News Kannada

ಮೈಸೂರು

ವಸತಿ ಶಾಲೆಯಿಂದ ಮೂವರು ಮಕ್ಕಳು ನಾಪತ್ತೆ - 1 min read

ವಸತಿ ಶಾಲೆಯಿಂದ ಮೂವರು ಮಕ್ಕಳು ನಾಪತ್ತೆ

ಮೈಸೂರು: ತಿ. ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ವಿವೇಕಾನಂದ ವಸತಿ ಶಾಲೆಯಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

Three students go missing from school premises; management remains tightlipped-1ಬನ್ನೂರಿನಲ್ಲಿರುವ ವಿವೇಕಾನಂದ ವಸತಿ ಶಾಲೆ ಒಂದನೇ ತರಗತಿಯಿಂದ ಪಿಯುಸಿವರೆಗೆ ಸುಮಾರು 3 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 700 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದಲ್ಲಿದ್ದಾರೆ. ಇದರಲ್ಲಿ ಬಹುತೇಕ ಸರ್ಕಾರ ನೌಕರರ, ಉದ್ಯಮಿಗಳಿಗಳು ಹಾಗೂ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದ ಮಕ್ಕಳೇ ಇಲ್ಲಿದ್ದಾರೆ. ಮನೆಯಲ್ಲಿ ಸರಿಯಾಗಿ ಓದುವುದಿಲ್ಲ ಎಂಬ ಕಾರಣಕ್ಕೆ ಈ ವಸತಿ ಶಾಲೆಯಲ್ಲಿ ಸೇರಿಸಿದ್ದೇವೆ ಎನ್ನುತ್ತಾರೆ ಪೋಷಕರು.

ಆದರೆ ನಿನ್ನೆ ಸಂಜೆ ಐದು ಗಂಟೆ ಸಮಯದಲ್ಲಿ ಒಂಭತ್ತನೆ ತರಗತಿ ಓದುತ್ತಿರುವ ದರ್ಶನ್(15), 10 ನೇ ತರಗತಿ ಓದುತ್ತಿರುವ ರವಿಚಂದ್ರ(15) ಹಾಗೂ ಅಭಿಷೇಕ್(15) ಮೂವರು ವಸತಿ ಶಾಲೆಯಿಂದ ಕಾಣೆಯಾಗಿದ್ದಾರೆ. ಇದರ ಬಗ್ಗೆ ಶಾಲೆ ತಲೆಕಡೆಸಿಕೊಂಡಿಲ್ಲ ಹಾಗೂ ಯಾವುದೇ ದೂರನ್ನು ಸಹ ಪೊಲೀಸ್ ಠಾಣೆಯಲ್ಲಿ  ದಾಖಲಿಸಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಮಕ್ಕಳು ನಾಪತ್ತೆಯಾಗುವುದು ಇಲ್ಲಿ ಸಾಮಾನ್ಯ ಸ್ನೇಹಿತರ ಮನೆಗೆ ಹೋಗಿರುತ್ತಾರೆ. ಕೆಲ ದಿನಗಳ ಬಳಿಕ ವಾಪಾಸ್ ಬರುತ್ತಾರೆ ಎಂಬ ಉಡಾಫೆ ಉತ್ತರವನ್ನು ಪೋಷಕರಿಗೆ ನೀಡಿದ್ದಾರೆ.  ಇದರಿಂದ ಕೆರಳಿದ ಪೋಷಕರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

See also  ದೇಶದ ಏಕತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ದುಡಿದಿದ್ದಾರೆ: ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು