ಮೈಸೂರು: ಹತ್ತು ದಿನಗಳಗಳ ಕಾಲ ಬಾಲಕಿಯ ಮೇಲೆ ನಿರಂರತವಾಗಿ ಅತ್ಯಾಚಾರವೆಸಗಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಮಂಡಿ ಪೊಲೀಸ್ ಬಂಧಿಸಿದ್ದಾರೆ.
ಬೆಂಗಳೂರು ನಿವಾಸಿ ಬಾಬು ಎಂಬಾತ ಮಂಡಿ ಮೊಹಲ್ಲಾದ ಅಕ್ಕನ ಮನೆಗೆ ಆಗಿದ್ದಾಂಗೆ ಬಂದು ಹೋಗುತ್ತಿದ್ದ, ಈ ವೇಳೆ ಪಕ್ಕದ ಮನೆಯಲ್ಲಿ ಇದ್ದ ಸಂಬಂಧಿಕರ ಬಾಲಕಿಯನ್ನು ಮಾತಿನಲ್ಲಿ ಮರುಳು ಮಾಡಿ ಪುಸಲಾಯಿಸಿಕೊಂಡು ಕರೆದೊಗಿದ್ದಾನೆ. ನಾನಾ ಕಡೆಗಳಲ್ಲಿ ಆಕೆಯನ್ನು ಕರೆದೊಯ್ದು 10 ದಿನಗಳ ಕಾಲ ನಿರಂತರ ಅತ್ಯಚಾರವೆಸಗಿ ಆಕೆಯನ್ನು ಬೆಂಗಳೂರಿನಲ್ಲಿ ಮೈಸೂರು ಬಸ್ ಹತ್ತಿಸಿ ಬಿಟ್ಟಿದ್ದಾನೆ. ಮೈಸೂರಿಗೆ ಬಂದಿಳಿದ ಬಾಲಕಿ ನೇರವಾಗಿ ಮನೆಗೆ ಬಂದು 10 ದಿನಗಳ ನಿರಂತರ ಅತ್ಯಚಾರದ ಬಗ್ಗೆ ತಿಳಿಸಿದ್ದು, ಈ ಸಂಬಂಧ ಪೋಷಕರು ಮಂಡಿ ಪೊಲೀಸ್ ಠಾಣೆಗೆ ತೆರಳಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಂಡಿ ಪೊಲೀಸರು ಬೆಂಗಳೂರಿನಲ್ಲಿ ಅತ್ಯಾಚಾರ ಆರೋಪಿ ಬಾಬುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.