News Kannada

ಮೈಸೂರು

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ: ಅಯೂಬ್ ಖಾನ್ - 1 min read

ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ: ಅಯೂಬ್ ಖಾನ್

ಮೈಸೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಒಲೈಕೆ ಮಾಡಲು ಮತದಾರರಿಗೆ ಚಿನ್ನ ಲೇಪಿತ ಪದಕಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಎಂಎಲ್ಸಿ ಚುನಾವಣೆ ಪಕ್ಷೇತರ ಅಭ್ಯರ್ಥಿ ಅಯೂಬ್ ಖಾನ್, ತಾನು ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ. ಇದೆಲ್ಲ ಪಿತೂರಿ ಎಂದು ಸ್ಪಷ್ಟಿಕರಣ ನೀಡಿದ್ದಾರೆ.

Independent MLC candidate cries foul play over false allegations-1ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ಮುನ್ನವೇ ಗ್ರಾ.ಪಂ.ಸದಸ್ಯರನ್ನು ಭೇಟಿ ನೀಡಿ, ಗ್ರಾಮಜ್ಯೋತಿ ಮತ್ತು ಸ್ವರ್ಣ ಲೇಪಿತ ಪದಕಗಳನ್ನು ನೀಡಿದ್ದ ಆದರೆ, ಇದನ್ನು ನಾರಾಯಣ್ ಸಿಂಗ್ ಎಂಬ ಪೋಸ್ಟ್ ಮಾಸ್ಟರ್ ಮೂಲಕ ಚುನಾವಣೆ ಸಂದರ್ಭದಲ್ಲಿ ವಿತರಣೆ ಮಾಡಿ, ಕೆಲ ರಾಜಕೀಯ ಮುಖಂಡರು ತನ್ನ ವಿರುದ್ಧ ಪಿತ್ತೂರಿ ಮಾಡುತ್ತಿದ್ದಾರೆ. ಪೋಸ್ಟ್ ಮಾಸ್ಟರ್ ವಿರುದ್ಧ ದೂರು ಸಲ್ಲಿಸಿದ್ದೇನೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಈ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ. ನ.23ರಂದು ವಿಧಾನ ಪರಿಷತ್ ಚುನಾವಣೆಯ ಅಧಿಸೂಚನೆ ಹೊರಬಿತ್ತು. ಆದರೆ. ರಾಜ್ಯ ಸರ್ಕಾರ ನ.25ರಲ್ಲಿ ಚಳಿಗಾಳ ಅಧಿವೇಶನದಲ್ಲಿ ಗ್ರಾ.ಪಂ.ಸದಸ್ಯರನ್ನು ಸೆಳೆಯಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ 5 ವರ್ಷಗಳ ಆಡಳಿತ ಹಾಗೂ ಕ್ಯಾಬಿನೇಟ್ ದರ್ಜೆಯ ಅಧಿಕಾರ ನೀಡುವುದಾಗಿ ಆದೇಶ ಹೊರಡಿಸಲು ಸಿದ್ದತೆ ಕೈಗೊಂಡಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
 

 

See also  ಮೈಸೂರು ವಿವಿ ಶುಲ್ಕ ಹೆಚ್ಚಳ: ವಿದ್ಯಾರ್ಥಿಗಳ ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು