News Kannada
Friday, July 01 2022

ಮೈಸೂರು

ಪ್ರೀತಿಸಿ ಮದುವೆಯಾದ ಗರ್ಭೀಣಿ ಮಹಿಳೆ ನೇಣಿಗೆ ಶರಣು - 1 min read

Photo Credit :

ಪ್ರೀತಿಸಿ ಮದುವೆಯಾದ ಗರ್ಭೀಣಿ ಮಹಿಳೆ ನೇಣಿಗೆ ಶರಣು

ಮೈಸೂರು: ಮನೆಯವರು ನಿರಾಕರಿಸಿದರೂ ಪ್ರೀತಿಸಿ ಮನೆಬಿಟ್ಟು ಹೋಗಿ, ಮದುವೆಯಾದ ನಾಲ್ಕೇ ತಿಂಗಳಲ್ಲೇ ಗರ್ಭೀಣಿಯಾದ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಗ್ರಾಮದಲ್ಲಿ ನಡೆದಿದೆ.

ನೇಣಿಗೆ ಶರಣಾದ ಮೂರು ತಿಂಗಳ ಗರ್ಭೀಣಿ ಮಹಿಳೆ ಭವ್ಯ(19) ಮೂಲತಃ ಗದ್ದಿಗೆಯ ದೇವಲಪುರ ಗ್ರಾಮದವಳಾಗಿದ್ದಾಳೆ. ಹೆಂಡತಿಯಿಂದ ವಿಚ್ಛೇಧನ ಪಡೆದು ಈಕೆಯನ್ನು ಮೋಹಿಸಿ ವಿವಾಹವಾದವನೇ ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಗ್ರಾಮದ ವೆಂಕಟೇಶ್(23). ಭವ್ಯಳ ಮೇಲೆ ಕಣ್ಣು ಹಾಕಿದ ವಿಚ್ಛೇದಿತ ವೆಂಕಟೇಶ್ ಆಕೆಯನ್ನು ವಿವಾಹ ಮಾಡಿಕೊಡುವಂತೆ ಅನೇಕ ಬಾರಿ ಭವ್ಯಳ ಪೋಷಕರ ಮನೆಗೆ ಬಂದು ಪೀಡಿಸುತ್ತಿದ್ದ, ಈ ವೇಳೆ ತನ್ನ ಮೊಬೈಲ್ ನಂಬರ್ ಬರೆದಿರುವ ಫೋಟೊವನ್ನು ಅವರಿಗೆ ಕೊಟ್ಟು ಬಂದಿದ್ದಾನೆ.  ಆದರೆ ಇವನೊಟ್ಟಿಗೆ ವಿವಾಹ ಮಾಡಿಕೊಡಲು ಭವ್ಯ ಸಹೋದರ ನಿರಾಕರಿಸಿದ್ದಾನೆ.

ಈ ವೇಳೆ ಫೋಟೊವನ್ನು ನೋಡಿದ ಭವ್ಯ ಅದರ ಹಿಂದೆ ಇದ್ದ ನಂಬರ್ ಮೂಲಕ ವೆಂಕಟೇಶ್‍ನನ್ನು ಸಂಪರ್ಕಿಸಿದ್ದಾಳೆ.  ಆತನ ಮಾತಿಗೆ ಮರುಳಾಗಿ ಆತನೊಟ್ಟಿಗೆ ನಾಲ್ಕು ತಿಂಗಳ ಹಿಂದೆ ಓಡಿ ಬಂದಿದ್ದಾಳೆ. ಇಬ್ಬರು ವಿವಾಹವಾಗಿ ಸಂಸಾರ ನಡೆಸಿದ್ದು, ಆದರೆ ದಿನಕಳೆದಂತೆ ಕುಡಿತಕ್ಕೆ ದಾಸನಾಗಿದ್ದ ವೆಂಕಟೇಶ್ ನಿತ್ಯ ಕುಡಿದು ಬಂದು ಹೆಂಡತಿ ಭವ್ಯಗೆ ಥಳಿಸುತ್ತಿದ್ದ ಎನ್ನಲಾಗಿದೆ.

ಅದರಂತೆ ರಾತ್ರಿಯು ಸಹ ಕುಡಿದು ಬಂದ ಗಲಾಟೆ ನಡೆಸಿದ್ದು, ಇಬ್ಬರ ನಡುವೆ ಜಗಳ ಶುರುವಾಗಿದೆ ಕೊನೆಗೆ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಇಬ್ಬರನ್ನು ಸಮಾಧಾನ ಮಾಡಿದ್ದಾರೆ. ಆದರೆ ರಾತ್ರಿ ಮೊಬೈಲ್‍ನಲ್ಲಿ ಮಾತನಾಡುವ ವಿಚಾರದಲ್ಲಿ ಇಬ್ಬರ ನಡುವೆ ಮತ್ತೆ ಜಗಳ ಬೆಳೆದಿದ್ದು ವೆಂಕಟೇಶ್ ಕುಡಿಯಲು ಹೋದದಕ್ಕೆ ಬೇಸರಗೊಂಡು ಈಕೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.  ಆದರೆ ಆತನೆ ಅವಳನ್ನು ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿ ನೇಣು ಹಾಕಿಕೊಂಡಿದ್ದಾಳೆ ಎಂದು ಭವ್ಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ವೆಂಕಟೇಶ್‍ನನ್ನು ವಶಕ್ಕೆ ಪಡೆದಿರುವ ನಜರ್‍ಬಾದ್ ಠಾಣೆಯ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

See also  83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥಕ್ಕೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು