News Kannada
Friday, July 01 2022

ಮೈಸೂರು

ಸುಳ್ಳು ಪ್ರಮಾಣ ಪತ್ರ ಪ್ರಕರಣ: ಆಯುಕ್ತರ ಮೇಲೆ ನ್ಯಾಯಲಯ ಕ್ರಿಮಿನಲ್ ಧಾವೆ - 1 min read

Photo Credit :

ಸುಳ್ಳು ಪ್ರಮಾಣ ಪತ್ರ ಪ್ರಕರಣ: ಆಯುಕ್ತರ ಮೇಲೆ ನ್ಯಾಯಲಯ ಕ್ರಿಮಿನಲ್ ಧಾವೆ

ಮೈಸೂರು: ಸುಳ್ಳು ಪ್ರಮಾಣಪತ್ರ ನೀಡಿದ ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರ ಮೇಲೆ ನ್ಯಾಯಲಯವು ಕ್ರಿಮಿನಲ್ ಧಾವೆ ದಾಖಲಿಸಿದ್ದು, ಆರೋಪಿಗಳು ತಪ್ಪಿತಸ್ಥರೆಂದು ರುಜುವಾತಾಗಿದ್ದು, ಏಳು ವರ್ಷ ಸೆರೆವಾಸ ಶಿಕ್ಷೆ ಆಗಲಿದೆ ಎಂದು ನ್ಯಾಯಲಯ ತಿಳಿಸಿದೆ.

IAS officer booked for fraud in land dealing-11988 ಅಂದಿನ ನಗರಾಭಿವೃದ್ಧಿ ಪ್ರಾಧಿಕಾರವು ಆರೋಗ್ಯ ಯೋಗ ಸಂಸ್ಥೆ ಎಂಬ ಸೇವಾಸಂಸ್ಥೆಗೆ ರಾಮಕೃಷ್ಣ ನಗರದ ಹತ್ತಿರ 1.5 ಎಕರೆಯನ್ನು ಕ್ರಯಕ್ಕೆ ನೀಡಿತ್ತು. ಇದರ ಬಗ್ಗೆ 2003 ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಇದನ್ನು ಕ್ರಯಕ್ಕೆ ನೀಡಿದ್ದು, ಸರಿಯಲ್ಲ ಎಂದು ದಾವೆ ಹೂಡಿತ್ತು. ಈ ಪ್ರಕರಣ 2011ರಲ್ಲಿ ತೀರ್ಮಾನವಾಗಿ ಆರೋಗ್ಯ ಯೋಗ ಸಂಸ್ಥೆಗೆ ನೀಡಿದ್ದ ಭೂಮಿ ಸರಿಯಾಗಿದೆ ಎಂದು ಆರೋಗ್ಯ ಯೋಗ ಸೇವಾ ಸಂಸ್ಥೆ ಪರವಾಗಿ ಕೋರ್ಟ್ ತೀರ್ಪು ನೀಡಿತ್ತು. ಈ ಸಂದರ್ಭದಲ್ಲಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಬೆಟ್ಸೂರು ಮಠ ಹಾಗೂ ಅಂದಿನ ವಲಯ ಅಧಿಕಾರಿ ಆಗಿದ್ದ ಎಸ್.ಕೆ ಗುರುಪಾದಸ್ವಾಮಿ ಅವರು ಈ ಭೂಮಿಗೆ ಸಂಬಂಧಿಸಿದ ಕ್ರಯಪತ್ರರವನ್ನು ಗುತ್ತಿಗೆ ಕರಾರು ಪತ್ರವೆಂದು ಬದಲಾಯಿಸಿ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.

ಇದರ ಬಗ್ಗೆ ಮೈಸೂರಿನ ಒಂದನೇ ಜೆಎಂಎಫ್ಸಿ ನ್ಯಾಯಾಲಯವು ಪರಿಶೀಲನೆ ನಡೆಸಿ ಆಯುಕ್ತರು ನೀಡಿರುವ ಪ್ರಮಾಣ ಪತ್ರ ಸುಳ್ಳು ಎಂದು ರುಜುವಾತಾದ ಹಿನ್ನಲೆಯಲ್ಲಿ ಇದೇ ತಿಂಗಳ 2.12.2015 ರಲ್ಲಿ ಮೈಸೂರಿನ ಅಧಿಕ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆಡಳಿತಾಧಿಕಾರಿ ಪರಮೇಶ್ ಮೂರ್ತಿ ಡಾ. ಬೆಟಸೂರು ಮಠ, ಎಸ್.ಕೆ ಗುರುಪಾದಸ್ವಾಮಿ ಅವರ ಮೇಲೆ ಕ್ರಿಮಿನಲ್ ಧಾವೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಂಡು 16.01.2016 ರಂದು ಇವರನ್ನು ನ್ಯಾಯಾಲಯಕ್ಕೆ ಕರೆತರುವಂತೆ ಪೊಲೀಸರಿಗೆ ತಿಳಿಸಿದೆ.  ಈ ಪ್ರಕರಣವನ್ನು ವಾದ ಮಾಡಿದ ಆರೋಗ್ಯ ಯೋಗ ಸೇವಾಸಂಸ್ಥೆಯ ಎಸ್.ಪಿ. ಯೋಗಣ್ಣ  ಇದರ ಸಂಪೂರ್ಣ ಮಾಹಿತಿಯನ್ನು ನೀಡಿ ಈ ಪ್ರಕರಣದಲ್ಲಿ ಆಯುಕ್ತರಾದ ಡಾ. ಬಿಜೆ. ಬೆಟಸೂರು ಮಠ ಮತ್ತು ಎಸ್.ಕೆ ಗುರುಪಾದಸ್ವಾಮಿ ತಪ್ಪಿತಸ್ಥರೆಂದು ರುಜುವಾತಾಗಿದ್ದು, 7 ವರ್ಷ ಸೆರೆವಾಸ ಶಿಕ್ಷೆ ಆಗಲಿದೆ ಎಂದು ತಿಳಿಸಿದರು.

                                                                                  

See also  ಮೈಸೂರಿಗಿದ್ದ ಪ್ರವಾಸಿಗರ ನಿರ್ಬಂಧ ಹಿಂದಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು