News Kannada
Thursday, July 07 2022

ಮೈಸೂರು

ತಮಿಳುನಾಡಿನ ಜಲಪ್ರಳಯದಲ್ಲಿ ಮೈಸೂರು ಟೆಕ್ಕಿ ನಾಪತ್ತೆ - 1 min read

Photo Credit :

ತಮಿಳುನಾಡಿನ ಜಲಪ್ರಳಯದಲ್ಲಿ ಮೈಸೂರು ಟೆಕ್ಕಿ ನಾಪತ್ತೆ

ಮೈಸೂರು: ವರುಣನ ಆರ್ಭಟಕ್ಕೆ ತತ್ತರಿಸಿದ ತಮಿಳುನಾಡಿನಲ್ಲಿ ಮೈಸೂರಿನ ಟೆಕ್ಕಿಯೊಬ್ಬರು ನಾಪತ್ತೆಯಾಗಿದ್ದು, ಕುಟುಂಬದವರು ಕಂಗಲಾಗಿದ್ದಾರೆ.

Mysuru techie goes missing in flood-hit Chennai; said to be trapped in IT firm-1ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಕೆರೆ ನಿವಾಸಿ ರಕ್ಷಣಾ ವೇದಿಕೆ ಅಧ್ಯಕ್ಷೆ ಗಾಯಿತ್ರಿಯವರ ಪುತ್ರ ಸುಧೀಂದ್ರಗೌಡ ನಾಪತ್ತೆಯಾಗಿರುವ ಯುವಕನಾಗಿದ್ದು, ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಸುದೀಂದ್ರಗೌಡ ಹಾಗೂ ಸ್ನೇಹಿತ ಧನುಷ್ ಚೆನೈನ ತಮಿಳ್ ನಗರದಲ್ಲಿರುವ ಡಿಎಲ್ಎಫ್ ಐಟಿ ಪಾರ್ಕ್ ನನಲ್ಲಿ ಕೆಲಸ ಸೇರಿದ್ದರು.  ಆದರೆ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಐಟಿ ಕಂಪನಿ ಸಂಪೂರ್ಣ ಮುಳುಗಿದ್ದು, ಇಲ್ಲಿ ವಿದ್ಯುತ್ ಸಂಪರ್ಕವಿಲ್ಲ ಹಾಗೂ ಯಾವುದೇ ನೆಟ್ ವರ್ಕ್ ಗಳು ಸ್ಥಬ್ಧಗೊಂಡಿದ್ದು, ಐಟಿ ಉದ್ಯೋಗಿಗಳು ಕಚೇರಿಯಲ್ಲಿ ಸಿಲುಕಿಕೊಂಡಿದ್ದಾರೆ. ಅದರಲ್ಲಿ ಧನುಷ್ ಈಜಾಡಿಕೊಂಡು ಪಾರಾಗಿದ್ದು ರಕ್ಷಣ ಪಡೆಯ ಸಹಾಯದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದಾನೆ. ಆದರೆ ಸ್ನೇಹಿತ ಸುಧೀಂದ್ರಗೌಡ ಐಟಿ ಕಂಪನಿಯೊಳಗಡೆ ಇದ್ದಾನೆ ಎಂದು ಕುಟುಂದವರಿಗೆ ತಿಳಿಸಿದ್ದಾನೆ. ಆದರೂ ಕುಟುಂಬ ವರ್ಗದವರಲ್ಲಿ  ಮಗನ ನಾಪತ್ತೆಯಿಂದ ಕಂಗಾಲಾಗಿದ್ದಾರೆ.
 

See also  ಮಂಡ್ಯದಲ್ಲಿ ಸಾವಿನಲ್ಲೂ ಬೆಳಕಾದ ಕಣ್ಣುಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು