ಮೈಸೂರು: ಅವ್ಯವಹಾರ, ಹಗರಣಗಳ ಆರೋಪದ ಹಿನ್ನಲೆಯಲ್ಲಿ ಯುಜಿಸಿ ಮಾನ್ಯತೆ ಕಳೆದುಕೊಂಡಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಕಾನೂನು ಬಾಹಿರವಾಗಿ ಪ್ರವೇಶಾತಿ ಆರಂಭಿಸಿದೆ ಎಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರು ಕೆಎಸ್ಒಯುಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.
ಇಂದು ಸಂಜೆ ಕೆಎಸ್ಒಯುಗೆ ಆಗಮಿಸಿದ ಜಯಲಕ್ಷ್ಮಿಪುರಂ ಠಾಣೆಯ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಕುಲಸಚಿವ ಪಿ.ಎಸ್.ನಾಯಕ್ ಅವರನ್ನು ಪ್ರಾಥಮಿಕ ವಿಚಾರಣೆ ನಡೆಸಿ, ಈ ಸಂಬಂಧ ಯುಜಿಸಿ ಮಾನ್ಯತೆ ದೊರಕುವವರೆಗೂ ಯಾವುದೇ ಪ್ರವೇಶಾತಿ ಮಾಡದಂತೆ ಕುಲಸಚಿವರಿಗೆ ತಿಳಿಸಿ ಅವರಿಂದ ಮಾನ್ಯತೆ ದೊರಕುವವರೆಗೂ ಕೆಎಸ್ಒಯು ಯಾವುದೇ ಪ್ರವೇಶಾತಿ ನಡೆಸುವುದಿಲ್ಲವೆಂಬ ಅಧಿಕೃತ ಪತ್ರವನ್ನು ಪೊಲೀಸರು ಪಡೆದುಕೊಂಡರು.
ಇನ್ನೂ ಈ ಕುರಿತು ಮಾತನಾಡಿ ಕೆಎಸ್ಒಯುನ ಕುಲಸಚಿವ ಪಿಎಸ್. ನಾಯಕ್ ಇನ್ನೂ ಯುಜಿಸಿಯಿಂದ ಮಾನ್ಯತೆ ದೊರೆತಿಲ್ಲ. ಈ ಹಿನ್ನಲೆ ಯಾವುದೇ ಪ್ರವೇಶಾತಿಯ ಅಧಿಸೂಚಿನೆಯನ್ನು ವಿವಿ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಅಕ್ರಮ ನೇಮಕಾತಿ ಸೇರಿದಂತೆ ವಿವಿಧ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಮೇಲೆ ಒಂದು ಡಿಸೆಂಬರ್ 3 ರೊಳಗೆ ಕ್ರಮ ಜರುಗಿಸುವ ಕುರಿತು ಪ್ರತಿಕ್ರಿಯಿಸಿದ ಉಪಕುಲಸಚಿವರು ಈ ಬಗ್ಗೆ ವಿವಿಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿದ್ದು, ಅದರ ತೀರ್ಮಾನದಂತೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಭಕ್ತವತ್ಸಲಂ ಏಕ ಸದಸ್ಯ ವಿಚಾರ ಆಯೋಗದ ವರದಿ ಅನ್ವಯ ರಾಜ್ಯಪಾಲರು ನೀಡಿರುವ ನಿರ್ದೇಶನದ ಲಕ್ಕೋಟ್ಟೆಯಲ್ಲಿ ಯಾವುದೇ ಉಪಕುಲಪತಿಗಳ ಹೆಸರಿಲ್ಲ. ಅಲ್ಲದೆ ಯಾವುದೇ ವ್ಯಕ್ತಿಗಳ ಹೆಸರಿಲ್ಲ ಆದರೆ ಅಕ್ರಮ ನಡೆಸಿರುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಲಾಗಿದ್ದು, ಇದರನ್ವಯ ಇಬ್ಬರು ಉಪ ಕುಲಪತಿಗಳು ಸೇರಿದಂತೆ ಅಕ್ರಮ ನೇಮಕವಾಗಿರುವ 21 ಮಂದಿ ಪ್ರಾದೇಶಿಕ ನಿರ್ದೇಶಕರು ಹಾಗೂ ಅಧ್ಯಾಪಕರ ಸೇರಿದಂತೆ ಇನ್ನಿತರರ ವಿರುದ್ಧ ಡಿಸೆಂಬರ್ 3 ರೊಳಗೆ ಕ್ರಮ ಜರುಗಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.