ಮೈಸೂರು: ಅತ್ತೆ, ಮೈದುನ, ನಾದಿನಿಯಿಂದ ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ಕೋರ್ಟ್ ಆದೇಶ ಹಿಡಿದು ಮಹಿಳೆ ಪತಿಗಾಗಿ ಪತಿ ಮನೆಮುಂದೆ ಪ್ರತಿಭಟಿಸುತ್ತಿದ್ದರು ಸ್ಥಳಕ್ಕೆ ಬಾರದ ಮಂಡಿ ಠಾಣೆಯ ಪೊಲೀಸರಿಗೆ ಮಹಿಳಾ ಆಯೋಗದ ಅಧ್ಯಕ್ಷರು ನೋಟಿಸ್ ನೀಡುವುದಾಗಿ ಹೇಳಿದ್ದಾರೆ.
ಮೈಸೂರಿನ ಬಂಬೂ ಬಜಾರ್ನ ಮೇದರ ಬ್ಲಾಕ್ ನಲ್ಲಿ ಅತ್ತೆ, ಮೈದುನ, ನಾದಿನಿಯಿಂದ ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ಪತಿ ಪುರುಷೋತ್ತಮ್ ಗಾಗಿ ಪತ್ನಿ ಮಂಜುಶ್ರೀ ಕೋರ್ಟ್ ಮೊರೆ ಹೊಗಿದ್ದರು. ಕೊನೆಗೆ ಕೋರ್ಟ್ ಸಹ ಪತಿಯೊಟ್ಟಿಗೆ ಬಾಳಲು ಆದೇಶಿಸಿತ್ತು ಅದರಂತೆ ಪತ್ನಿ ಆದೇಶ ಹಿಡಿದು ನರಗ ಪೊಲೀಸ್ ಆಯುಕ್ತರ ಕಚೇರಿ, ಎಸಿಪಿ ಉಮೇಶ್, ಮಂಡಿ ಠಾಣೆಗೂ ಸಹ ತೆರಳಿ ಗಂಡನೊಟ್ಟಿಗೆ ಬಾಳಲು ಅವಕಾಶ ಮಾಡಿಕೊಟ್ಟು ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು. ಕೊನೆಗೆ ಎಲ್ಲಿಯೂ ಸಹ ತನಗೆ ನ್ಯಾಯ ಸಿಗದಿದ್ದಾಗ ಪತಿಯ ಮನೆಯ ಎದುರೇ ಧರಣಿ ಕುಳಿತಿದ್ದರು.
ಪತಿಯ ಮನೆ ಮುಂದೆ ಧರಣಿ ಕುಳಿತಿದ್ದ ಪತ್ನಿ ಮಂಜುಶ್ರೀಯನ್ನು ಭೇಟಿ ಮಾಡಲು ಬಂದ ರಾಜ್ಯ ಮಹಿಳಾ ಆಯೋಗದ ಅದ್ಯಕ್ಷರು ಸ್ಥಳದಲ್ಲಿ ಆ ವ್ಯಾಪ್ತಿಯ ಮಂಡಿ ಠಾಣೆಯ ಒಬ್ಬರು ಪೊಲೀಸರು ಇಲ್ಲದಿರುವುದನ್ನು ನೋಡಿ ಗರಂ ಆದರೂ, ಅಲ್ಲದೆ ತಾವೇ ಬಂದಿರುವುದಾಗಿ ದೂರವಾಣಿ ಮೂಲಕ ಕರೆ ಮಾಡಿದರೂ ಸಹ ಖ್ಯಾರೆ ಎನ್ನದ ಪೊಲೀಸರು ಅರ್ಧ ತಾಸು ತಡವಾಗಿ ಬಂದರು. ಈ ಹಿನ್ನಲೆಯಲ್ಲಿ ಮಹಿಳೆಗೆ ಸಾಂತ್ವನ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಪ್ರಕರಣದಲ್ಲಿ ಕೋರ್ಟ್ ಆದೇಶವನ್ನು ಪಾಲಿಸದೇ ನ್ಯಾಯಾಂಗಕ್ಕೆ ನಿಂದನೆ ಮಾಡಿದ ಅಡಿಯಲ್ಲಿ ವಿವರಣೆ ಕೋರಿ ಮಂಡಿ ಠಾಣೆಯ ಪೊಲೀಸರಿಗೆ ನೋಟಿಸ್ ನೀಡಲಾಗುವುದು ಎಂದರು.