News Kannada
Tuesday, July 05 2022

ಮೈಸೂರು

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಶಾಸಕ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ - 1 min read

Photo Credit :

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಶಾಸಕ: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಮೈಸೂರು: ಮೈಸೂರು ನಗರದ ಕೃಷ್ಣರಾಜ ಕ್ಷೇತ್ರ ಕಾಂಗ್ರೆಸ್ ಶಾಸಕ ಎಂ.ಕೆ. ಸೋಮಶೇಖರ್ ಚುನಾವಣ ಅಯೋಗಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದು, ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಆದರೆ ಇದರ ಸಂಪೂರ್ಣ ವರದಿಯನ್ನು ಹೈಕೋರ್ಟ್ ಗೆ ನೀಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ತಿಳಿಸಿವೆ.


ಕೃಷ್ಣ ರಾಜ ಕ್ಷೇತ್ರ ಕಾಂಗ್ರೆಸ್ ಶಾಸಕ ಎಂ.ಕೆ. ಸೋಮಶೇಖರ್ ಚುನಾವಣ ಅಯೋಗಕ್ಕೆ ನಾನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಡು ಕುರುಬ ಉಪಜಾತಿಗೆ ಸೇರಿದ್ದೇನೆ ಎಂದು ಜಾತಿ ಧೃಢಿಕರಣ ಪತ್ರ ನೀಡಿದ್ದರು. ಈ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ಶಾಸಕ ಸೋಮಶೇಖರ್ ಕಾಡು ಕುರುಬ ಜಾತಿಗೆ ಸೇರಿದ್ದಾರೆಯೇ ಇದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಕಾಡು ಕುರುಬ ಜಾತಿಯ ವಂಶವೃಕ್ಷ, ಆಚಾರ-ವಿಚಾರದ  ಬಗ್ಗೆ ವರದಿ ನೀಡುವಂತೆ ಗಿರಿಜನ ಬುಡಕಟ್ಟು ಸಂಶೋದನಾ ಕೇಂದ್ರಕ್ಕೆ ನಾಲ್ಕು ತಿಂಗಳ ಹಿಂದೆ ಪತ್ರ ಬರೆದಿದ್ದರು. ಆದರೆ ಇದರ ಬಗ್ಗೆ ಕಾಲಾವಕಾಶ ಬೇಕೆಂದು ಕೇಳಿದ್ದ ಬುಡಕಟ್ಟು ಸಂಶೋಧನಾ ಇಲಾಖೆ ಇನ್ನೂ ಈ 2 ತಿಂಗಳ ಕಾಲವಕಾಶ ಕೇಳಿದ್ದು ವರದಿ ಬಂದ ಬಳಿಕ ಹದಿನೈದು ದಿನಗಳ ಒಳಗೆ ತೀರ್ಮಾನ ಕೈಗೊಳ್ಳಲಾಗುವುದು. ಇದರ ಸಂಪೂರ್ಣ ವರದಿಯನ್ನು ಹೈಕೋರ್ಟ್ ಗೆ ನೀಡಲಾಗುವುದು ಎಂದು  ಮೊನ್ನೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.

See also  ಮುಂದುವರೆದ ಮೈಸೂರು ಅಧಿಕಾರಿಗಳ ನಡುವಿನ ಆರೋಪ ಹಾಗೂ ವಾಗ್ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು