ಮೈಸೂರು: ಬಿಎಂಟಿಸಿಯಲ್ಲಿ ಕೆಲಸ ಕೊಡಿಸುತ್ತೇವೆಂದು ಫೋನ್ ಕಾಲ್ ಮೂಲಕ ಯುವಕರನ್ನು ಕರೆಸಿಕೊಂಡು ನಕಲಿ ನೇಮಕಾತಿ ಪತ್ರಗಳನ್ನು ನೀಡಿ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಮೈಸೂರಿನ ನರಸಿಂಹರಾಜ ಪೊಲೀಸರು ಭೇಧಿಸಿದ್ದಾರೆ.
ಈ ಜಾಲದ ಮಾಸ್ಟರ್ ಮೈಂಡ್ ಪುಷ್ಪಾಲತ ಎಂದು ತಿಳಿದು ಬಂದಿದ್ದು ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ಬಿಎಂಟಿಸಿಯಲ್ಲಿ ನೇರ ನೇಮಕಾತಿ ನಡೆಯುತ್ತಿದೆ. ತನಗೆ ಬಿಎಂಟಿಸಿಯ ಹಲವು ಹಿರಿಯ ಅಧಿಕಾರಿಗಳ ಪರಿಚಯವಿದೆ. ನಿಮಗೆ ನೇರವಾಗಿ ನೇಮಕಾತಿ ಮಾಡಿಸುತ್ತೇನೆ ಎಂದು ಯುವಕರಿಗೆ ಕಾಲ್ ಮಾಡಿ ಆಸೆ ಹುಟ್ಟಿಸಿದ್ದಾರೆ. ಇವರ ಬಲೆಗೆ ಬಿದ್ದ 30 ಕ್ಕೂ ಹೆಚ್ಚು ಯುವಕರನ್ನು ಅವರಿಗೆ ನಂಬಿಕೆ ಬರಲೆಂದು ಕೆಎಸ್ಆರ್ ಟಿಸಿ ಬಸ್ ನಲ್ಲೇ ಬೆಂಗಳೂರಿನಿಂದ ಮೈಸೂರಿನ ಹೋಟೆಲ್ ವೊಂದಕ್ಕೆ ಕರೆದೊಯ್ದು ಅಲ್ಲಿ ನಕಲಿ ನೇಮಕಾತಿಯ ಪತ್ರಗಳನ್ನು ನೀಡಿದ್ದಾರೆ. ಕೊನೆಗೆ ಅವುಗಳನ್ನು ಯುವಕರು ನಂಬಿ ತಲಾ ಒಬ್ಬೊಬ್ಬ ಯುವಕ 60 ಸಾವಿರ ಹಣವನ್ನು ನೀಡಿ ವಂಚನೆಗೆ ಒಳಗಾಗಿದ್ದಾರೆ.
ಇದೇ ರೀತಿ ಮತ್ತೊಂದು ಯುವಕರ ಗುಂಪನ್ನು ಟಾರ್ಗೆಟ್ ಮಾಡಿದ ಜಾಲದಲ್ಲಿ ಮೈಸೂರಿನ ಸೋಮಣ್ಣ ಎಂಬುವವರು ಈ ಜಾಲಾಕ್ಕೆ ಸಿಲುಕಿದ್ದಾರೆ. ಕೊನೆಗೆ ಅವರನ್ನು ಸಹ ಬೆಂಗಳೂರಿನ ಹೋಟೆಲ್ವೊಂದಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ಯಾವುದೇ ಸಂದರ್ಶನವಿಲ್ಲದೆ ನೇರ ನೇಮಕಾತಿ ಮೂಲಕ ತಾವು ಬಿಎಂಟಿಸಿ ನೌಕರಿ ಪಡೆಯುತ್ತಿರುವುದಾಗಿ ಸ್ನೇಹಿತ ಮಹೇಂದ್ರ ಅವರ ಬಳಿ ಹೇಳಿಕೊಂಡಿದ್ದಾರೆ. ಮಹೇಂದ್ರ ಅವರಿಗೆ ಈ ಜಾಲದ ಬಗ್ಗೆ ಅನುಮಾನ ಬಂದು ಮೈಸೂರಿನ ನರಸಿಂಹ ರಾಜ ಪೊಲೀಸ್ ಠಾಣೆಗೆ ಹಾಗೂ ಕೆಎಸ್ಆರ್ ಟಿಸಿ ಜಾಗೃತ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಏಕಾಎಕಿ ನರಸಿಂಹರಾಜ ಠಾಣೆಯ ಪೊಲೀಸರು ಜಾಲವನ್ನು ಬೇಧಿಸಿದ್ದಾರೆ. ಈ ಜಾಲದ ಮಾಸ್ಟರ್ ಮೈಂಡ್ ಪುಷ್ಪಾಲತ ಎಂದು ತಿಳಿದು ಬಂದಿದ್ದು ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ಆದರೆ ವಂಚಕ ಜಾಲದ ಕಿಂಗ್ಪಿನ್ ಪುಷ್ಪಲತಾ ವಿಚಾರಣೆ ನಡೆಸಿದ ಬಳಿಕವಷ್ಟೇ ಈ ಜಾಲದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ. ಅಲ್ಲದೆ ಇಲ್ಲಿ ಮೋಸ ಹೋಗಿರುವ ಯುವಕರು ಎಷ್ಟು ಎಂದು ತಿಳಿಯಲಿದೆ ಎಂದು ನರಸಿಂಹರಾಜ ಠಾಣೆಯ ಪೊಲೀಸರು ತಿಳಿಸಿದ್ದಾರೆ.