ಮೈಸೂರು: ಕಳೆದ ಹದಿನೈದು ದಿನಗಳಿಂದ ವಾಯು ಭಾರ ಕುಸಿತದಿಂದ ನಿರಂತರ ಮಹಾಮಳೆಗೆ ಕಂಗಾಲಾಗಿರುವ ತಮಿಳುನಾಡಿನ ಜನತೆಗೆ ಇಲ್ಲಿನ ಡಿಎಫ್ಆರ್ ಎಲ್ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಮಹಾಮಳೆಯಿಂದ ತತ್ತರಿಸಿರುವ ತಮಿಳುನಾಡುನ ಸಂತ್ರಸ್ತ ಜನರ ನೆರವಿಗೆ ನಿಂತಿರುವ ಮೈಸೂರು ಡಿಎಫ್ಆರ್ ಎಲ್ 10 ಸಾವಿರ ಮಂದಿ ಸೇವಿಸಬಹುದಾದ 3.5 ಟನ್ ಆಹಾರ ಸರಬರಾಜು ಮಾಡುವ ಮೈಸೂರಿನ ರಕ್ಷಣಾ ಆಹಾರ ಸಂಶೋದನಾ ಪ್ರಯೋಗಲಯವು ಸುಮಾರು 10 ಸಾವಿರ ಜನಕ್ಕೆ ಆಗುವ ಉಪ್ಪಿಟ್ಟು, ಹಲ್ವ, ಚಪಾತಿ, ವೆಜ್ ಪಲಾವ್, ಬಟಾಣಿ ಪೀಸ್, ಟಮೊಟೊ ರೈಸ್, ಇನ್ಸ್ಟೇಟ್ ಕೀರು ಮುಂತಾದ ಒಂದು ವರ್ಷದವರೆಗೂ ಕೆಡದಂತಹ 3.5 ಟನ್ ಆಹಾರವನ್ನು ತಮಿಳುನಾಡಿನ ಚೆನೈ, ತಿರುಳೂರು ಜಿಲ್ಲೆಗೆ ಸೇರಿದ ಮಿಚ್ಚೂರು, ಎಸ್.ಆರ್ ಪಾಳ್ಯ, ಪೆಲೈಏರಿ, ಸಾಥಂಕುಪ್ಪ, ಸೈದರ್ಪೇಟ್ ಪ್ರದೇಶಗಳ ಜನರಿಗೆ ನೀಡಿದೆ.
3 ಟನ್ ಆಹಾರ ಪದಾರ್ಥಗಳು ತಯಾರಾಗಿ ಸಿದ್ದಗೊಂಡಿವೆ ಕೇಂದ್ರ ಆಹಾರ ಇಲಾಖೆ ಆದೇಶ ಬಂದ ತಕ್ಷಣ ಆಹಾರ ಸರಬರಾಜು ಮಾಡಲು ಮೈಸೂರು ಡಿಎಫ್ಆರ್ ಎಲ್ ಸಿದ್ಧವಾಗಿದೆ ಎಂದು ವಿಜ್ಞಾನಿ ಡಾ. ಇಳೆಯರಾಜ ತಿಳಿಸಿದರು.