ಮೈಸೂರು: ತಮಿಳುನಾಡಿನಲ್ಲಿ ಸುರಿದ ಮಹಾಮಳೆಗೆ ತತ್ತರಿಸಿದ ಜನತೆಗೆ ಮೈಸೂರಿನ ಸಿಎಫ್ ಟಿಆರ್ ಐ ಆಹಾರ ಹಾಗೂ ನೀರನ್ನು ಸರಬರಾಜು ಮಾಡಿ ಸಂತ್ರಸ್ಥ ಜನರಿಗೆ ನೆರವು ನೀಡಿದೆ ಎಂದು ಸಿಎಫ್ಟಿಆರ್ ಐ ನಿರ್ದೇಶಕ ರಾಜಾರಾಮ್ ತಿಳಿಸಿದ್ದಾರೆ.
ಗುರುವಾರ ಮೈಸೂರಿನ ಕೇಂದ್ರೀಯ ಸಂಸ್ಥೆಯಾದ ರಕ್ಷಣಾ ಆಹಾರ ಸಂಶೋದನಾ ಪ್ರಯೋಗಲಯವು ಸುಮಾರು 10 ಸಾವಿರ ಜನಕ್ಕೆ ಆಗುವ ಉಪ್ಪಿಟ್ಟು, ಹಲ್ವ, ಚಪಾತಿ, ವೆಜ್ ಪಲಾವ್, ಬಟಾಣಿ ಪೀಸ್, ಟೊಮೊಟೊ ರೈಸ್ ಮುಂತಾದ ಒಂದು ವರ್ಷದವರೆಗೂ ಕೆಡದಂತಹ 3.5 ಟನ್ ಆಹಾರವನ್ನು ತಮಿಳುನಾಡಿನ ಚೆನೈ, ತಿರುಳೂರು ಜಿಲ್ಲೆಗೆ ಸೇರಿದ ಮಿಚ್ಚೂರು, ಎಸ್.ಆರ್ ಪಾಳ್ಯ, ಪೆಲೈಏರಿ, ಸಾಥಂಕುಪ್ಪ, ಸೈದರ್ಪೇಟ್ ಪ್ರದೇಶಗಳ ಜನರಿಗೆ ನೀಡಿ ಮಾನವೀಯತೆ ಮೆರೆದಿತ್ತು. ಇದರ ಬೆನ್ನೇಲ್ಲೇ ಇಂದು ಮೈಸೂರಿನ ಮತ್ತೊಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಪ್ರಯೋಗಲಾಯ (ಸಿಎಫ್ ಟಿಆರ್ ಐ) ಮೂರು ಹಂತದಲ್ಲಿ 50 ಸಾವಿರ ಮಂದಿಗೆ ಆಗುವಷ್ಟು ರೆಡಿ ಫುಡ್ ಕಳುಹಿಸಲು ಮುಂದಾಗಿದೆ. ಅದರಲ್ಲೂ ರೈಸ್ ಫುಡ್ ಗಳಾದ ಬಿಸಿ ಬೆಳೆಬಾತ್, ಪುಳಿ ಹೊಗರೆ, ಲೈಮ್ ರೈಸ್, ಮಂಡಕ್ಕಿ ಅನ್ನ ಜತೆಗೆ 20 ಸಾವಿರ ಪ್ಯಾಕೆಟ್ ಉಪ್ಪಿನಕಾಯಿಯನ್ನು ಕಳುಹಿಸುತ್ತಿದೆ ಎಂದು ನಿರ್ದೇಶಕ ರಾಜಾರಾಮ್ ತಿಳಿಸಿದರು.