ವಲ್ಪ ಕಾಫಿ ತೆಗೆದುಕೊಂಡು ಬಾ ಎಂದಿದ್ದಕ್ಕೆ ಕೋಪಗೊಂಡು ನಾನೇನು ನಿಮ್ಮ ಮನೆಯ ಆಳಲ್ಲ ನೀವೇ ಬೇಕೆಂದರೆ ತಂದು ಕೊಡಿ ಎಂದು ಅನೇಕ ಪ್ರತಿಕ್ಷಣವೂ ಸಣ್ಣ ಸಣ್ಣ ವಿಚಾರಕ್ಕೂ ಕೋಪ, ಜಗಳ ಮಾಡಿಕೊಂಡು ನನ್ನೊಟ್ಟಿಗೆ ವಿರಸದಿಂದಲೇ ಕಳೆಯುತ್ತಿದ್ದಳು.
ಹೀಗೆ ಇಂತಹ ಹೆಂಡತಿಯೊಟ್ಟಿಗೆ ಒಂದು ಕ್ಷಣವು ನೆಮ್ಮದಿಯಿಂದ ಜೀವನ ನಡೆಸಲು ಆಗಲೇ ಇಲ್ಲ. ಅವಳ ಮಾನಸಿಕ ಅಸ್ವಸ್ಥತೆ ಬಗ್ಗೆ ಅವಳ ಅಮ್ಮನಿಗೂ ತಿಳಿಸಿ ಅವರೊಟ್ಟಿಗೆ ಆಸ್ಪತ್ರೆಗೆ ಹೋಗಿ ತೋರಿಸಿದ್ದೇವೆ. ಆದರೂ ಸಹ ಅದು ಗುಣಮುಖವಾಗದೆ ಇದಕ್ಕಿಂದಂತೆ ಜಗಳ ಮಾಡುತ್ತಲೇ ಇರುತ್ತಿದ್ದಳು. ಇದರಿಂದ ಜೀವನವೇ ರೋಸಿ ಹೋಗಿ ಅವಳಿಂದ ವಿಚ್ಛೇದನ ಬಯಸಿರುವುದಾಗಿ ತನ್ನ ಅಳಲು ಹೇಳಿಕೊಂಡರು ಗಂಡ ಪುನೀತ್.