ಮೈಸೂರು: ನಗರದಲ್ಲಿ ಬುಂಗೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಏರ್ಪಡಿಸಿದ್ದ ಫಿಯಾನ ಕೇಕ್ ಅಲಂಕರಣಾ ಸ್ಪರ್ಧೆ ಕೇಕ್ ತಯಾರಕರ ಪ್ರತಿಭೆ ಅನಾವರಣ ಮಾಡಿತು.
ದಿನ ನಿತ್ಯ ಬೇಕರಿ ಕೆಲಸದಲ್ಲೇ ತಲ್ಲೀನರಾದ ಕೇಕ್ ತಯಾರಕರಿಗೆ ಹುರುಪು ತುಂಬಿತು. ಅಲ್ಲದೆ ನಿತ್ಯದ ಜಂಜಾಟವನ್ನು ಮರೆತು ವಿನೂತನ ಕೇಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಕಲ್ಪನೆಯ ಕೇಕ್ ಗಳಿಗೆ ಜೀವ ತುಂಬಿದರು.
ಕೇಕ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಟ್ಟು 64 ಸ್ಪರ್ಧೆಗಳು ಮೈಸೂರು ಸೇರಿದಂತೆ ಮಂಡ್ಯ, ಮಡಿಕೇರಿ, ರಾಮನಗರ ಹಾಗೂ ನಂಜನಗೂಡಿನಿಂದ ಕೇಕ್ತಯಾರಕರು ಭಾಗವಹಿಸಿದ್ದರು. ಈ ಪೈಕಿ ಮೈಸೂರಿನ ಕೇಕ್ ಬಜಾರ್ ಬೇಕರಿಗೆ 32 ಇಂಚಿನ ಎಲ್ಇಡಿ ಟಿವಿಯನ್ನು ಪ್ರಥಮ ಬಹುಮಾನ, ಅರಸ್ ಕೇಕ್ ಶಾಪ್ ಗೆ 28 ಇಂಚಿನ ಎಲ್ಇಡಿ ಟಿವಿಯನ್ನು ದ್ವಿತೀಯ ಬಹುಮಾನವಾಗಿ ಹಾಗೂ ಸ್ವೀಟ್ ಸಾಗರ್ ಬೇಕರಿಗೆ ಐ ಬಾಲ್ ಕಂಪೆನಿಯ ಟ್ಯಾಬ್ಲೆಟ್ ಮೊಬೈಲನ್ನು ತೃತೀಯ ಬಹುಮಾನ ಹಾಗೂ ಎಂಟು ಸಮಾಧಾನಕರ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಬುಂಗೆ ಇಂಡಿಯಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಲೆನ್ ರೋಡ್ರಿಗಸ್, ರಾಷ್ಟೀಯ ವ್ಯವಸ್ಥಾಪಕ ಸ್ಟೀಫನ್ ಲೋಬೋ, ಸಹಾಯಕ ಮಾರುಕಟ್ಟೆ ವ್ಯವಸ್ಥಾಪಕ ಪಾಲಚಂದರ್, ಮೈಸೂರು ಬ್ರಾಂಚ್ ವ್ಯವಸ್ಥಾಪಕ ಪ್ರಸನ್ನ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.