ಮೈಸೂರು: ನಗರದ ಲಾಡ್ಜೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ.
ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಪಾರಕ್ಕಡವು ಗರಾಮ ಎಂಬ ಗ್ರಾಮದ ರಾಜು ಬಿನ್ ವೇಲಾಯುಧನ್(42) ವೇಶ್ಯಾವಾಟಿಕೆಯಲ್ಲಿ ತೊಡಗಿ ಬಂಧಿತನಾಗಿರುವ ಆರೋಪಿಯಾಗಿದ್ದು, ನಗರದ ಹೈವೆ ವೃತ್ತದ ರಾಜಲಕ್ಷ್ಮೀ ಕಂಫರ್ಟ್ಸ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಹಾಗೂ ಮಂಡಿ ಠಾಣೆಯ ಪೊಲೀಸರು ಬಾಂಬೆ ಮಹಿಳೆಯನ್ನು ರಕ್ಷಿಸಿದ್ದಾರೆ. ಮುಂಬೈನಿಂದ ಮಹಿಳೆಯನ್ನು ವೇಶ್ಯಾವಾಟಿಕೆಗೆಂದು ಕರೆತರಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ ಬಂಧಿತರಿಂದ ಒಂದು ಮೊಬೈಲ್ ಫೋನ್, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.