ಮೈಸೂರು: ಕರ್ತವ್ಯ ಲೋಪ ಹಾಗೂ ಏಕಪಕ್ಷೀಯ ತೀರ್ಮಾನದ ಅನ್ವಯ ಮೈಸೂರಿನ ಕೆ.ಆರ್ ಠಾಣೆಯ ಇನ್ಸ್ ಪೆಕ್ಟರ್ ಕೆ.ರಾಜೇಂದ್ರ ಅವರನ್ನು ಅಮಾನತುಗೊಳಿಸಲು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಾಲಾಬೀದಿಯ ಸರಸ್ವತಿ ಎಂಬುವವರು ತಮ್ಮ ಮನೆಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೆಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಾಗ ದೂರು ಸ್ವೀಕರಿಸದೇ ಅಸಹಕಾರ ತೋರಿ ಅಲ್ಲದೆ ನ್ಯಾಯಾಲಯದ ಆದೇಶವಿಲ್ಲದೆ ಮಹಿಳೆಯ ಮನೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ತನಗಾದ ಅನ್ಯಾಯದ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಇನ್ಸ್ ಪೆಕ್ಟರ್ ರಾಜೇಂದ್ರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಮೈಸೂರಿನ ಇನ್ಸ್ ಪೆಕ್ಟರ್ ಕೆ.ರಾಜೇಂದ್ರ ಅವರನ್ನು ಅಮಾನತುಗೊಳಿಸಲು ಆಯುಕ್ತರು ಆದೇಶಿಸಿದ್ದಾರೆ.