News Kannada

ಮೈಸೂರು

ನಾಪತ್ತೆಯಾಗಿದ್ದ ಬಾಲಕಿಯರು ವರುಣಾ ನಾಲೆಯಲ್ಲಿ ಶವವಾಗಿ ಪತ್ತೆ - 1 min read

ನಾಪತ್ತೆಯಾಗಿದ್ದ ಬಾಲಕಿಯರು ವರುಣಾ ನಾಲೆಯಲ್ಲಿ ಶವವಾಗಿ ಪತ್ತೆ

ಮೈಸೂರು: ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಮೃತದೇಹ ವರುಣಾ ನಾಲೆಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆಂದು ಕುಟುಂಬಸ್ಥರ ಸಂಶಯವಾಗಿದೆ.

Missing girls found dead; Family suspects sexualt assault-1ನಾಲ್ಕು ದಿನಹಿಂದೆಯಷ್ಟೇ ನಾಪತ್ತೆಯಾಗಿದ್ದ ಮೈಸೂರು ತಾಲೂಕಿನ ಬೆಲವತ್ತ ಗ್ರಾಮದ ನಾಗರಾಜ್ ಪುತ್ರಿ ಪೂಜಾ(12) ಮತ್ತು ಪೆರುಮಾಳ್ ಅವರ ಪುತ್ರಿ ಮಾನಸ(12) ವರುಣಾ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲವತ್ತ ಗ್ರಾಮದ ಆರ್ ಬಿಐನ ಇನ್ ಫ್ರೆಂಟ್ ಜೀಸಸ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದ ಬಾಲಕಿಯರು, ನಾಲ್ಕುಯ ದಿನಗಳ ಹಿಂದೆ ಶಾಲೆಗೆ ಹೋದ ಇವರು ಹಿಂದುರುಗಿರಲಿಲ್ಲ. ಈ ಸಂಬಂಧ ಅಂದೆ ಮೇಟಗಳ್ಳಿ ಠಾಣೆಯ ಪೊಲೀಸರಿಗೆ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ನಿನ್ನೆ ಸಂಜೆ ತಾಲೂಕಿನ ಗಳಿಗರಹುಂಡಿ ಗ್ರಾಮದ ವರುಣಾ ನಾಲೆಯಲ್ಲಿ ಪೂಜಾ ಎಂಬ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇಂದು ಸಂಜೆ ಅಲ್ಲೇ ಸಮೀಪದ ಹಂಚ್ಯಾಗ್ರಾಮದ ವರುಣಾ ನಾಲೆಯಲ್ಲಿ ಮಾನಸ ಎಂಬ ಮತ್ತೊಬ್ಬ ಬಾಲಕಿಯ ಮೃತದೇಹವು ಪತ್ತೆಯಾಗಿದೆ. ಇಬ್ಬರು ಬಾಲಕಿಯರ ಮುಖ ಹಾಗೂ ದೇಹದ ಮೇಲೆ ಹಲ್ಲೆ ನಡೆಸಿರುವ ಕುರುಹುಗಳಿದ್ದು, ಅತ್ಯಾಚಾರ ನಡೆಸಿ, ಹತ್ಯೆಗೈದಿರುವ ಶಂಕೆಯನ್ನು ಕುಂಟುಂಬಸ್ಥರು ವ್ಯಕ್ತಪಡಿಸಿದ್ದಾರೆ.

See also  ಜಂಬೂಸವಾರಿಗೊಂದು ಮೆರಗು ಅಶ್ವರೋಹಿ ಪೊಲೀಸ್ ದಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು