ಮೈಸೂರು: ನೆನೆಗುದಿಗೆ ಬಿದ್ದಿದ್ದ ಪ್ರಾಚೀನ ಕೆರೆಯನ್ನು ಹೂಳೆತ್ತೆ 1200 ವರ್ಷದ ಇತಿಹಾಸಕ್ಕೆ ಮತ್ತೆ ಮರುಜೀವ ನೀಡಿ ಇಲ್ಲಿನ ಗ್ರಾಮಸ್ಥರ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
ಪುರಾತನ ಕೆರೆ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಕಲ್ಯಾಣಿಯನ್ನು ಐದೇ ದಿನದಲ್ಲಿ ಹೂಳೆತ್ತಿ ಮತ್ತೆ ಈ ಕೆರೆಯ ಇತಿಹಾಸವನ್ನು ಉಳಿಸಿಕೊಂಡಿದ್ದಾರೆ. ಹಳೆ ಮೈಸೂರು ಪ್ರಾಂತ್ಯವನ್ನು 1200 ವರ್ಷಗಳ ಹಿಂದೆ ಆಳುತ್ತಿದ್ದ ಗಂಗರ ಕಾಲದಲ್ಲಿ ಆಳುತ್ತಿದ್ದ ಸಂದರ್ಭದಲ್ಲಿ ಮೈಸೂರಿನ ಇಂದು ನಗರಕ್ಕೆ ಹೊಂದಿಕೊಂಡಂತಿರುವ ಹಿನಕಲ್ ಗ್ರಾಮದ ಇತಿಹಾಸ ಪ್ರಸಿದ್ಧ ನನ್ನೇಶ್ವರ ದೇವಾಲಯದ ಕಲ್ಯಾಣಿಯನ್ನು ನಿರ್ಮಿಸಲಾಯಿತು. ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಕಲ್ಯಾಣಿಯನ್ನು ಹೊರತು ಪಡಿಸಿದರೇ ಈ ಕಲ್ಯಾಣಿಯೇ ಅತಿ ದೊಡ್ಡ ಕಲ್ಯಾಣಿಯಾಗಿರುವುದು ವಿಶೇಷ.
ಇಂತಹ ಇತಿಹಾಸ ಪ್ರಸಿದ್ಧ ಕಲ್ಯಾಣಿಯಲ್ಲಿ ಉದ್ಭವಿಸುತ್ತಿದ್ದ ಗಂಗೆಯನ್ನು ಮಹಾರಾಜರು ಬಳಸುತ್ತಿದ್ದ ಇತಿಹಾಸದ ಕುರುಹುಗಳಿವೆ. ರಾಜಾಳ್ವಿಕೆಯ ಬಳಿಕ ಹಿನಕಲ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಜಾತ್ರೆ, ಹಬ್ಬದ ಸಂದರ್ಭದಲ್ಲಿ ದೇವರ ಮೂರ್ತಿಯನ್ನು ಶುಚಿಗೊಳಿಸಲು ಹಾಗೂ ಮಡಿಪೂಜೆ ನೇರವೇರಿಸಲು ಈ ಕಲ್ಯಾಣಿಯನ್ನು ಬಳಸುತ್ತಿದ್ದರು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಹಿನಕಲ್ ನ ನನ್ನೇಶ್ವರ ದೇವಾಲಯಕ್ಕೆ ಸೇರಿದ 42 ಎಕರೆ ಭೂಮಿಯು ಒತ್ತುವರಿಯಾಗಿ ಈಗ ಉಳಿದಿರುವುದು ಕೇವಲ ನಾಲ್ಕು ಎಕರೆ ಭೂ ಪ್ರದೇಶ ಮಾತ್ರ. ಅದರಲ್ಲಿ ಒಂದೂ ಭಾಗವನ್ನು ವಶಪಡಿಸಿಕೊಂಡಿರುವ ನಗರಾಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಸಂಸ್ಥೆಯೊಂದಕ್ಕೆ ಭೂಮಿಯನ್ನು ಮಂಜೂರು ಮಾಡಿದೆ. ಅದರಲ್ಲಿ ಮುಚ್ಚಿಕೊಂಡಿರುವ 100*100 ಅಳತೆ ದೇವರ ಕಲ್ಯಾಣಿಯನ್ನು ಮುಡಾ ಶಿಕ್ಷಣ ಸಂಸ್ಥೆ ಹೆಸರಿಗೆ ಮಂಜೂರು ಮಾಡಿದೆ.